ವಿಜಯಪುರದಲ್ಲಿ ದಲಿತ ಬಾಲಕಿಯ ರೇಪ್, ಕೊಲೆಗೆ ಸಿಎಂ ಖಂಡನೆ

ವಿಜಯಪುರದಲ್ಲಿ ದಲಿತ ಬಾಲಕಿಯ ರೇಪ್, ಕೊಲೆಗೆ ಸಿಎಂ ಖಂಡನೆ

ವಿಜಯಪುರ, ಡಿ.20: ಜಿಲ್ಲೆಯಲ್ಲಿ ನಡೆದ ದಲಿತ ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣವನ್ನ ಸಿಎಂ ಸಿದ್ದರಾಮಯ್ಯ ಖಂಡಿಸಿದ್ದಾರೆ.

ವಿಜಯಪುರ ತಾಲೂಕಿನ ಬಬಲೇಶ್ವರದಲ್ಲಿ ಮಾತನಾಡಿದ ಸಿಎಂ, ಇದು ಮಾನವಿಯತೆಗೆ ವಿರುದ್ಧವಾದುದು. ಇದನ್ನ ಯಾರೂ ಕೂಡಾ ಸಹಿಸಲು ಸಾಧ್ಯವಿಲ್ಲ. ಹೀಗಾಗಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಶತಸಿದ್ಧ ಅಂತ ಅವರು ಹೇಳಿದ್ರು.

ಜಿಲ್ಲಾ ಪಂಚಾಯತ್ ಸದಸ್ಯ ಯೊಗೇಶ್ ಗೌಡ ಪತ್ನಿ ಮಲ್ಲಮ್ಮ ನನ್ನನ್ನು ಭೇಟಿ ಮಾಡಿ ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಶಿ, ಕಾಟ ನೀಡುತ್ತಿದ್ದಾರೆ. ಅವರು ಹೇಳಿದ ಹಾಗೇ ಹೇಳಿಕೆ ನೀಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಹಾಗಾಗಿ ರಕ್ಷಣೆ ನೀಡಬೇಕು ಅಂತ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಮನವಿ ಪರಿಗಣಿಸಿ ರಕ್ಷಣೆ ನೀಡೋದಾಗಿ ಈಗಾಗಲೇ ಭರವಸೆ ನೀಡಿದ್ದೇವೆ.