`ಬೆಳಗುತಿದೆ ಬಸವ ಬ್ಯಾಂಕು’ ನಾಟಕ ಪ್ರದರ್ಶನ

`ಬೆಳಗುತಿದೆ ಬಸವ ಬ್ಯಾಂಕು’ ನಾಟಕ ಪ್ರದರ್ಶನ

ಬಾಗಲಕೋಟ, ನ. 11: ಶತಮಾನೋತ್ಸವದ ಸಂಭ್ರಮದಲ್ಲಿರುವ ನಗರದ ಶ್ರೀ ಬಸವೇಶ್ವರ ಸಹಕಾರಿ ಬ್ಯಾಂಕಿನ ‘ಬಸವ ಕಲಾ ವೇದಿಕೆಯಲ್ಲಿ ರವಿವಾರ 12 ರಂದು ಸಂಜೆ 6 ಕ್ಕೆ ರಂಗಕೋಟೆ ಬಾಗಿಲುಕೋಟೆ ತಂಡದಿಂದ ‘ಬೆಳಗುತಿದೆ ಬಸವ ಬ್ಯಾಂಕು’ ನಾಟಕ,ನೃತ್ಯ ರೂಪಕ ಪ್ರದರ್ಶನವಾಗಲಿದೆ.
    ಬಸವ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಅವರ ನಿರ್ಮಾಣ ಮತ್ತು ಮಾರ್ಗದರ್ಶನದಲ್ಲಿ ನಗರದ ಸಾಹಿತಿ ಡಾ.ಪ್ರಕಾಶ ಖಾಡೆ ಅವರ ರಚನೆ ಮತ್ತು ರಂಗಕರ್ಮಿ ಶ್ರೀಹರಿ ಧೂಪದ ನಿರ್ದೇಶನ ಹಾಗೂ ಮಹಾಬಳೇಶ್ವರ ಗುಡಗುಂಟಿ ಅವರ ಸಂಯೋಜನೆಯಲ್ಲಿ ಸಿದ್ದವಾದ ನಾಟಕವು  ಬ್ಯಾಂಕಿನ ಸ್ಥಾಪನೆ, ಸಾಧನೆ ಮತ್ತು ಪ್ರಗತಿ, ಅಧ್ಯಕ್ಷರ ಕ್ರಿಯಾಶೀಲತೆಗಳ ಸನ್ನಿವೇಶಗಳನ್ನು ಒಳಗೊಂಡಿದೆ.
    ನೃತ್ಯ ಸಂಯೋಜನೆಗಳೊಂದಿಗೆ ಪ್ರತಿಭಾವಂತ ಕಲಾವಿದರ ಅಭಿನಯ ಮತ್ತು ಆಕರ್ಷಕ ನೃತ್ಯ ವೈಭವದೊಂದಿಗೆ ನಾಟಕ ರಂಜನೀಯದೊಂದಿಗೆ ಸಹಕಾರ ಸಂದೇಶವನ್ನು ಸಾರಲಿದೆ.ನಾಟPಕ್ಕೆ  ಉಚಿತ ಪ್ರವೇಶವಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸಬೇಕೆಂದು ಅಧ್ಯಕ್ಷರಾದ ಪ್ರಕಾಶ ತಪಶೆಟ್ಟಿ ಅವರು ಕೋರಿದ್ದಾರೆ.