ಗೈರಾಗಲಿರುವ ಕೆನಡಾ ಪ್ರಧಾನಿ

ಗೈರಾಗಲಿರುವ ಕೆನಡಾ ಪ್ರಧಾನಿ

ಟೊರಂಟೋ: ಜ.20 ರಂದು ನಡೆಯಲಿರುವ ಅಮೆರಿಕ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪದಗ್ರಹಣ ಸಮಾರಂಭಕ್ಕೆ ಕೆನಡಾದ ಪ್ರಧಾನಿ ಗೈರಾಗಲು ನಿರ್ಧರಿಸಿದ್ದಾರೆ.   ಅಮೆರಿಕ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭಕ್ಕೆ ಗೈರಾಗಲಿರುವ ಕೆನಡಾದ ಪ್ರಧಾನಿ ಜ.20 ರಂದು ಕೆನಡಾದಲ್ಲೇ ಸಾರ್ವಜನಿಕ ಸಭೆಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ ಎಂದು ಎಎಫ್ಇ ನ್ಯೂಸ್ ವರದಿ ಮಾಡಿದೆ.   ಪ್ರಧಾನಿ ಗೈರು ಹಾಜರಾಗಲಿರುವ ಹಿನ್ನೆಲೆಯಲ್ಲಿ ಕೆನಡಾದ ಸರ್ಕಾರ ವಾಷಿಂಗ್ ಟನ್ ಗೆ ತನ್ನ ಪ್ರತಿನಿಧಿಗಳ ಉನ್ನತ ಮಟ್ಟದ ನಿಯೋಗವನ್ನು ಕಳಿಸಿಕೊಡಲಿದೆ, ಇನ್ನು ಕೆನಡಾದ ಪ್ರಧಾನಿ ಜಸ್ಟಿನ್‌ ಟ್ರುಡಿ ಸಾರ್ವಜನಿಕ ಸಮಾರಂಭಗಳನ್ನು ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಪ್ರತಿ ವರ್ಷ ವಿಶ್ವ ಆರ್ಥಿಕ ವೇದಿಕೆಯ ಕಾರ್ಯಕ್ರಮದಲ್ಲೂ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಪ್ರಧಾನಿ ಕಾರ್ಯಾಲಯ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.