ಪರೀಕ್ಷೆ ಮುಂದೂಡಲು 11ನೇ ತರಗತಿ ವಿದ್ಯಾರ್ಥಿಯಿಂದ ಕೊಲೆ

ಪರೀಕ್ಷೆ ಮುಂದೂಡಲು 11ನೇ ತರಗತಿ ವಿದ್ಯಾರ್ಥಿಯಿಂದ ಕೊಲೆ


ಹೊಸದಿಲ್ಲಿ,ನ.8: ಇತ್ತೀಚೆಗೆ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಗುರುಗ್ರಾಮದ ರ‍್ಯಾನ್‌ ಇಂಟರ್‌ನ್ಯಾಶನಲ್‌ ಶಾಲೆಯಲ್ಲಿ ನಡೆದಿದ್ದ 7 ವರ್ಷದ ಬಾಲಕ ಹತ್ಯೆ ಪ್ರಕರಣ ಮಹತ್ವದ ತಿರುವು ಪಡೆದಿದ್ದು ಸಿಬಿಐ ಅಧಿಕಾರಿಗಳು ಅದೇ ಶಾಲೆಯ ಹಿರಿಯ ವಿದ್ಯಾರ್ಥಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಪ್ರದ್ಯುಮ್ನ ಠಾಕೂರ್ ಹತ್ಯೆಯಲ್ಲಿ ಈ ವಿದ್ಯಾರ್ಥಿಯ ಕೈವಾಡವಿರಬಹುದು ಎಂದು ಶಂಕಿಸಲಾಗಿದ್ದು, 11ನೇ ತರಗತಿಯಲ್ಲಿ ಓದುತ್ತಿರುವ ಈತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಸೆಪ್ಟೆಂಬರ್ 8ರಂದು ಶಾಲೆಯ ಶೌಚಾಲಯದಲ್ಲಿ ಪ್ರದ್ಯುಮ್ನನ ಕತ್ತು ಸೀಳಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಮೊದಲು ಶಾಲಾ ಬಸ್‌ ಚಾಲಕನನ್ನು ಬಂಧಿಸಿದ್ದರು, ಆದರೆ ಈ ಪ್ರಕರಣಕ್ಕೂ ಬಂಧಿತ ಚಾಲಕ ಅಶೋಕ್‌ ಕುಮಾರ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಸಿಬಿಐ ಬುಧವಾರದಂದು ಸ್ಪಷ್ಟ ಪಡಿಸಿದೆ.