ನಾನೊಬ್ಬ ಸ್ತ್ರೀವಾದಿ,  ಒಬಾಮಾ

ನಾನೊಬ್ಬ ಸ್ತ್ರೀವಾದಿ,  ಒಬಾಮಾ

ವಾಷಿಂಗ್ಟನ್: ನಾನು ಕೇವಲ ಅಮೆರಿಕ ಅಧ್ಯಕ್ಷನಲ್ಲ. ಬದಲಾಗಿ ಜಾಗತಿಕ ಮಟ್ಟದಲ್ಲಿ ಸ್ತ್ರೀವಾದಿ ಕೂಡ ಆಗಿದ್ದೇನೆ ಎಂದು ಬರಾಕ್ ಒಬಾಮ ತಮ್ಮ ಜನ್ಮದಿನದ ಭಾಷಣದಲ್ಲಿ ಹೇಳಿಕೊಂಡಿದ್ದಾರೆ.  55ನೇ ವಸಂತಕ್ಕೆ ಕಾಲಿಟ್ಟ ಒಬಾಮ ತಮ್ಮ ನೆನೆಪಿನ ಬುತ್ತಿಯನ್ನು ನೆರೆದಿದ್ದವರ ಮುಂದೆ ಬಿಚ್ಚಿಟ್ಟರು. ನಮ್ಮನ್ನು ಜಗತ್ತಿಗೆ ಪರಿಚಯಿಸುವವಳು ತಾಯಿ. ನನ್ನ ಜೀವನದಲ್ಲಿ ಕೂಡ ಮಹಿಳೆಯರು ಅಗಾದವಾದ ಪ್ರಭಾವ ಬೀರಿದ್ದಾರೆ. ನನ್ನ ಮಕ್ಕಳಾದ ಸಶಾ ಹಾಗೂ ಮಲಿನಾ ನನ್ನ ಕಣ್ಣುಗಳನ್ನು ತೆರೆಸಿದ್ದಾರೆ. ಇನ್ನು ಪತ್ನಿ ಮಿಶೆಲ್ ನನ್ನ ಬೆನ್ನೆಲುಬಾಗಿ ನಿಂತಿದ್ದಾಳೆ ಎಂದು ಹೇಳುತ್ತಾ ಒಬಾಮ ಬಾವುಕರಾದರು.ನಮ್ಮಲ್ಲಿನ ಪೂರ್ವಮನಸ್ಥಿತಿಯನ್ನು ಮೊದಲು ತೆಗೆದು ಹಾಕಬೇಕು. ಹೆಣ್ಣು ಕೀಳು, ಗಂಡು ಮೇಲು ಎಂಬ ಲಿಂಗ ತಾರತಮ್ಯ ತೊಲಗಬೇಕು. ಈ ರೀತಿ ಭಾವನೆ ನಮ್ಮಿಂದ ದೂರವಾದಾಗ ಮಾತ್ರ ನಾವು ಏಳಿಗೆ ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.