ಶೀಘ್ರಲಿಪಿಗಾರ-ಬೆರಳಚ್ಚುಗಾರ ಹುದ್ದಗೆ ಅರ್ಜಿ ಆಹ್ವಾನ

ಶೀಘ್ರಲಿಪಿಗಾರ-ಬೆರಳಚ್ಚುಗಾರ ಹುದ್ದಗೆ ಅರ್ಜಿ ಆಹ್ವಾನ

ವಿಜಯಪುರ,ಜೂ.19: ಜಿಲ್ಲಾಧಿಕಾರಿಗಳ ಕಾರ್ಯಾಲಯದಜಿಲ್ಲಾ ನಗರಾಭಿವೃದ್ದಿಕೋಶದಲ್ಲಿ ಖಾಲಿ ಇರುವ ಶೀಘ್ರಲಿಪಿಗಾರ ಹಾಗೂ ಬೆರಳಚ್ಚುಗಾರ ತಲಾ ಒಂದು ಹುದ್ದೆಯನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಆಹ್ವಾನಿಸಲಾಗಿದೆ.,

ಶೀಘ್ರಲಿಪಿಗಾರ ಹುದ್ದೆಗೆ ಯಾವುದೇ ಅಂಗೀಕೃತ ವಿಶ್ವವಿದ್ಯಾಲಯ ದಿಂದ ತತ್ಸಮಾನ ಪದವಿ ಹಾಗೂ ಕರ್ನಾಟಕ ಪ್ರೌಢ ಪರೀಕ್ಷಾ ಮಂಡಳಿ ನಡೆಸುವ ಶೀಘ್ರಲಿಪಿ ಕಿರಿಯ-ಹಿರಿಯ ಪರೀಕ್ಷೆತೇರ್ಗಡೆಯಾದವರಿಗೆಆದ್ಯತೆ ನೀಡಲಾಗುವುದು.ಕನಿಷ್ಠ 3 ವರ್ಷಗಳ ಅನುಭವ ಹೊಂದಿರಬೇಕು ಮಾಸಿಕ 10 ಸಾವಿರರೂ.ವೇತನ ನೀಡಲಾಗುವುದು.

ಬೆರಳಚ್ಚುಗಾರ ಹುದ್ದೆಗೆಅಂಗೀಕೃತ ವಿಶ್ವವಿದ್ಯಾಲಯ ದಿಂದ ತತ್ಸಮಾನ ಪದವಿ ಹಾಗೂ ಕರ್ನಾಟಕ ಪ್ರೌಢ ಪರೀಕ್ಷಾ ಮಂಡಳಿ ನಡೆಸುವ ಬೆರಳಚ್ಚುಗಾರ ಕಿರಿಯ-ಹಿರಿಯ ಪರೀಕ್ಷೆತೇರ್ಗಡೆಯಾದವರಿಗೆಆದ್ಯತೆ ನೀಡಲಾಗುವುದು.ಕನಿಷ್ಠ 5 ವರ್ಷಗಳ ಅನುಭವ ಹೊಂದಿರಬೇಕು.ಮಾಸಿಕ 10 ಸಾವಿರರೂ.ವೇತನ ನೀಡಲಾಗುವುದು.

ಆಸಕ್ತ ಅರ್ಹ ಅಭ್ಯರ್ಥಿಗಳು ತಮ್ಮ ಪೂರ್ಣ ವಿವರಗಳು ಹಾಗೂ ವಿದ್ಯಾರ್ಹತೆ, ಅನುಭವ ದಾಖಲೆಗಳೊಂದಿಗೆ ಅರ್ಜಿಯನ್ನು ದಿನಾಂಕ : 27-06-2017ರೊಳಗಾಗಿ ಜಿಲ್ಲಾಧಿಕಾರಿಗಳು (ಜಿಲ್ಲಾ ನಗರಾಭಿವೃದ್ದಿ ಕೋಶ), ವಿಜಯಪುರಇವರಿಗೆ ಸಲ್ಲಿಸಬೇಕು. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿದೂ: 08352-259855 ಸಂಪರ್ಕಿಸಲುಕೋರಿದೆ.