ಸೆ.14ರಿಂದ ಜಾನಪದ ಝೇಂಕಾರ

ಸೆ.14ರಿಂದ ಜಾನಪದ ಝೇಂಕಾರ

ವಿಜಯಪುರ,ಸೆ.2: ನಗರದ ವಿಜಯಸಿರಿ ಕಲಾ ಸಂಸ್ಥೆ ಅರ್ಪಿಸುವ ಉತ್ತರ ಕನಾಟಕದ ಅಪ್ಪಟ ಸೊಗಡು ಜಾನಪದ ಝೇಂಕಾರವು ವಿಜಯಪುರ ಜಿಲ್ಲೆಯ ಸಂಗೀತಾಭಿಮಾನಿಗಳು, ಜಾನಪದ ಕಲಾಸಕ್ತರಿಗೆ ಸುವರ್ಣ ಅವಕಾಶ ಸಂಪ್ರದಾಯ ಜಾನಪದ ಹಾಡುಗಾರಿಕೆ ಮತ್ತು ನೃತ್ಯ ಶಿಬಿರವನ್ನು ಸೆ. 14,15,16 ಹಾಗೂ 17ರ ವರೆಗೆ ಆಯೋಜಿಸಲಾಗಿದೆ. 
ಮಲ್ಲಿಕಾರ್ಜುನ ಆಶ್ರಮ ರಸ್ತೆಯಲ್ಲಿರುವ ಶಿವಾಲಯ ಮಂಗಳ ಭವನದಲ್ಲಿ ನಡೆಯುವ ಶಿಬಿರದಲ್ಲಿ ಬೀಸುಕಲ್ಲಿನ, ಸೋಬಾನ, ಜೋಗುಳ, ಗೀಗೀ, ಹಬ್ಬದ, ಲಾವಣಿ, ಚೌಡಕಿ, ಹಂತಿ ಪದಗಳ ಹಾಗೂ ಇನ್ನೂ ಅನೇಕದ ಜಾನಪದ ಹಾಡುಗಳ ಕಲಿಲಕೆ ನಡೆಯುವುದು.
ಈ ಶಿಬಿರದಲ್ಲಿ ವಯಸ್ಸಿನ ನಿರ್ಬಂಧವಿರುವುದಿಲ್ಲ. ಶಾಲಾ ಕಾಲೇಜುಗಳು ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಕೂಡ ಅವಕಾಶ ವಿರುತ್ತದೆ. ಶಿಬಿರದ ನಿರ್ದೇಶಕ ಬಸವಲಿಂಗಯ್ಯ ಹಿರೇಮಠ ಅಧ್ಯಕ್ಷರು ಜಾನಪದ ಸಂಶೋದನ ಕೇಂದ್ರ ಹಾಗೂ ವಿಶ್ವೇಶ್ವರಿ ಬ. ಹಿರೇಮಠ, ಕಾಯಾಧ್ಯಕ್ಷೆ  ಜಾನಪದ ಸಂಶೋದನ ಕೇಂದ್ರ ಹಾಗೂ ಸಹ ನಿರ್ದೇಶಕರಾಗಿ ಕುಮಾರಿ ಸುನಂದ ನಿಂಬನಗೌಡರ ಇವರು ವಹಿಸಿಕೊಳ್ಳಲಿದ್ದಾರೆ.    
ಹೆಚ್ಚಿನ ಮಾಹಿತಿಗಾಗಿ ಶ್ರೀ ಪ್ರಕಾಶ ಮಠ ಮೊ : 9844345123, ಶರಣು ಸಬರದ ಮೊ : 9740582009, ಪ್ರೊ. ಎಮ್.ಎಸ್. ಯಡುವೆ ಮೊ : 9880946249 ಇವರನ್ನು ಸಂಪರ್ಕಿಸಬಹುದು. ಹೆಸರು ನೋಂದಾಯಿಸುವ ಸ್ಥಳ ಸನ್‍ಲೈಟ್ ಸ್ಟುಡಿಯೋ ಆಶ್ರಮ ರಸ್ತೆ ವಿಜಯಪುರ.