ಬೆಳಗಾವಿಯಲ್ಲೊಬ್ಬ ಮೋಸಗಾತಿ ಪತ್ನಿ

ಬೆಳಗಾವಿಯಲ್ಲೊಬ್ಬ ಮೋಸಗಾತಿ ಪತ್ನಿ

ಬೆಳಗಾವಿ,ಅ.05: ಬೆಳಗಾವಿಯಲ್ಲಿ ಎರಡನೇ ಮದುವೆಯಾದಾತ ಅದು ಪತ್ನಿಯ ಮೂರನೇ ಮದುವೆ ಎಂದು ತಿಳಿದು ಠಾಣೆ ಮೆಟ್ಟಿಲೇರಿದ್ದಾರೆ. ದೂರು ದಾಖಲಿಸಿರುವ ಮಹಾಂತೇಶ್​ ಮೊದಲ ಪತ್ನಿ ಕಾಣೆಯದಾದ ಒಂದು ವರ್ಷದ ಬಳಿಕ ಮನೆಯವರ ಒತ್ತಾಯಕ್ಕೆ ಮಣಿದು ಗೀತಾ ಎಂಬುವರನ್ನು ಮದುವೆಯಾಗಿದ್ದರು. ಗೀತಾ ಮೊದಲ ಎರಡು ಮದುವೆಗಳನ್ನು ಮುಚ್ಚಿಟ್ಟು ಮಹಾಂತೇಶ್​ರನ್ನು 3ನೇ ಮದುವೆಯಾಗಿರುವುದು ಬಯಲಾಗಿದೆ.

ನವಲಗುಂದ ತಾಲೂಕಿನ ಗುಡಿಸಾಗರ್ ಗ್ರಾಮದ ಗೀತಾ 2014ರ ಸೆಪ್ಟೆಂಬರ್ 15ರಂದು ಮಹಾಂತೇಶ್​ರನ್ನು ಮದುವೆಯಾಗಿದ್ದಾರೆ. ಆದರೆ 2015ರಲ್ಲಿ ಗೀತಾಗೆ ತಮ್ಮ 2ನೇ ಮದುವೆಯಿಂದ ವಿಚ್ಛೇದನ ಸಿಕ್ಕಿದೆ. ಮೊದಲು ಪೊಲೀಸ್​ ಅಧಿಕಾರಿಯನ್ನು ಮದುವೆಯಾಗಿದ್ದ ಗೀತಾ ನಂತರ ದೆಹಲಿ ಉದ್ಯಮಿಯನ್ನು ಮದುವೆಯಾಗಿದ್ದರು, ಅವರಿಂದಲೂ ವಿಚ್ಛೇದನ ಪಡೆದು 3ನೇ ಮದುವೆಯಾಗಿದ್ದರು.

3ನೇ ಪತಿ ಮಹಾಂತೇಶ್​ ಈಗ ಗೀತಾ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದಾರೆ.