ಹನಿಪ್ರೀತ್’ಗೆ 15 ದಿನಗಳ ನ್ಯಾಯಾಂಗ ಬಂಧನ

ಹನಿಪ್ರೀತ್’ಗೆ 15 ದಿನಗಳ ನ್ಯಾಯಾಂಗ ಬಂಧನ

ನವದೆಹಲಿ, ಅ.13: ಗುರ್ಮೀತ್ ರಾಮ್ ರಹೀಮ್ ಸಿಂಗ್ ದತ್ತುಪುತ್ರಿ ಹನೀಪ್ರೀತ್ ಇನ್ಸಾನ್ ಹಾಗೂ ಅವರ ಸಹವರ್ತಿ ಸುಖದೀಪ್ ಕೌರ್‘ರವರಿಗೆ  ಪಂಚಕುಲ ಜಿಲ್ಲಾ ನ್ಯಾಯಾಲಯ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.  ಅ. 23 ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು ಅಂಬಾಲ ಜೈಲಿಗೆ ಕಳುಹಿಸಲಾಗಿದೆ.

ಹನೀಪ್ರೀತ್’ರಿಂದ ಪೊಲೀಸರು ಮೊಬೈಲನ್ನು ವಶಪಡಿಸಿಕೊಂಡಿಸಿದ್ದಾರೆ. ಹಾಗೂ ಇತರೆ ಮಾಹಿತಿಗಳನ್ನು ಅಧ್ಯಯನ ಮಾಡುತ್ತಿದ್ದಾರೆ.

ಹೆಚ್ಚಿನ ತನಿಖೆಗಾಗಿ ಹನಿಪ್ರೀತ್’ರನ್ನು 9 ದಿನಗಳ ಕಾಲ ಪೊಲೀಸ್ ಬಂಧನಕ್ಕೆ ನೀಡಬೇಕೆಂದು ಪೊಲೀಸರು ಕೋರ್ಟ್’ಗೆ ಕೇಳಿಕೊಂಡಿದ್ದರು. ಕೋರ್ಟ್ ಅವರ ಪೊಲೀಸ್ ಬಂಧನ ಅವಧಿಯನ್ನು 3 ದಿನ  ಮುಂದೂಡಿದೆ.

ಡೇರಾ ಬೆಂಬಲಿಗರಿಗೆ 1.5 ಕೋಟಿ ರು.ವರೆಗೂ ಹಣ ನೀಡಿ ಹಿಂಸಾಚಾರಕ್ಕೆ ಹನಿಪ್ರೀತ್ ಕುಮ್ಮಕ್ಕು ನೀಡಿದ್ದಳು ಎಂದು ಕೆಲ ದಿನಗಳ ಹಿಂದಷ್ಟೇ ಪೊಲೀಸರು ತಿಳಿಸಿದ್ದರು. ವಿಚಾರಣೆ ವೇಳೆ ಅದೆಲ್ಲವನ್ನೂ ಹನಿಪ್ರೀತ್ ಒಪ್ಪಿಕೊಂಡಿದ್ದಾಳೆ. ಆ.25ರಂದು ಹಿಂಸಾಚಾರ ನಡೆಯಿತು. ಅದಕ್ಕೆ ಪೂರ್ವಭಾವಿಯಾಗಿ ಆ.17ರಂದೇ ಸಭೆ ನಡೆಸಿ, ಹಿಂಸಾ ಚಾರ ಕುರಿತ ನೀಲನಕ್ಷೆ ತಯಾರಿಸಲಾಯಿತು. ಅದರಲ್ಲಿ ನಾನು ಭಾಗಿಯಾಗಿದ್ದೆ. ಹಿಂಸಾಚಾರ ನಡೆಸಲೆಂದೇ ಡೇರಾ ಬೆಂಬಲಿಗರಿಗೆ ಹಣ ಕೊಟ್ಟು ಹೊಣೆಗಾರಿಕೆ ವಹಿಸಲಾಗಿತ್ತು ಎಂದೂ ಹೇಳಿದ್ದಾಳೆ.