ಮೊದಲ ಇನಿಂಗ್ಸ್‌ 300 ರನ್‌ಗೆ ಆಲೌಟ್‌  ಆಸ್ಟ್ರೇಲಿಯಾ

ಮೊದಲ ಇನಿಂಗ್ಸ್‌ 300 ರನ್‌ಗೆ ಆಲೌಟ್‌  ಆಸ್ಟ್ರೇಲಿಯಾ

ಬಾರ್ಡರ್‌–ಗಾವಸ್ಕರ್ ಟ್ರೋಫಿಯ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ನಲ್ಲಿ 88.3 ಓವರ್‌ಗಳಲ್ಲಿ 300 ರನ್‌ ಗಳಿಸಿ ಆಲೌಟ್‌ ಆಗಿದೆ. ಬಾರ್ಡರ್‌–ಗಾವಸ್ಕರ್ ಟ್ರೋಫಿಯ ನಾಲ್ಕನೇ ಟೆಸ್ಟ್‌ ಪಂದ್ಯ ಹಿಮಾಚಲ ಪ್ರದೇಶ ಕ್ರಿಕೆಟ್‌ ಸಂಸ್ಥೆಯ ಮೈದಾನದಲ್ಲಿ ಶನಿವಾರ ಆರಂಭವಾಗಿದ್ದು, ಮೊದಲು ಟಾಸ್‌ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತ್ತು.

ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವನ್‌ ಸ್ಮಿತ್‌ (111) ಶತಕ ಸಿಡಿಸಿ ಸಂಭ್ರಮಿಸಿದ್ದರು. ಆಸ್ಟ್ರೇಲಿಯಾ ಪರ:  ಮ್ಯಾಟ್‌ ರೆನ್‌ಷಾ 01, ಡೇವಿಡ್‌ ವಾರ್ನರ್‌ 56 , ಸ್ಟೀವನ್‌ ಸ್ಮಿತ್‌ 111, ಶಾನ್‌ ಮಾರ್ಷ್‌ 04, ಪೀಟರ್‌ ಹ್ಯಾಂಡ್ಸ್‌ಕಂಬ್‌ 08, ಮ್ಯಾಥ್ಯೂ ವೇಡ್‌ 57,  ಪ್ಯಾಟ್‌ ಕಮಿನ್ಸ್‌ 21, ಸ್ಟೀವ್‌ ಓ ಕೀಫ್‌ 08, ನೇಥನ್‌ ಲಾಯನ್‌ 13, ಜೋಶ್‌ ಹ್ಯಾಜಲ್‌ವುಡ್‌ ಬ್ಯಾಟಿಂಗ್‌ 02 ರನ್‌ ಗಳಿಸಿದ್ದಾರೆ. ಭಾರತದ ಪರ: ಕುಲದೀಪ್‌ ಯಾದವ್‌ 4, ಭುವನೇಶ್ವರ್‌ ಕುಮಾರ್‌ 1, ಉಮೇಶ್‌ ಯಾದವ್‌ 2, ರವೀಂದ್ರ ಜಡೇಜ 1, ಆರ್‌. ಅಶ್ವಿನ್‌ 1 ವಿಕೆಟ್‌ ಪಡೆದರು.