ಸಾರ್ವಜನಿಕ ಗಾಂಜಾ ಸೇವನೆ ; ಇಬ್ಬರ ಬಂಧನ

ಸಾರ್ವಜನಿಕ ಗಾಂಜಾ ಸೇವನೆ ; ಇಬ್ಬರ ಬಂಧನ

ಮಂಗಳೂರು.14: ಸಾರ್ವಜನಿಕವಾಗಿ ಗಾಂಜಾವನ್ನು ಸೇವನೆ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಪೋಲಿಸರು ಬಂಧಿಸಿದ್ದಾರೆ.

ಸೋಮವಾರದಂದು ಮಂಗಳೂರು ತಾಲೂಕು ಹರೇಕಳ ಗ್ರಾಮದ ಕಡವಿನ ಬಳಿ ಗಾಂಜಾವನ್ನು ಸೇವನೆ ಮಾಡುತ್ತಿದ್ದ ಹರೇಕಳ ವಾಸಿಗಳಾದ ಮಹಮ್ಮದ್ ಅಶ್ರಫ್ @ ಪೋಂಗ ಅಶ್ರಫ್ ಡೈಮಂಡ್ ಅಶ್ರಫ್ ಮತ್ತು ಮೊಯ್ದಿನ್ ನೌಷಾದ್ ಎಂಬವರನ್ನು ವಶಕ್ಕೆ ಪಡೆದುಕೊಂಡು ಎನ್ ಡಿ ಪಿ ಎಸ್ ಕಾಯ್ದೆಯನ್ವಯ ಪ್ರಕರಣ ದಾಖಲಿಸಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಆರೋಪಿಗಳ ಪತ್ತೆ ಕಾರ್ಯದಲ್ಲಿ ಕೊಣಾಜೆ ಪೋಲಿಸ್ ನಿರೀಕ್ಷಕರಾದ ಅಶೋಕ್ ಪಿ, ಪಿಎಸ್ ಐ ರವಿ ಪಿ ಪವಾರ್, ಎಎಸ್ ಐ ಸಂಜೀವ ಮತ್ತು ಸಿಬಂದಿಯವರಾದ ಅಶೋಕ್, ದೇವರಾಜ್ ಪಾಲ್ಗೊಂಡಿರುತ್ತಾರೆ. ಈ ಬಗ್ಗೆ ತನಿಖೆಯನ್ನು ಮುಂದುವರೆಸಲಾಗಿದೆ.