49 ಜೀವಂತ ಗುಂಡಿನ ಸಮೇತ 20 ಕಂಟ್ರಿ ಪಿಸ್ತೂಲ್ ವಶಕ್ಕೆ 

49 ಜೀವಂತ ಗುಂಡಿನ ಸಮೇತ 20 ಕಂಟ್ರಿ ಪಿಸ್ತೂಲ್ ವಶಕ್ಕೆ 

ವಿಜಯಪುರ: ವಿಜಯಪುರ ಜಿಲ್ಲಾ ಪೊಲೀಸ್ ಇಲಾಖೆ 49 ಜೀವಂತ ಗುಂಡುಗಳೊಂದಿಗೆ ಒಟ್ಟು 20 ಕಂಟ್ರಿ ಪಿಸ್ತೂಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ.
ಉತ್ತರ ವಲಯದಲ್ಲಿ ಇದೇ ಮೊದಲ ಬಾರಿಗೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕಂಟ್ರಿ ಪಿಸ್ತೂಲ್‍ಗಳ ವಶಪಡಿಸಿಕೊಂಡಿರುವ ಜಿಲ್ಲಾ ಪೆÇಲೀಸರು 12 ಜನರನ್ನು ಬಂಧಿಸಿದ್ದಾರೆ. ಮಧ್ಯಪ್ರದೇಶದ ಧಾರ ಜಿಲ್ಲೆವರೆಗೂ ಹೋಗಿರುವ ಪೆÇಲೀಸರು ಅಲ್ಲಿನ ಗಂಧವಾಣಿಯ ಬಚ್ಚನಸಿಂಗ್ ಮಾನಸಿಂಗ್ ಸರ್ದಾರ್ ಹಾಗೂ ಆತನ ಸಂಬಂಧಿಕ ತನಮನಸಿಂಗ್ ಎಂಬುವರ ಬೆನ್ನು ಬಿದ್ದು, ಅವರೊಂದಿಗೆ ನಿಕಟ ಸಂಬಂಧ ಹೊಂದಿದ 12 ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಐಜಿ ಡಾ.ಕೆ. ರಾಮಚಂದ್ರರಾವ್ ಅವರಿಂದ 1 ಲಕ್ಷ ರೂ. ಬಹುಮಾನ ಪಡೆದಿದ್ದಾರೆ.
ಬಂಧಿತರಲ್ಲಿ ಇಂಡಿ ತಾಲೂಕಿನ ರೇವಪ್ಪಮಡ್ಡಿಯ ಅಲ್ತಾಫ್ ಮಹಿಬೂಬಸಾಬ ವಾಲೀಕಾರ, ಸಾಲೋಟಗಿ ಗ್ರಾಮದ ಸೋಮಣ್ಣ ಮಲ್ಲಪ್ಪ ಅಗಸರ ಹಾಗೂ ಗುರುಬಸಪ್ಪ ಸಿದ್ದಣ್ಣ ದೊಡ್ಡಗಾರಣಗೇರ, ಪಡನೂರಿನ ಗಣಪತಿ ಭೀಮಾಶಂಕರ ವೀರಶಟ್ಟಿ, ಸಿಂದಗಿ ತಾಲೂಕಿನ ಸಮೀರ ರಜಾಕಸಾಬ ಯರಗಲ್ಲ, ಕೋಲಾರದ ಗೈಬು ಹಾಜಿಸಾಬ ಸಾರವಾಡ, ಕಲಬುರ್ಗಿ ಜಿಲ್ಲೆ ನರೋಣಾದ ಕೈಲಾಸ ಅರ್ಜುನ ದೇಕುಣ (26), ಅ-Àಜಲಪೂರ ತಾಲೂಕಿನ ದಿಕ್ಸಂಗಿಯ ಗೌಡಪ್ಪ ಶರಣಪ್ಪ ಕೊಕಟನೂರ (25), ವಾಡಿಯ ಹುಸೇನಪಟೇಲ ಸಾಹೇಬಪಟೇಲ, ವಿಜಯಪುರದ -Àಜಲಪೂರ ಟಕ್ಕೆ ನಿವಾಸಿ ಹೈದರ ಮೌಲಾಸಾಬ ಜಾಲಗೇರಿ, ಗೌಸ್ ಅನೀಸ್ ಸುತಾರ ಇದ್ದಾರೆ.
ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಕುಲದೀಪ ಜೈನ್ ಅವರ ಮಾರ್ಗದರ್ಶನದಲ್ಲಿ ಈಚೆಗಷ್ಟೇ ಅಕ್ರಮ ಪಿಸ್ತೂಲ್ ಮಾರಾಟ ಜಾಲ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು. ಹೆಚ್ಚಿವರಿ ಪೆÇಲೀಸ್ ವರಿಷ್ಠಾಧಿಕಾರಿ ಶಿವಕುಮಾರ ಗುಣಾರಿ ನೇತೃತ್ವದಲ್ಲಿ ಡಿಎಸ್‍ಪಿ ರವೀಂದ್ರ ಶಿರೂರ, ಚಂದ್ರಕಾಂತ ನಂದರೆಡ್ಡಿ, ರವೀಂದ್ರ ನಾಯ್ಕೋಡಿ, ಎಂ.ಬಿ. ಅಸೋದೆ ಎಂಬ ಘಟಾನುಘಟಿ ಅಧಿಕಾರಿಗಳನ್ನೊಳಗೊಂಡ ತಂಡ ಕಂಟ್ರೀ ಪಿಸ್ತೂಲ್ ಮಾರಾಟಗಾರರನ್ನು ಬಂಧಿಸಿದ್ದಾರೆ.
ನಗರದ ದರ್ಗಾ ಜೈಲ್‍ನಲ್ಲಿರುವ ನಂದರಗಿಯ ಯೇಜಾಜ್ ಬಂದೇನವಾಜ್ ಪಟೇಲ್ ಎಂಬಾತನೊಂದಿಗೆ ನಂಟು ಹೊಂದಿದ್ದ ಮಧ್ಯಪ್ರದೇಶದ ಧಾರ ಜಿಲ್ಲೆ ಸರ್ಧಾರ್‍ಗಳನ್ನು ವಿಚಾರಿಸಲಾಗಿ ಈ ಜಾಲ ಪತ್ತೆಯಾಗಿದೆ ಎಂದು ಐಜಿ ರಾಮಚಂದ್ರರಾವ್ ಅವರು ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.
ರಾಜ್ಯದ ಬೀದರ್, ಕಲಬುರ್ಗಿ ಹಾಗೂ ವಿಜಯಪುರ ಜಿಲ್ಲೆಗಳಿಗೆ ಇದೇ ಮಧ್ಯಪ್ರದೇಶದ ರೂವಾರಿಗಳು ಪಿಸ್ತೂಲ್ ಸರಬರಾಜು ಮಾಡುತ್ತಿದ್ದಾರೆ. ಶೀಘ್ರದಲ್ಲೇ ಅವರ ಬಂಧನಕ್ಕೆ ಮುಹೂರ್ತ ನಿಗದಿಗೊಳಿಸಲಾಗುವುದು ಎಂದರು.

ಅಂತಾರಾಜ್ಯ ಕಳ್ಳರ ಬಂಧನ :
ಮಧ್ಯಪ್ರದೇಶದಿಂದ ಬಂದು ಜಿಲ್ಲೆಯಲ್ಲಿ ಮನೆಗಳ್ಳತನ ನಡೆಸುತ್ತಿದ್ದ ಇಬ್ಬರು ಅಂತಾರಾಜ್ಯ ಕಳ್ಳರನ್ನು ಬಂಧಿಸಿರುವ ಪೆÇಲೀಸರು 7 ಲಕ್ಷ ರೂ.ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣ ವಶಪಡಿಸಿಕೊಂಡಿದ್ದಾರೆ. ಬಾದಲ್ ಸಾಹಿತ್ರಿ (20) ಹಾಗೂ ಪದಂ ಅಲಿಯಾಸ್ ಫಿರ್ದುಮ್ ಶಿವಭಕ್ಷ (21) ಎಂಬುವರು ಬಂಧಿತ ಆರೋಪಿಗಳು. ಕಳೆದ 3 ತಿಂಗಳಿನಿಂದ ನಗರದಲ್ಲಿ ಬೀಡು ಬಿಟ್ಟಿದ್ದ ಇವರು ಐದು ಮನೆಗಳ್ಳತನ ನಡೆಸಿದ್ದಾರೆ. ಇವರನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿ ಆಗಬಹುದಾಗಿದ್ದ ದೊಡ್ಡ ಪ್ರಮಾಣದ ಕಳ್ಳತನಕ್ಕೆ ತಡೆ ಬಿದ್ದಿದೆ. ಇವರಿಂದ 200 ಗ್ರಾಂ ಚಿನ್ನಾಭರಣ, 1ಕೆಜಿ ಬೆಳ್ಳಿ ಆಭರಣ, 8 ವಾಚ್, 7 ಲಕ್ಷ ರೂ.ನಗದು ವಶಪಡಿಸಿಕೊಳ್ಳಲಾಗಿದೆ. ತನಿಖಾ ತಂಡದಲ್ಲಿದ್ದ ಸಿಪಿಐ ಸುನೀಲ ಕಾಂಬಳೆ, ಪಿಎಸ್‍ಐ ಎನ್.ಎಸ್.ಜನಗೌಡ, ಎಸ್.ಎಸ್. ಮಾಳೆಗಾಂವ, ಬಿ.ಎಂ. ಪವಾರ, ಟಿ.ಎಂ. ಸೋಲಾರ್, ಶಿವು ಅಳ್ಳಿಗಿಡದ, ಸಿದ್ದು ದಾನಪ್ಪಗೋಳ ಇನ್ನಿತರರಿಗೆ 25 ಸಾವಿರ ಬಹುಮಾನ ಘೋಷಿಸಿರುವುದಾಗಿ ಐಜಿ ರಾಮಚಂದ್ರರಾವ್ ತಿಳಿಸಿದರು.

22 ಮೋಟರ್ ಸೈಕಲ್ ವಶ :
ವಿಜಯಪುರ ಸೇರಿದಂತೆ ನೆರೆಯ ಜಿಲ್ಲೆಗಳಲ್ಲಿ ಬೈಕ್ ಕಳ್ಳತನ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೆÇಲೀಸರು 22 ಬೈಕ್‍ಗಳನ್ನು ವಶಪಡಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಚಿಕ್ಕೋಡಿ ತಾಲೂಕಿನ ಅಲ್ಲಾಪುರದ ನಿವಾಸಿ ಕುಶಪ್ಪ ರುಕ್ಕವ್ವ ತಳವಾರ (43) ಹಾಗೂ ಸಿಂದಗಿ ತಾಲೂಕಿನ ಖೈನೂರ ಗ್ರಾಮದ ಬಸಪ್ಪ ಅಮೋ ನಾಯ್ಕೋಡಿ (35) ಬಂಧಿತರು.
ಕಳೆದ ಐದಾರು ತಿಂಗಳಿನಿಂದ ಬೆಳಗಾವಿ ಜಿಲ್ಲೆ ಅಥಣಿ, ಚಿಕ್ಕೋಡಿ ಹಾಗೂ ಕಲಬುರ್ಗಿ ಮತ್ತು ಹುಬ್ಬಳ್ಳಿ ಸುತ್ತಲಿನ ಭಾಗಗಳಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಇವರನ್ನು ಇಂಡಿ ಉಪವಿಭಾಗದ ಡಿಎಸ್‍ಪಿ ರವೀಂದ್ರ ಶಿರೂರ ಹಾಗೂ ಸಿಪಿಐ ಎಸ್.ಬಿ. ನ್ಯಾಮಣ್ಣವರ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಪೆÇಲೀಸರು ಯಶಸ್ವಿಯಾಗಿದ್ದಾರೆ. ಈ ತಂಡ 25 ಸಾವಿರ ರೂ.ಬಹುಮಾನ ಪಡೆಯಿತು.