ಗಣೇಶ ವಿಸರ್ಜನೆ ವೇಳೆ ಯುವನೊರ್ವ ನೀರು ಪಾಲು

ಗಣೇಶ ವಿಸರ್ಜನೆ ವೇಳೆ ಯುವನೊರ್ವ ನೀರು ಪಾಲು

ಲೊಕಾಪುರ,ಸೆ.1: ಗಣೇಶ ವಿಸರ್ಜನೆ ವೇಳೆ ಯುವನೊರ್ವ ನೀರು ಪಾಲಾಗಿದ್ದಾನೆ. ನಿನ್ನೇ ರಾತ್ರಿ ತಿಮ್ಮಾಪುರದ ಬಳಿ ನಡೆದ ದುರಂತ. ಗಣೇಶ ಯುವಕ ಮಂಡಳಿ ಲಕ್ಷಾನಟ್ಟಿ ಗಣೇಶ ವಿಸರ್ಜನೆ ವೇಳೆ ನಡೆದಿದೆ. ಲೋಕಾಪುರ ಗ್ರಾಮದ ಲಕ್ಷಾನಟ್ಟಿಯ ಮೂಲದ ಯುವಕ ಜ್ಞಾನೇಶ್ವರ ಮಾಳೆದ(26) ಎಂದು ತಿಳಿದುಬಂದಿದೆ, ಯುವಕನಿಗೆ ಈಜು ಬರುತ್ತೀರಲಿಲ್ಲ.
ಪ್ರತ್ಯಕ್ಷದರ್ಶಿಗಳ ಪ್ರಕಾರ ತಲೆ ಸುತ್ತು ಬರುತ್ತಿದೆ ಎಂದು ಗೆಳೆಯರಿಗೆ ಹೇಳುತ್ತಿದ್ದ,  ನೋಡ ನೋಡುತ್ತಿದ್ದಂತೆ ಆಯ ತಪ್ಪಿ ನೀರಿಗೆ ಬಿದ್ದಿದ್ದಾನೆ. ಗೆಳೆಯರು ಹಿಡಿಯಲು ಯತ್ನಿಸಿದರು ಪ್ರಯೋಜನವಾಗಿಲ್ಲ. ತಂಡದಲ್ಲಿ ಯಾರೊಬ್ಬರಿಗೂ ಸರಿಯಾಗಿ ಈಜು ಬರುತ್ತಿರಲಿಲ್ಲ. ಕತ್ತಲಲ್ಲಿ ನೀರಿಗೆ ಇಳಿಯುವ ಧರ್ಯಮಾಡಿಲ್ಲ. ಬಾಲಕ ತಲೆಕೆಳಗಾಗಿ ಬಿದ್ದಿದ್ದಾನೆ. ಇವರೆಗೂ ಬಾಲಕ ಬದುಕಿರುವ ಯಾವುದೇ ಸುಳಿವು ಸಿಕ್ಕಿಲ್ಲ. ಸಾರ್ವಜನಿಕರ ಅಭಿಪ್ರಾಯದ ಪ್ರಕಾರ ಸುಳಿಯಲ್ಲಿ ಸಿಕ್ಕಿರಬಹುದು. ಯುವಕನ ತಲೆಗೆ ಪೆಟ್ಟಾಗಿ ನೀರಿಂದ ಹೊರಬರಲಾಗಿಲ್ಲ. ನದಿ ನೀರಲ್ಲಿ ಕೊಚ್ಚಿ ಹೋಗಿರುವ ಸಾಧ್ಯತೆ ಇದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಭೇಟಿನೀಡಿದ್ದು,  ಮುಂದುವರಿದ ಯುವಕನ ಶೋಧಕಾರ್ಯಾ. ಈ ಕುರಿತು ಲೋಕಾಪುರ ಠಾಣೆಯಲ್ಲಿ ಪ್ರಕರಣ ದಾಖಲು.