ಅತಿಯಾದ ಚಳಿಗೆ 1 ವರ್ಷದ ಮಗು ಮೃತ

ಅತಿಯಾದ ಚಳಿಗೆ 1 ವರ್ಷದ ಮಗು ಮೃತ

ಚಿಕ್ಕಬಳ್ಳಾಪುರ,30 : ಕಂದವಾರ ನಿರಾಶ್ರಿತರ ಪುನರ್ವಸತಿ ಕೇಂದ್ರದಲ್ಲಿ ಅತಿಯಾದ ಚಳಿಗೆ 1 ವರ್ಷದ ಮಗು ಮೃತಪಟ್ಟಿದೆ.

ಸಯ್ಯದಾನಿ, ಖಾದರ್ ಪಾಷಾ ದಂಪತಿಯ ಪುತ್ರಿ ಬಾನು ಎನ್ನುವ ಮಗುವೇ ಮೃತಪಟ್ಟಿರುವ ದುರ್ದೈವಿ. ದಂಪತಿಗೆ ವಾಸಿಸಲು ಮನೆ ಇಲ್ಲದ ಕಾರಣ ಚಿಕ್ಕಬಳ್ಳಾಪುರ ನಗರಸಭೆಯಿಂದ ಬಸಪ್ಪ ಛತ್ರದಲ್ಲಿ ಕಬ್ಬಿಣದ ಶೀಟ್​ಗಳಿಂದ ನಿರ್ಮಿಸಲಾದ ಶೆಡ್‌ನಲ್ಲಿ ವಾಸವಾಗಿದ್ದರು. ಶೆಡ್​ನೊಳಗೆ ಅತಿಯಾದ ಚಳಿಯನ್ನು ಸಹಿಸಿಕೊಳ್ಳಲಾಗದೆ ಮಗು ಮೃತಪಟ್ಟಿದೆ.

ಜಿಲ್ಲೆಯಲ್ಲಿ ತಾಪಮಾನ ಕನಿಷ್ಠ 14 ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಠ 26 ಡಿಗ್ರಿ ಸೆಲ್ಸಿಯಸ್​ ದಾಖಲಾಗಿತ್ತು.