ಕಾರ್‌ ಬಾಂಬ್‌ ಸ್ಫೋಟದಲ್ಲಿ ಕನಿಷ್ಠ 43 ಮಂದಿ ಬಲಿ

ಕಾರ್‌ ಬಾಂಬ್‌ ಸ್ಫೋಟದಲ್ಲಿ ಕನಿಷ್ಠ 43 ಮಂದಿ ಬಲಿ

ಬೇರೂತ್‌: ಟರ್ಕಿ ಗಡಿಗೆ ಹೊಂದಿಕೊಂಡಿರುವ ಹಾಗೂ ಬಂಡುಕೋರರ ವಶದಲ್ಲಿರುವ ಸಿರಿಯಾದ ಅಜಾಜ್‌ ಪಟ್ಟದಲ್ಲಿ ಶನಿವಾರ ಸಂಭವಿಸಿದ ಕಾರ್‌ ಬಾಂಬ್‌ ಸ್ಫೋಟದಲ್ಲಿ ಕನಿಷ್ಠ 43 ಮಂದಿ ಮೃತಪಟ್ಟಿದ್ದು, 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸ್ಥಳೀಯ ಇಸ್ಲಾಮಿಕ್‌ ಕೋರ್ಟ್‌ ಹೌಸ್‌ ಮುಂಬಾಗದಲ್ಲಿರುವ ಒಂದು ಮಾರ್ಕೆಟ್‌ ಪ್ರದೇಶದ ಈ ಬಾಂಬ್ ದಾಳಿ ನಡೆದಿದೆ ಎಂದು ಬ್ರಿಟನ್‌ನಲ್ಲಿ ನೆಲೆ ಹೊಂದಿರುವ ಸಿರಿಯಾ ಮೂಲದ ಮಾನವ ಹಕ್ಕುಗಳ ವೀಕ್ಷಣಾಲಯದ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ. ಸ್ಫೋಟದಲ್ಲಿ ಆರು ಬಂಡುಕೋರರು ಸೇರಿದಂತೆ 43 ಮಂದಿ ಮೃತಪಟ್ಟಿದ್ದು, ಹೆಚ್ಚಿನವರು ನಾಗರಿಕರಿದ್ದಾರೆ ಎಂದು ಅವರು ಹೇಳಿದ್ದಾರೆ. ಇದುವರೆಗೂ ಯಾವುದೇ ಉಗ್ರ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಆದರೆ ಈ ದಾಳಿಯ ಹಿಂದೆ ಐಸಿಸ್‌ ಉಗ್ರರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.