ಮಕ್ಕಳ ಹಕ್ಕುಗಳ ಉಲ್ಲಂಘಣೆ ಶಿಕ್ಷಾರ್ಹ ಅಪರಾಧ : ಡಿಸಿ ಮೇಘಣ್ಣವರ

ಮಕ್ಕಳ ಹಕ್ಕುಗಳ ಉಲ್ಲಂಘಣೆ ಶಿಕ್ಷಾರ್ಹ ಅಪರಾಧ : ಡಿಸಿ ಮೇಘಣ್ಣವರ


ಬಾಗಲಕೋಟೆಜೂ.13: ಕುಟುಂಬದ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಬಾಲ್ಯದಲ್ಲಿಯೇ ಮಕ್ಕಳನ್ನು ಕೆಲಸಕ್ಕೆ ಕಳುಹಿಸುತ್ತಿರುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಎ.ಮೇಘಣ್ಣವರ ತಿಳಿಸಿದರು.

    ಜಿಲ್ಲಾ ಪಂಚಾಯತ ಸಭಾಭವನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕಾರ್ಮಿಕ ಇಲಾಕೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವ ಬಾಲಕಾರ್ಮಿಕಿ ಪದ್ದತಿ ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬಾಲ ಕಾರ್ಮಿಕ ಪದ್ದತಿಯನ್ನು ನಿಷೇಧಿಸಿದ್ದರೂ ಕೂಟ ವಾಸ್ತವದಲ್ಲಿ ನಾವು ಬಾಲ ಕಾರ್ಮಿಕರನ್ನು ಕಾಣುತ್ತಿರುವುದು ದುರದುಷ್ಟರಕರ ಸಂಗತಿಯಾಗಿದೆ ಎಂದರು.

    ಬಾಲ ಕಾರ್ಮಿಕ ನಿರ್ಮೂಲನೆಗೆ ಸರಕಾರ ಅನೇಕ ಕಾಯ್ದೆ ಕಾನೂನುಗಳನ್ನು ಜಾರಿಗೆ ತಂದಿದೆ. ಬಾಲ ಕಾರ್ಮಿಕರಾಗಲು ಬಡತನ, ಅಷ್ಪ್ರುಶ್ಯತೆ, ಅನಿಷ್ಟ ಪದ್ದತಿಗಳೇ ಇದಕ್ಕೆ ಶಾಪವಾಗಿ ಪರಿಣಮಿಸಿದ್ದು, ಇದನ್ನು ತೊಡೆದು ಹಾಕಬೇಕಾದರೆ ಸರ್ವರಿಗೂ ಶಿಕ್ಷಣ ಅಗತ್ಯವೆಂದರು. ಸರಕಾರ 6 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಉಚಿತ ಕಡ್ಡಾಯ ಶಿಕ್ಷಣ ಜಾರಿಗೆ ತಂದಿದ್ದು, ಶಿಕ್ಷಣಕ್ಕಾಗಿ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡುತ್ತಿದೆ. ಅಲ್ಲದೇ ಬಾಲ ಕಾರ್ಮಿಕ ನಿರ್ಮೂಲನೆಗೆ 11 ಇಲಾಖೆಗಳು ಕಾರ್ಯನಿರ್ವಹಿಸುತ್ತಿದ್ದು, ಈ ಪದ್ದತಿ ತೊಡೆದು ಹಾಕಲು ಎಲ್ಲರ ಸಹಕಾರ ಅಗತ್ಯವೆಂದರು.    

ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ತರುವ ಕೆಲಸ ಪ್ರತಿಯೊಬ್ಬರ ನಾಗರಿಕರನ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಬದ್ದತೆಯಿಂದ ಕೆಲಸ ನಿರ್ವಹಿಸಬೇಕು. ಗ್ರಾಮ ಪಂಚಾಯತಿ ಮಟ್ಟದಿಂದ ಹಿಡಿದು ನಗರ ಪಟ್ಟಣದ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬಾಲಕಾರ್ಮಿಕ ಪದ್ದತಿಯನ್ನು ವಿರೋಧಿಸಲು ಅರಿವು ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು. ಮಕ್ಕಳ ಗ್ರಾಮ ಸಭೆ ಕಾಟಾಚಾರದ ಸಭೆಗಳಾಗಬಾರದು ಎಂದರು. ಗ್ರಾಮ ಸಭೆಗಳಿಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ಈ ಪದ್ದತಿಯನ್ನು ಬೇರು ಸಮೇತ ಕಿತ್ತೊಗೆಯಲು ಪಣ ತೊಡಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಖ್ಯಾತ ನ್ಯಾಯವಾಧಿ ಪಿ.ಎಸ್.ಭೈರಮಟ್ಟಿ ಅತಿಥಿ ಉಪನ್ಯಾಸದಲ್ಲಿ ಬಾಲ್ಯಾವಸ್ಥೆಯಲಿರುವ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಕೊಡಿಸಿ ಸತ್ಪ್ರಜೆಯನ್ನಾಗಿರುಸ ಕೆಲಸ ಪ್ರಜ್ಞಾನವಂತ ನಾಗರಿಕ ಕೆಲಸವಾಗಬೇಕು. ಬಾಲಕಾರ್ಮಿಕ ಪದ್ದತಿಯನ್ನು ತೊಡೆದು ಹಾಕಲು ಸರಕಾರ ಕಾಯ್ದೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುವ ಕೆಲಸವಾಗಬೇಕು. ಮಕ್ಕಳ ಮೇಲೆ ಆಗುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟಲು ಸರಕಾರ 12 ಇಲಾಖೆಯಲ್ಲಿ ನಿರೀಕ್ಷಕರನ್ನು ನೇಮಿಸಲಾಗಿದೆ. ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟು ವಿದ್ಯಾವಂತರನ್ನಾಗಿ ಮಾಡಿದಾಗ ಮಾತ್ರ ಈ ಪದ್ದತಿಯನ್ನು ನಿರ್ಮೂಲನೆ ಮಾಡಲು ಸಾದ್ಯವೆಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅಬ್ದುಲ್ರಾಹೀಮ್ ಹುಸೇನ್ ಶೇಖ್ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದ ಅವರು ಕಾಯ್ದೆಗಳ ಪಾಲನೆಯಲ್ಲಿ ಅಧಿಕಾರಿಗಳು ಹಾಗೂ ನಾಗರಿಕರು ತಮ್ಮ ಕರ್ತವ್ಯ ಪಾಲಿಸಬೇಕು. ಕಾನೂನು ಅನುಷ್ಠಾನದಲ್ಲಿ ತರುವಲ್ಲಿ ಎಲ್ಲ ಸಹಕಾರ ಅಗತ್ಯವಾಗಿದೆ. ಶ್ರಿಮಂತರ ಮನೆ ಹಾಗೂ ಹೋಟೆಲ್ಗ್ಳಲ್ಲಿ ಹೆಚ್ಚಾಗಿ ಮಕ್ಕಳ ದುಡಿಯುತ್ತಿರುವುದು ಕಂಡುಬರುತ್ತಿದ್ದು, ಈ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆ ಮುತುವರ್ಜಿ ವಹಿಸಿ, ಅಂತವರನ್ನು ಶಿಕ್ಷೆಗೆ ಗುರಿಪಡಿಸುವ ಕೆಲಸವಾಗುವಂತೆ ಮಾಡಬೇಕು ಎಂದರು.  

ವೇದಿಕೆಯಲ್ಲಿ ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಅಮರೇಶ ನಾಯಕ, ಉಪವಿಭಾಗಾಧಿಕಾರಿ ಶಂಕರಗೌಡ ಸೋಮನಾಳ, ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್.ಪವಾಡಶೆಟ್ಟರ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾರ್ಮಿಕರು, ವಿದ್ಯಾರ್ಥಿಗಳು ಎನ್ಜಿ ಓ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಕಾರ್ಮಿಕ ಅಧಿಕಾರಿ ಎಂ.ಬಿ.ಅನ್ಸಾರಿ ಸ್ವಾಗತಿಸಿದರು, ಜಿಲ್ಲಾ ಬಾಲಕಾರ್ಮಿಕ ಸಂಸ್ಥೆಯ ಯೋಜನಾ ನಿರ್ದೇಶಕ ಸುಧಾಕರ ಬಡಿಗೇರ ವಂದಿಸಿದರು. ಜಾಸ್ಮೀನ್ ಕಿಲ್ಲೆದಾರ ನಿರೂಪಿಸಿದರು.