ಚಿಂತನ-ಮಂಥನ-ವಿಚಾರಗೋಷ್ಠಿ 

ಚಿಂತನ-ಮಂಥನ-ವಿಚಾರಗೋಷ್ಠಿ 

ವಿಜಯಪುರ,ಅ.7: ವಿಜಯಪುರ ಜಿಲ್ಲಾ ಅಲ್ಪಸಂಖ್ಯಾತ (ಮುಸ್ಲಿಂ) ಸಹಯೋಗದಲ್ಲಿ ಮುಸ್ಲಿಂ ಪ್ರಚಲಿತ ಸಮಸ್ಯೆಗಳು ಪರಿಹಾರಗಳು ಮತ್ತು ಸಂಘಟನೆ ಕುರಿತು ಚಿಂತನ ಮಂಥನ-ವಿಚಾರಗೋಷ್ಠಿ ಕಾರ್ಯಕ್ರಮ ರವಿವಾರ ದಿನಾಂಕ 8-10-2017 ರಂದು 11-00 ಗಂಎಗೆ ಕಂದಗಲ್ ಶ್ರೀ ಹನಮಂತರಾಯ ರಂಗ ಮಂದಿರದಲ್ಲಿ ಜರುಗಲಿದೆ. 
ಉದ್ಘಾಟನೆಯನ್ನು ನಗರ ಶಾಸಕರು ಹಾಗೂ ಸಂಸದೀಯ ಕಾರ್ಯದರ್ಶಿಗಳಾದ ಡಾ. ಮಕ್ಬೂಲ ಬಾಗವಾನ ವಹಿಸುವರು. ಅಧ್ಯಕ್ಷತೆಯನ್ನು ಹಿರಿಯ ನ್ಯಾಯವಾದಿ ಎಸ್.ಎಸ್. ಜಹಾಗೀರದಾರ, ಮುಖ್ಯ ಅತಿಥಿಗಳಾಗಿ ರಾಷ್ಟ್ರ ಪ್ರಶಸ್ತಿ ಪುರಸ್ಕøತ ಡಾ. ಜಾವೀದ ಜಮಾದಾರ, ನಗರಾಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಆಜಾದ ಪಟೇಲ, ಮಾಜಿ ಮಹಾಪೌರ ಸಜ್ಜಾದೆ ಮುಶ್ರೀಫ, ಜೆ.ಡಿ.ಎಸ್. ಕಾಯಾಧ್ಯಕ್ಷ ದಿಲಾವರ ಖಾಜಿ, ಹಿರಿಯ ನ್ಯಾಯವಾದಿ ಸಿ.ಎಸ್. ಇನಾಮದಾರ, ಗ್ರಾ.ಪಂ. ಅಧ್ಯಕ್ಷ ಪೀರಪಟೇಲ ಪಾಟೀಲ, ಉಪನ್ಯಾಸಕರಾಗಿ ಹಿರಿಯ ನ್ಯಾಯವಾದಿ ಬಶೀರುಜಮಾ ಲಾಹೋರಿ, ಅಗ್ನಿಸ್ಪೋಟ ಪತ್ರಿಕೆ ಸಂಪಾದಕ ದಾವಲ ಘೋರ್ಪಡೆ, ಮಾನವ ಹಕ್ಕುಗಳ ಕಲ್ಯಾಣ ಮಂಡಳಿ ಅಧ್ಯಕ್ಷರು ಹಾಸಿಂಪೀರ ವಾಲಿಕಾರ ಭಾಗವಹಿಸಲಿದ್ದಾರೆ. ವಿಶೇಷ ಸನ್ಮಾನಿತರಾಗಿ  ಅಂಜುಮನ್ ಪದವಿ ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯ ಡಾ. ಆರ್.ಎ. ಪಠಾಣ, ವಿಶ್ರಾಂತ ಪ್ರಾಚಾರ್ಯರು ಪ್ರೊ. ಅಬ್ದುಲಸತ್ತಾರ, ಸೌಥ ಅಮೆರಿಕಾ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ಪುರಸ್ಕøತರು ಅನೀಸಅಹ್ಮದ ಶೇಖ, 2017-18 ರ ಉತ್ತಮ ಉಪನ್ಯಾಸಕ ಪ್ರಶ್ತಿ ಪುರಸ್ಕøತ ಅಬ್ದುಲರಜಾಕ ಎಲ್. ನಾಗೂರ  ಇವರನ್ನು ಸನ್ಮಾನಿಸಲಾಗುವುದು ಎಂದು ಹಾಸಿಂಪೀರ ವಾಲಿಕಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.