ಸುನಗದಲ್ಲಿ ಗ್ರಾಮದೇವತಾ ಜಾತ್ರಾ ಮಹೋತ್ಸವ

ಸುನಗದಲ್ಲಿ ಗ್ರಾಮದೇವತಾ ಜಾತ್ರಾ ಮಹೋತ್ಸವ

ಬಾಗಲಕೋಟ,ನ.10: ಜಿಲ್ಲೆಯ ಬೀಳಗಿ ತಾಲೂಕ  ಸುಕ್ಷೇತ್ರ ಸುನಗ ಗ್ರಾಮದ ಗ್ರಾಮದೇವತಾ ಜಾತ್ರಾ ಮಹೋತ್ಸವವು ಪ್ರತಿ ಮೂರು ವರ್ಷಗಳಿಗೊಮ್ಮೆ ಅತೀ ವಿಜೃಂಭಣೆಯಿಂದ ಜರುಗುವಂತೆ ಈ ವರ್ಷವೂ ದಿ.12 ರಿಂದ 24ರವರೆಗೆ ವೈಭವಯುತವಾಗಿ ನೆರವೇರುತ್ತದೆ.
ಈ ಜಾತ್ರಾ ಮಹೋತ್ಸವದಂಗವಾಗಿ ವಿವಿಧ ಕಾರ್ಯಕ್ರಮಗಳು ಜರುಗುತ್ತಿದ್ದು, ದಿನಾಂಕ 20/11/2017 ಸೋಮವಾರದಂದು ಬೆಳಿಗ್ಗೆ 10.00 ಗಂಟೆಗೆ ಗ್ರಾಮದ ದೇವಾಲಯಗಳ ಕಳಸಾರೋಹಣವು ಪ್ರಸಿದ್ದ ಮಜಲುಗಳೊಂದಿಗೆ ನೆರವೇರುವದು ಮತ್ತು ಅದೇ ದಿನ ರಾತ್ರಿ 10.00ಗಂಟೆಗೆ ಸುಪ್ರಸಿದ್ಧ ಡೊಳ್ಳಿನ ಪದ ಬಾಬಾನಗರ ಹಾಗೂ ಶಿವಣಗಿ ಗಾಯನ ಸಂಘಗಳಿಂದ ಭರ್ಜರಿ ತುರುಸಿನಿಂದ ನಡೆಯುತ್ತವೆ. ಮರುದಿನ ಮಂಗಳವಾರ ಶುಭಮುಹೂರ್ತದಂದು ಬೆಳಿಗ್ಗೆ 7.00ಗಂಟೆಯಿಂದ 9.00ಗಂಟೆಯವರೆಗೆ 
ಶ್ರೀಮಹಾರುದರಾಭಿಷೇಕ ಜರುಗುವದು. ಸುನಗ ಗ್ರಾಮದ ಡೊಳ್ಳು ಮತ್ತು ಬ್ಯಾಂಡ, ಸೋಮನಕೊಪ್ಪದ ಮಹಿಳಾ ಸಂಘದ ಡೊಳ್ಳು ಕುಣಿತ, ಸೊನ್ನದ ಮಜಾಲಸಿ ಹಾಗೂ ಬೇರೆ ಬೇರೆ ಊರುಗಳ ಡೊಳ್ಳಿನ ತಂಡಗಳ ವಾದ್ಯ ವೈಭವಗಳೊಂದಿಗೆ ದೇವತೆಗಳ ಉಡಿತುಂಬುವ ಕಾರ್ಯಕ್ರಮ ನಡೆಯುವದು. ಅಂದು ಸಾಯಂಕಾಲ 5.00ಗಂಟೆಗೆ 55 ಕೆಜಿ ಕಬಡ್ಡಿ ಪಂದ್ಯಾವಳಿ ಮತ್ತು ರಾತ್ರಿ 10.00ಗಂಟೆಗೆ
ಶ್ರೀ ಗ್ರಾಮದೇವತಾ ನಾಟ್ಯ ಸಂಘದಿಂದ ಕಂಗೆಟ್ಟ ರೈತ ಹುಲಿ ಸುಂದರ ಸಾಮಾಜಿಕ ನಾಟಕ ಅಭಿನಯಿಸಲ್ಪಡುವದು.
  ಬುಧವಾರ ದಿನಾಂಕ :22/11/2017ರಂದು ಮುಂಜಾನೆ 8.00ಗಂಟೆಯಿಂದ  ಸಾಯಂಕಾಲದವರೆಗೆ ಎತ್ತಿನ ಗಾಡಿ ಓಡಿಸುವ ಸ್ಪರ್ಧೆ, ಮುಂಗೈ ಮೇಲೆ ಚೀಲ ಎತ್ತುವದು, 1ಕ್ವೀಂಟಲ್ 50 ಕೆಜಿ ಚೀಲ ಬಂಡಿಗಾಲಿಯ ಮೇಲೆ ದೀಡ ನಮಸ್ಕಾರ ಹಾಕುವದು, ಮತ್ತು ಇಳಿಹೊತ್ತು 3.00ಗಂಟೆಗೆ ತುಳಸಗಿರಿಯ ಸರಕಾರಿ ಪ್ರಾಥಮಿಕ/ಪ್ರೌಢ ಶಾÀಲಾ ವಿದ್ಯಾರ್ಥಿಗಳಿಂದ ಮೈಮನ ನವಿರೇಳಿಸುವ ರೋಮಾಂಚನಕಾರಿ ಮಲ್ಲಕಂಭ ಪ್ರದರ್ಶನ ನೋಡಿಯೇ ಅನುಭವಿಸಬೇಕು. ಈ ಎಲ್ಲ ಜಯಶಾಲಿ ಸ್ಪರ್ಧಾಳುಗಳಿಗೆ ಮತ್ತು
ಪ್ರದರ್ಶನ ನೀಡಿದವರಿಗೆ ಆಕರ್ಷಕ ಬಹುಮಾನ ನೀಡಿ ಗೌರವಿಸಲಾಗುವದು. ಅದೇ ದಿನ ರಾತ್ರಿ 10.00ಗಂಟೆಗೆ ಶ್ರೀ ಗ್ರಾಮದೇವಿ ನಾಟ್ಯ ಸಂಘದವರಿಂದ “ಭಂಡ ಧನಿಕರಿಗೆ ಪುಂಡ ಬಡವ” ಸಾಮಾಜಕ ನಾಟಕ ನಡೆಯುತ್ತದೆ.
   ದಿನಾಂಕ 23/11/2017 ಗುರುವಾರ ಮುಂಜಾನೆ 8.00ಗಂಟೆಯಿಂದ ಸಾಯಂಕಾಲದವರೆಗೆ ಬಾಕ್ ಹ್ಯಾಂಡಲ್ ರೇಸ್ ಸ್ಪರ್ದೆ ಮೊಣಕಾಲದಿಂದ ಚೀಲೊಗೆಯುವದು, ಟಗರಿನ ಕಾಳಗ, ಕ್ವಿಂಟಲ್ ಚೀಲ ಬೆನ್ನಿಗೆ ಕಟ್ಟಿಕೊಂಡು ಲಗಾಹೊಡೆಯುವುದು,50 ಕೆಜಿ ಚೀಲಹೊತ್ತು ಓಡುವದು,ಪ್ರಥಮ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವರಿಗೆ ಪ್ರೊತ್ಶಾಹದಾಯಕ ಬಹುಮಾನ ಕೊಟ್ಟು ಗೌರವಿಸಲಾಗತ್ತದೆ. ಇಂದು ರಾತ್ರಿ ಭದ್ರಾವತಿ ಚೀಟ್ಸ್ ತಂಡದವರಿಂದ ರಸಮಂಜರಿ ಕಾರ್ಯಕ್ರಮ ನೀಡಿ ರಂಜಿಸಲಿದ್ದಾರೆ.
ಕೊನೆಯ ದಿನ 24/11/2017 ಶುಕ್ರವಾರದಂದು ದಿಂಡಿನ ರೇಸ್ ಸಂಗ್ರಾಣಿ ಕಲ್ಲು ಎತ್ತುವುದು,ಕಲ್ಲು ಗುಂಡು ಎತ್ತುವುದು ಮತ್ತು ಮುಕ್ತ ಪಗಡಿ ಪಂದ್ಯಾವಳಿಗಳಲ್ಲಿವಿ   ಜೇತರಾದವರಿಗೆ ಅದ್ಭುತ ಮೌಲ್ಯಯುತ ಬಹುಮಾನಗಳನ್ನು ಇಡಲಾಗಿದೆ.ಇದರೊಂದಿಗೆ 
ಟೆನೀಸ್ ಬಾಲ್ ಕ್ರಿಕೇಟ್,ವಾಲಿಬಾಲ್,ರಂಗೋಲಿ,ಮತ್ತು ಆಶುಭಾಷಣ ಸ್ಪರ್ಧೆಗಳ ವಿಜೇತರಿಗೆ ಸೂಕ್ತ ಹಾಗೂ ಸಮಾಧಾನಕರ ಬಹುಮಾನ ಕೊಡಲಾಗುವದು.ಇದೇ ದಿನ ರಾತ್ರಿ ಕೊಣ್ಣೂರಿನ ಜೈ ಕಿಸಾನ ಜನಪದ ಕಲಾತಂಡದವರಿಂದ ಜಾನಪದ ಕಲಾ ಪ್ರದರ್ಶನಗೊಳ್ಳುತ್ತದೆ. ಜಾತ್ರೆಯಲ್ಲಿ ಪ್ರತಿದಿವಸ ಪ್ರಸಾದದ ವ್ಯವಸ್ಥೆಯನ್ನು
ಸಕಲಸದ್ಭಕ್ತ ಮಂಡಳಿ ಸುನಗ ಇವರು ಮಾಡಿರುತ್ತಾರೆಂದು ಶ್ರೀ ಮುರಗೇಶ ಫಕೀರಣ್ಣವರ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.