ವಿಶ್ವಸಂಸ್ಥೆ ಭದ್ರತಾ ಮಂಡಳಿಯನ್ನು ಭಾರತದ ಪ್ರತಿನಿಧಿ ಸಯೀದ್ ಅಕ್ಬರುದ್ದೀನ್ ಟೀಕಿಸಿದ್ದಾರೆ

ವಿಶ್ವಸಂಸ್ಥೆ ಭದ್ರತಾ ಮಂಡಳಿಯನ್ನು ಭಾರತದ ಪ್ರತಿನಿಧಿ ಸಯೀದ್ ಅಕ್ಬರುದ್ದೀನ್ ಟೀಕಿಸಿದ್ದಾರೆ

ವಿಶ್ವಸಂಸ್ಥೆ: ವಿಶ್ವದ ಜಸಂಖ್ಯೆಗೆ ಹೋಲಿಸಿದರೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅತ್ಯಂತ ಕಡಿಮೆ ಪ್ರಾತಿನಿಧ್ಯ ಹೊಂದಿದ್ದು ನಿಷ್ಕ್ರಿಯವಾಗಿದೆ ಎಂದು ವಿಶ್ವಸಂಸ್ಥೆ ಭದ್ರತಾ ಮಂಡಳಿಯನ್ನು ಭಾರತ ಟೀಕಿಸಿದೆ.   ವಿಶ್ವಸಂಸ್ಥೆಯಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಭಾರತದ ಪ್ರತಿನಿಧಿ ಸಯೀದ್ ಅಕ್ಬರುದ್ದೀನ್, ಪ್ರಪಂಚ ಬದಲಾಗುತ್ತಿದೆ, ಆದರೆ ವಿಶ್ವದ ಶಾಂತಿಗಾಗಿ ಕಾರ್ಯನಿರ್ವಹಿಸಬೇಕಿರುವ ಸಂಸ್ಥೆ ಆಧುನೀಕರಣಗೊಳ್ಳದೇ, ನಿಷ್ಕ್ರಿಯವಾಗಿದೆ. ಪ್ರಪಂಚ ಬದಲಾಗುತ್ತಿದ್ದಂತೆ ಭದ್ರತಾ ಮಂಡಳಿಯಲ್ಲಿ ನಿರ್ಣಯ ಕೈಗೊಳ್ಳುವ ರಾಷ್ಟ್ರಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನಿಷ್ಕ್ರಿಯವಾಗುತ್ತಿದೆ ಎಂದು ಹೇಳಿದ್ದಾರೆ. 

ಕೇವಲ 15 ರಾಷ್ಟ್ರಗಳು ವಿಶ್ವದ ಜನರಿಗೆ ನಿಯಮಗಳನ್ನು ರೂಪಿಸುವುದು ಸೂಕ್ತವಲ್ಲ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ವಾಸ್ತವ ಸನ್ನಿವೇಶಗಳಿಗೆ ತಕ್ಕಂತೆ ಆಧುನೀಕರಣಗೊಳ್ಳುವ ಅನಿವಾರ್ಯತೆ ಇದೆ ಎಂದು ಸಯೀದ್ ಅಕ್ಬರುದ್ದೀನ್ ಅಭಿಪ್ರಾಯಪಟ್ಟಿದ್ದಾರೆ.