ಗೋ ಮಾಂಸವನ್ನು ಸಾಗುಸುತ್ತಿದ್ದ ಗಾಡಿ: ತಿಕೋಟಾದಲ್ಲಿ ತಡೆ

ಗೋ ಮಾಂಸವನ್ನು ಸಾಗುಸುತ್ತಿದ್ದ ಗಾಡಿ: ತಿಕೋಟಾದಲ್ಲಿ ತಡೆ

ವಿಜಂiÀಪುರ,ಸೆ.9: ಈಡಿ ದೇಶದಲ್ಲಿ ಅಕ್ರಮ ಗೋ ಹತ್ಯೆ ಮತ್ತು ಅದರ ಮಾಂಸವನ್ನು ಸಾಗಿಸುವದು ನಿಷೇಧಿಸಲಾಗಿದ್ದರೂ ವಿಜಯಪುರ ಜಿಲ್ಲೆಯ ಬಬಲೇಶ್ವರ ವಿಧಾನಸಭಾ ಕ್ಷೇತ್ರದ ತಿಕೋಟಾದ ಬಳಿ ಇವತ್ತು ಮುಂಜಾನೆ ಬಿ.ಜೆ.ಪಿ ಜಿಲ್ಲಾ ಪಂಚಾಯತ್ ಸದಸ್ಯರಾದ ಸಾಬು ಮಾಶಾಳ ಸಂತೋಷ ಜಾಧವ ಮತ್ತು ಕಾರ್ಯಕರ್ತರು ಮಹಾರಾಷ್ಟ್ರ ಮೂಲದ ಒಂದು  ಕ್ಯಾಂಟರ್ ಅಕ್ರಮ ಗೋ ಮಾಂಸವನ್ನು ಸಾಗಿಸುತ್ತಿರುವಾಗ ಹಿಡಿದಿದ್ದಾರೆ ಅಲ್ಲಿನ ಪಿ.ಎಸ್.ಐ ಗೆ ತಕ್ಷಣ ಸೂಚನೆಯನ್ನು ನೀಡಿದ್ದರಾದರೂ ಅವರು ಅಪರಾಧಿಗಳ ಮೇಲೆ ಕೇಸನ್ನು ದಾಖಲಿಸಲು ಹಿಂದೇಟು ಹಾಕಿದ್ದರಿಂದ ವಿಜಯಪುರ ನಗರದಲ್ಲಿ ಬಿ.ಜೆ.ಪಿ ಜಿಲ್ಲಾ ಗೋಪ್ರಕೋಷ್ಠದ ವತಿಯಿಂದ ರೂರಲ್ ಸಿ.ಪಿ.ಐ ಆದ ಶ್ರೀ ರಾಮಚಂದ್ರ ಚೌಧರಿ ಅವರಗೆ ಭೇಟಿಯಾಗಿ ಅಪರಾಧಿಗಳನ್ನು ತಕ್ಷಣ ಬಂಧಿಸಿ ಅವರ ಮೇಲೆ ಕೇಸನ್ನು ದಾಖಲಿಸಿವಂತೆ ಮನವಿ ಕೊಡಾಲಯಿತು.
    ಈ ಸಂದರ್ಭದಲ್ಲಿ ಬಿ.ಜೆ.ಪಿ ಜಿಲ್ಲಾ ಗೋಪ್ರಕೋಷ್ಠದ ಸಂಚಾಲಕರಾದ ವಿಜಯ ಜೋಶಿ ಮಾತನಾಡಿ  ತಿಕೋಟಾ ಗ್ರಾಮದಲ್ಲಿ ಅಕ್ರಮವಾಗಿ ಸೋಲಾಪೂರ ದಿಂದ ಅಧಣಿಗೆ 2 ವಾಹನಗಳಲ್ಲಿ ಗೋಮಾಂಸ ಸಾಗಾಟ ಮಾಡುತ್ತಿರುವದನ್ನು ತಡೆದು ನಮ್ಮ ಬಿ.ಜೆ.ಪಿ. ಕಾರ್ಯಕರ್ತರು ತಿಕೋಟಾ ಪೋಲಿಸ ಠಾಣೆಗೆ ಒಪ್ಪಿಸಿದ್ದಾರೆ. ಆದರೆ ಅಲ್ಲಿಯ ಪೋಲಿಸ ಅಧಿಕಾರಿಗಳು ಇವರ ಮೇಲೆ ಸರಿಯಾದ ಕ್ರಮಕೈಗೊಳ್ಳದ ಕಾರಣ ಕೂಡಲೇ ಅಕ್ರಮವಾಗಿ ಗೋಮಾಂಸ ಮಾಡುತ್ತಿರುವವರ ಮೇಲೆ ಕಾನೂನು ಕ್ರಮ ಜರುಗಿಸಿ ಕಠಿಣ ಶಿಕ್ಷೆ ನೀಡಲು ತಿಕೋಟಾ ಪಿ.ಎಸ್.ಆಯ್. ಅವರಿಗೆ ಆದೇಶ ಮಾಡಬೇಕು. ಹಾಗೂ ವಿಜಯಪುರ ಜಿಲ್ಲೆಯಲ್ಲಿ ಈ ರೀತಿ ಗೋಮಾಂಸ ಸಾಗಾಟ ಮಾಡುತ್ತಿರುವವರನ್ನು ತಡೆದು ಮೇಲೆ ನಿರ್ದಾಕ್ಷಣಿಯ ಕ್ರಮ ಕೈಗೊಳ್ಳಲು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಕೋಷ್ಠದ  ಸಹ ಸಂಚಾಲಕರಾದ ವಿನಾಯP Àದಹಿಂಡೆ ಬಿ.ಜೆ.ಪಿ ವಿಜಯಪುರ ನಗರ ಅಧ್ಯಕ್ಷರಾದ ಶಿವರುದ್ರ ಬಾಗಲಕೋಟ, ರಾಜು ಬಿರಾದರ, ರಾಹುಲ ಜಾಧವ್, ಪರಶುರಾಮ ಹೊಸಪೇಟ, ರಾಜಕುಮಾರ ಸಗೈ, ಬಾಬು ಯಳಘಂಟಿ, ಶಿವಾಜಿ ಪಾಟೀಲ್, ಪಾಪುಸಿಂಗ್ ರಜಪುತ, ಮೌನೇಶ ಪತ್ತಾರ, ಅನೀಲ ಉಪ್ಪರ, ಶೇಖರ ಬಾಗಲಕೋಟ, ಗುರುರಾಜ ರಾವ್, ರಾಕೇಶ ಕುಲ್ಕರ್ಣಿ ಮತ್ತು ಅನೇಕ ಕಾರ್ಯಕರ್ತರು ಇದ್ದರು.