ಮಹಿಳೆಯನ್ನು  ಬೆತ್ತಲೆಗೊಳಿಸಿ ಥಳಿತ-ಸಾರ್ವಜನಿಕರಿಂದ ಆಕ್ರೋಶ

ಮಹಿಳೆಯನ್ನು  ಬೆತ್ತಲೆಗೊಳಿಸಿ ಥಳಿತ-ಸಾರ್ವಜನಿಕರಿಂದ ಆಕ್ರೋಶ

ಸಾಲೋಟಗಿ, ಜು.5: ಮತಕ್ಷೇತ್ರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಇಂಡಿ ಗ್ರಾಮೀಣ ಪೋಲಿಸ್ ಠಾಣೆಯ ಪೋಲಿಸ್ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

     ಬಸವ ಜನಿಸಿದ ಪವಿತ್ರ ನಾಡಿನಲ್ಲಿ ಒಬ್ಬ ಮಹಿಳೆಗೆ ಬೆತ್ತಲೆಗೊಳಿಸಿ ಥಳಿಸಿರುವ ಘಟನೆ ಈಡಿ ಮನುಕುಲವೆ ತಲೆತಗ್ಗಿಸುವಂತಾಗಿದೆ ಹಾಗೂ ಈ ಘಟನೆಗೆ ಕಾರಣರಾಗಿರುವ ಅರೋಪಿಗಳಿಗೆ ರಕ್ಷಣೆ ನೀಡುವಂತಹ ಕೆಲಸವನ್ನು ಪೋಲಿಸ್ ಇಲಾಖೆ ಮಾಡುತ್ತಿದೆ.

     ಹೀರೆಮಸಳಿ ಗ್ರಾಮದಲ್ಲಿ ಸಾವಿತ್ರಿ ಗೋಡ್ಯಾಳ ಎಂಬ ಮಹಿಳೆಯ ಮೇಲೆ ಅದೇ ಗ್ರಾಮದ ಕೆಲವು ಜನರು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿರುವುದನ್ನು ತೀವ್ರವಾಗಿ ಖಂಡಿಸುತ್ತೇನೆ. ಘಟನೆಯ ನಂತರ ಸಂತ್ರಸ್ತ ಮಹಿಳೆ ಹಾಗೂ ಸಂಬಂಧಿಕರು ಇಂಡಿ ಗ್ರಾಮಾಂತರ ಠಾಣೆಗೆ ದೂರು ನೀಡಲು ಹೋದಾಗ ಎಸ್.ಐ ಶಿವಾನಂದ ಆರೇನಾಡ ಹಾಗೂ ಸಿಬ್ಬಂದಿ ಮಹೇಶ ಹುಗ್ಗೇನವರ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಯನ್ನು ಮಾಡಿದ್ದಾರೆ. 

     ಸಾರ್ವಜನಿಕರಿಗೆ ರಕ್ಷಣೆ ನೀಡಬೇಕಾದ ಪೋಲಿಸ್ ಸಿಬ್ಬಂದಿ ಈ ರೀತಿ ವರ್ತಿಸಿರುವುದು ಕಾನೂನು ವ್ಯವಸ್ಥೆಗೆ ಮಾಡಿರುವ ಅಪಮಾನ.

 ಮಾನ್ಯ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳೂ ತಪ್ಪಿತಸ್ಥ ಪೋಲಿಸ್ ಇಲಾಖೆಯ ಅಧಿಕಾರಿಗಳನ್ನು ಅಮಾನತು ಮಾಡದಿದ್ದರೆ, ತಾಲೂಕಿನಾದ್ಯಂತ ಹೋರಾಟ ಮಾಡುತ್ತೇವೆ, ನ್ಯಾಯಸಿಗುವವರೆಗೂ ಹೋರಾಡುತ್ತೇವೆ ಎಂದು ಸಾರ್ವಜನಿಕರು ಪ್ರಕಟಣೆಯಲ್ಲಿ ತಿಳಿಸಿದರು.

ಗುರುಬಸಯ್ಯ ಗುರುಪಾದಯ್ಯ ಮಠಪತಿ,ಧಾನಯ್ಯ ಗುರುನಿಂಗಯ್ಯ ಮಠಪತಿ,ಅಣ್ಣಯ್ಯ ಸಿದ್ದರಾಮಯ್ಯ ಮಠಪತಿ,ಜಟ್ಟೆಪ್ಪ ಕೃಷ್ಣಪ್ಪ ಚವ್ಹಾಣ (ಗ್ರಾ ಪಂ ಸದಸ್ಯರು),ಸಂತೋಷ ಗಿಣ್ಣಿ (ಗ್ರಾ ಪಂ ಅಧ್ಯಕ್ಷರು ರೂಗಿ), ಸುರೇಶ ಪ ಉಪ್ಪಾರ (ಗ್ರಾ.ಪಂ ಉಪಾಧ್ಯಕ್ಷರು ರೂಗಿ),ಮಲ್ಲು ಗಿಣ್ಣಿ, ಜಟ್ಟೆಪ್ಪ ಮರಡಿ, ಜಟ್ಟೆಪ್ಪ ಸಾಲೋಟಗಿ, ತುಕಾರಾಮ ಕೋಳಿ ,ಶ್ರೀನಾಥ ಹಡಪದ, ಗಜಾನಂದ ಗಿಣ್ಣಿ, ಶಶಿಕುಮಾರ ತೇಲಿ, ಸಂತೋಷ ಬೂದಿಹಾಳ(ಗ್ರಾ ಪಂ ಅಧ್ಯಕ್ಷರು ಶಿರಶ್ಯಾಡ), ಸೋಮು ಗುಡಿ ಇದ್ದರು.