ಶಾಲಾ ಮಕ್ಕಳಿಂದ ಪರಿಸರ ದಿನಾಚರಣೆ

ಶಾಲಾ ಮಕ್ಕಳಿಂದ ಪರಿಸರ ದಿನಾಚರಣೆ

ವಿಜಯಪುರ ಜೂ.15: ಬಸವನ ಬಾಗೇವಾಡಿ ತಾಲೂಕಿನ ಯರನಾಳ ಗ್ರಾಮದ ಸರಕಾರಿ ಕನ್ನಡ ಹೆಣ್ಣು & ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಗಳ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.
    ಪರಿಸರ ದಿನಾಚರಣೆಗೆ ಎಸ್.ಡಿ.ಎಂ.ಸಿ. ಅಧ್ಯಕ್ಷರಾ ಬಸವರಾಜ ತೊರವಿ ಅದ್ಯಕ್ಷತೆ ವಹಿಸಿದ್ದರು. 

ಸಿ.ಆರ್.ಪಿ. ಸಿ.ಎಸ್. ಬಾಗೇವಾಡಿ ಮಾತನಾಡಿ ಪರಿಸರ ನಾಶದಿಂದ ಓಜೋನ್ ಪದರಕ್ಕೆ ಹಾನಿಯಾಗಿರುತ್ತದೆ. ಇದರ ಪರಿಣಾಮ ಮಾನವ ಕುಲಕ್ಕೆ ಅಪಾರವಾದ ಪರಿಣಾಮವನ್ನು ಬೀರುತ್ತದೆ ಎಂದು ತಿಳಿಸಿದರು.

 ಬಸವನ ಬಾಗೇವಾಡಿಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಂ. ಎ. ಗುಳೇದಗುಡ್ಡ ಮಾತನಾಡಿ, ಪ್ರತಿಯೊಬ್ಬರು ಮನೆಗೊಂದು ಸಸಿ ನೆಡಬೇಕು. ಇದರಿಂದ ಪರಿಸರ ನಾಶವಾಗುವದನ್ನು ತಡೆಗಟ್ಟಬಹುದಾಗಿದೆ. ಪರಿಸರ ನಾಶದಿಂದ ನಾವು ಸ್ವೀಕರಿಸುವ ವಾಯುನಲ್ಲಿ ವಿಷಪೂರಿತ ವಾಯು ದೊರೆಯುತ್ತಿದ್ದು, ಇದರಿಂದ ಉಳಿಯಬೇಕಾದರೆ ಪರಿಸರ ಸಂರಕ್ಷಣೆ ಕಡೆಗೆ ನಮ್ಮ ಗಮನ ಹರಿಸಬೇಕೆಂದು ತಿಳಿಸಿದರು.

    ಈ ಸಂದರ್ಭದಲ್ಲಿ ಶ್ರೀಮತಿ ಕಸ್ತೂರಿ ಸಜ್ಜನ ಗ್ರಾಮ ಪಂಚಾಯತಿ ಅಧ್ಯಕ್ಷರು, ಜಿ.ಕೆ. ವಿವೇಕಿ, ಶಿಕ್ಷಣ ಸಂಯೋಜಕರು ಝಳಕಿ, ಬಸವರಾಜ ಬ್ಯಾಕೋಡ, ಉಮೇಶಗೌಡ ಪಾಟೀಲ, ನಾಗನಗೌಡ ಪಾಟೀಲ, ಉಲ್ಲಾಸ ನಾಗರಾಳ, ರಾಜು ಆಸಂಗಿ, ಮುಖ್ಯ ಗುರುಗಳಾದ ಶ್ರೀಮತಿ ಎಸ್.ಪಿ. ಅವಟಿಗೇರ, ಎಂ.ಎಚ್.ಲಮಾಣಿ, ಗ್ರಾ.ಪಂ. ಉಪಾಧ್ಯಕ್ಷ ಮಲ್ಲು ದೊಡಮನಿ, ಶ್ರೀಮತಿ ಜಿ.ಟಿ. ಕೆಂಬಾವಿ ಶಿಕ್ಷಕರಾದ ಎಸ್.ವಿ. ಬಾಸುತರ, ಶ್ರೀಮತಿ ಬಿ.ಆರ್. ಗೌಡರ, ಶ್ರೀಮತಿ ಯು.ಜಿ. ಸಂಗೊಳ್ಳಿ, ಶ್ರೀಮತಿ ಎಂ.ವಾಯ್. ಮಾದರ, ವಿ.ಎಂ. ಯರಗಲ್, ಶ್ರೀಮತಿ ಆರ್.ಬಿ.ಪಾಟೀಲ, ಬಿ.ಪಿ. ಉಕ್ಕಲಿ, ಶ್ರೀಮತಿ ಪಿ.ಆರ್. ರಾಠೋಡ, ಶ್ರೀಮತಿ ಎಸ್.ಅರ್. ಕುಲಕರ್ಣಿ, ಶ್ರೀಮತಿ ಎಂ.ಆರ್. ಪಿರಗಾ, ಸುರೇಶ ದೊಡಮನಿ, ಉಪಸ್ಥಿತರಿದ್ದರು.

    ಪರಶುರಾಮ ರಾಮರಥ ಸ್ವಾಗತಿಸಿದರು. ಎನ್.ಜಿ. ಚೌಕಿಮಠ ನಿರೂಪಿಸಿದರು. ಸಿ.ಎಲ್. ನರಗುಂದ ವಂದಿಸಿದರು.