ದೆವ್ವದ ಸನ್ನಿವೇಶ ನೋಡಿ ಬಾಲ್ಕನಿಯಿಂದ ಹಾರಿದ ವ್ಯಕ್ತಿ

ದೆವ್ವದ ಸನ್ನಿವೇಶ ನೋಡಿ ಬಾಲ್ಕನಿಯಿಂದ ಹಾರಿದ ವ್ಯಕ್ತಿ

ಬೆಂಗಳೂರು,ಅ.13: ದೆವ್ವದ ಸಿನಿಮಾ ನೋಡುವಾಗ ಭಯಬಿದ್ದ ವ್ಯಕ್ತಿಯೊಬ್ಬ ಬಾಲ್ಕನಿಯಿಂದ ಹಾರಿದ ಘಟನೆ ಬೆಂಗಳೂರಿನ ಮೇನಕಾ ಚಿತ್ರಮಂದಿರದಲ್ಲಿ ನಡೆದಿದೆ.

ಬೆಂಗಳೂರಿನ ಕೆ.ಜಿ ರಸ್ತೆಯಲ್ಲಿರೋ ಮೇನಕಾ ಚಿತ್ರಮಂದಿರದಲ್ಲಿ ‘ಗಾಯತ್ರಿ’ ಎಂಬ ದೆವ್ವದ ಸಿನಿಮಾ ಪ್ರದರ್ಶನಗೊಡಿದ್ದು, ಈ ಸಂದರ್ಭದಲ್ಲಿ ದೆವ್ವದ ಸನ್ನಿವೇಶವೊಂದು ಪರದೆ ಮೇಲೆ ಕಾಣಿಸಿಕೊಂಡಿದೆ.  ಇಷ್ಟರಲ್ಲೇ ಸಿನಿಮಾ ವೀಕ್ಷಿಸುತ್ತಿದ್ದ ವ್ಯಕ್ತಿ  ಬಾಲ್ಕನಿಯಿಂದ ಹಾರಿದ್ದು, ವ್ಯಕ್ತಿಯ ಸ್ಥಿತಿ ಗಂಭೀರವಾಗಿದೆ.

ಘಟನೆಯ ಬಳಿಕ ‘ಗಾಯತ್ರಿ’ ಸಿನಿಮಾ ಮಾರ್ನಿಂಗ್ ಶೋ ಸ್ಥಗಿತಗೊಳಿಸಿರುವುದಾಗಿ ತಿಳಿದು ಬಂದಿದೆ.