ಕ್ರಿಕೆಟ್ ಆಟದ ವೇಳೆ ಬಾಲ್ ಬಡಿದು ಯುವಕನ ಸಾವು

ಕ್ರಿಕೆಟ್ ಆಟದ ವೇಳೆ ಬಾಲ್ ಬಡಿದು ಯುವಕನ ಸಾವು

ಢಾಕಾ,ಅ. 07.: ಲೋಕಲ್ ಕ್ರಿಕೆಟ್ ಪಂದ್ಯದಲ್ಲಿ ಅಂಪೈರಿಂಗ್ ಮಾಡುತ್ತಿದ್ದ ವ್ಯಕ್ತಿಯೊಬ್ಬ ದುರಂತ ಸಾವನ್ನಪ್ಪಿದ ಘಟನೆ ವರದಿಯಾಗಿದೆ. 17 ವರ್ಷದ ರಫೀಕುಲ್ ಇಸ್ಲಾಮ್ ಮೃತಪಟ್ಟ ದುರ್ದೈವಿ. ಬಾಲೂರ್ ಮಠ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಅಂಪೈರ್ ಆಗಿದ್ದ ರಫೀಕುಲ್'ನ ಎದೆಗೆ ಚೆಂಡು ತಗುಲಿ ಈ ದುರಂತ ಸಂಭವಿಸಿದೆ. ಗಂಭೀರ ಸ್ಥಿತಿಯಲ್ಲಿದ್ದ ಬಾಂಗ್ಲಾದೇಶೀ ಬಾಲಕನನ್ನು ಕೂಡಲೇ ಡಾಕಾ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಜೀವ ಉಳಿಯಲಿಲ್ಲ.

ವೃತ್ತಿಪರ ಕ್ರಿಕೆಟ್'ನಲ್ಲಿ ಮೈದಾನದಲ್ಲೇ ಆಟಗಾರರು ದುರಂತ ಸಾವನ್ನಪ್ಪಿದ ಪ್ರಕರಣಗಳು ಈ ಹಿಂದೆ ಹತ್ತಾರು ಸಂಭವಿಸಿವೆ. ತೀರಾ ಇತ್ತೀಚೆಗೆ ಆಸ್ಟ್ರೇಲಿಯಾದ ಫಿಲಿಪ್ ಹ್ಯೂಸ್ ಕೂಡ ಸಾವನ್ನಪ್ಪಿದ್ದರು. ಹ್ಯೂಸ್ ಸಾವು ವಿಶ್ವಾದ್ಯಂತ ದೊಡ್ಡ ಸುದ್ದಿಯಾಗಿತ್ತು.