ಮಹಾರಥ ಚಲನಚಿತ್ರ ಧ್ವನಿತಟ್ಟೆ ಬಿಡುಗಡೆ ಸಮಾರಂಭಕ್ಕೆ ಸಾಥ ನೀಡಿದ ರನ್ನ ಕ್ರೀಡಾಂಗಣ

ಮಹಾರಥ ಚಲನಚಿತ್ರ ಧ್ವನಿತಟ್ಟೆ ಬಿಡುಗಡೆ ಸಮಾರಂಭಕ್ಕೆ ಸಾಥ ನೀಡಿದ ರನ್ನ ಕ್ರೀಡಾಂಗಣ

ಮುಧೋಳ, ಡಿ.4:  ನಗರದ ಕವಿಚಕ್ರವರ್ತಿ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ರನ್ನ ಸೂಪರ್ ಮೂವೀಸ್ ನಿರ್ಮಾಣದ ``ಮಹಾರಥ’’ ಚಲನಚಿತ್ರ ಧ್ವನಿತಟ್ಟೆ ಬಿಡುಗಡೆಗೊಳಿಸಲಾಯಿತು.
ಮುಧೋಳ ನಗರದ ಯುವ ನಿರ್ಧೇಶಕ ಹಾಗೂ ಚಲನಚಿತ್ರ ನಟ ಪ್ರಿತಮ ನಿಗಡೆಯವರು ನಿರ್ಧೆಶಿಸಿ ನಟಿಸಿರುವ `ಮಹಾರಥ’ ಚಲನ ಚಿತ್ರದ ದ್ವನಿತಟ್ಟೆ ಬಿಡುಗಡೆ ಸಮಾರಂಭವನ್ನು ಮುಧೋಳ ನಗರದ ಕವಿಚಕ್ರವರ್ತಿ `ರನ್ನ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ದಿವ್ಯಸಾನಿಧ್ಯ ವಹಿಸಿದ್ದ ಗುರುಗಳು ಸಿದ್ದು ದಿವಾಣ, ರಾಮಣ್ಣಾ ತಳೆವಾಡ ಚಲನಚಿತ್ರ ನಟಿ ಪಂಕಜ, ರನ್ನವಾಹಿನಿಯ ಪ್ರಧಾನ ಸಂಪಾದಕರಾದ  ಚಂದ್ರಶೇಖರ ಪಮ್ಮಾರ, ಸತೀಶ್ ಬಂಡಿವಡ್ಡರ, ಹಾಸ್ಯ ಕಲಾವಿದರು, ಮಹಾರಥ ಚಲನಚಿತ್ರದ ನಾಯಕ ಪ್ರಿಥÀಮ ನಿಗಡೆ, ನಾಯಕಿ ಅಪೂರ್ವ ನಿಗಡೆ ಮತ್ತೊಬ್ಬ ನಾಯಕನಟ ನವೀನರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಗಣ್ಯರು, ಮಾತನಾಡಿ ತಮ್ಮ ಅನುಭವ ಹಂಚಿಕೊಂಡರು. ಈ ಸಂದರ್ಭದಲ್ಲಿ ವೇದಿಕೆ ಮೇಲೆ ಉಪಸ್ಥಿತರಿದ್ದ ಗಣ್ಯರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದ್ದಲ್ಲದೆ ರನ್ ಸೂಪರ್ ಮೂವೀಸ್‍ರವರ ಬಹು ನೀರಿಕ್ಷೆಯ `ಮಹಾರಥ’ ಚಲನಚಿತ್ರದ ದ್ವನಿ ತಟ್ಟೆಯನ್ನು ಬಿಡುಗಡೆ ಮಾಡಲಾಯಿತು.