ಕುಟುಂಬಕ್ಕೆ ಒಂದು ಮರ ಹಾಗೂ ಸಸಿಗಳನ್ನು ನೆಡುವ  ಮೂಲಕ ವಿಶಿಷ್ಟವಾಗಿ ಕಾರ್ಯಕ್ರಮ

ಕುಟುಂಬಕ್ಕೆ ಒಂದು ಮರ ಹಾಗೂ ಸಸಿಗಳನ್ನು ನೆಡುವ  ಮೂಲಕ ವಿಶಿಷ್ಟವಾಗಿ ಕಾರ್ಯಕ್ರಮ

ಬಾಗಲಕೋಟ,ಅ.3:  ಜಿಲ್ಲಾ ಜಾತ್ಯಾತೀತ ಜನತಾಧಳದಿಂದ ಮಹಾತ್ಮಾ ಗಾಂಧಿ ಹಾಗೂ ಲಾಲ ಬಹ್ದೂರ ಶಾಸ್ತ್ರೀ ಜಯಂತಿ ನಿಮಿತ್ಯ ಕುಟುಂಬಕ್ಕೆ ಒಂದು ಮರ ಹಾಗೂ ಸಸಿಗಳನ್ನು ನೆಡುವ  ಮೂಲಕ ವಿಶಿಷ್ಟವಾಗಿ ಕಾರ್ಯಕ್ರಮವನ್ನು ಆಚರಿಸಲಾಯಿತು.

          ನವನಗರದ ಸೆಕ್ಟರ ನಂ.44 ರಲ್ಲಿ ನಡೆದ ಕಾರ್ಯಕ್ರಮದ ಮೂಲಕ ಜನರಿಗೆ ಕುಟುಂಬಕ್ಕೆ ಒಂದು ಮರ ಎಂಬ ದಿವ್ಯ ಸಂದೇಶವನ್ನು ಸಾರಿ ಜನರಲ್ಲಿ ಗಿಡ ಮರಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.ನಂತರ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಹಾಗೂ ಲಾಲಬಹದ್ದೂರ ಶಾಸ್ತ್ರೀ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚಣೆ ಮಾಡಿದರು.

          ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಶರಣು ಹುರಕಡ್ಲಿ, ತಾಲೂಕಾಧ್ಯಕ್ಷ ಸಲೀಂ ಮೋಮಿನ, ಜಿಲ್ಲಾ ಯುವ ಜನತಾ ಧಳದ ಅಧ್ಯಕ್ಷ ಮಂಜುನಾಥ ಗುಬ್ಬಿ ಮಾತನಾಡಿ ಈ ಮಹಾತ್ಮರ ಸರಳ ಶಾಂತಿಯ ಸಂದೇಶ ಹಾಗೂ ಸತ್ಯಕ್ಕೆ ಜಯ ಎಂಬ ಅಸ್ತ್ರಗಳನ್ನು  ಬಳಸಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರು.ಇವರ ಸರಳತೆ ಮುಂದಿನ ಪೀಳಿಗೆಗೆ ದಾರಿ ದೀಪವಾಗಲಿ ಅವರಂತೆ ನಾವು ಸನ್ಮಾರ್ಗದಲ್ಲಿ ನಡೆಯೋಣ ಎಂದು ತಿಳಿಸಿದರು.ಅದನಂತರ ರಘುಪತಿರಾಘವ ರಾಜಾರಾಮ ಎನ್ನುವ ಸಾಮೂಹಿಕ ಭಜನೆಯನ್ನು ಕಾರ್ಯಕರ್ತರೆಲ್ಲ ಹಾಡಿ ಜನತೆಗೆ ಗಿಡಗಳ ಬಗ್ಗೆ ಮನೆಮನೆಗೆ ತೆರಳಿ ಅರಿವು ಮೂಡಿಸುವ ಕಾರ್ಯಕ್ರಮ ಮಾಡಿದರು.

          ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ನಬೀರಸೂಲ ಸವನೂರ, ಯಾಸೀನ ಮಿರ್ಜಿ, ಜಮೀಲ ಟಂಕಸಾಲಿ, ಯಾಸೀನ ನಧಾಫ್, ರಾಮಣ್ಣಾ ಸುನಗದ, ಮುಸ್ತಾಕ ಫನಿಬಂದ, ದಾದಾ ಹೂನವಾಡ, ಜಮೀಲ ಗಲಗಲಿ, ಅಮೀರ ಜಾಹಾಗೀರದಾರ, ಬಂದೇನವಾಜ್ ಮನಿಯಾರ, ಸುಲೇಮಾನ ಆನೆಹೂಸುರ, ಶ್ರೀಮತಿ ರೇಣುಕಾ ಭಜಂತ್ರಿ ಸೇರಿದಂತೆ ಜಿಲ್ಲಾ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.