ಭಾರತಕ್ಕೆ 2 – 1 ಅಂತರದಿಂದ ಸರಣಿ ಗೆಲುವು

ಭಾರತಕ್ಕೆ 2 – 1 ಅಂತರದಿಂದ ಸರಣಿ ಗೆಲುವು

ತಿರುವನಂತಪುರಂ,ನ.೮: ಪ್ರವಾಸಿ ನ್ಯೂಜಿಲೆಂಡ್​ ವಿರುದ್ಧದ ಮೂರನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಭಾರತ ತಂಡವು 6 ರನ್​ಗಳ ರೋಚಕ ಜಯ ದಾಖಲಿಸಿದ್ದು, ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿದೆ.

ಭಾರತ ನೀಡಿದ 68 ರನ್​ ಗುರಿಯನ್ನು ಬೆನ್ನತ್ತಿದ ನ್ಯೂಜಿಲೆಂಡ್​ ತಂಡ ನಿಗದಿತ 8 ಓವರ್​ಗಳಲ್ಲಿ 6 ವಿಕೆಟ್​ ಕಳೆದುಕೊಂಡು 61 ರನ್​ ಗಳಿಸಿತು. ನ್ಯೂಜಿಲೆಂಡ್​ ಪರ ಕೇನ್​ ವಿಲಿಯಮ್ಸ್​ (8), ಕೋಲಿನ್​ ಮುನ್ರೋ (7) ರನ್​, ಗ್ಲೇನ್​ ಫಿಲಿಪ್ಸ್​ (11), ಗ್ರಾಂಡ್​ ಹೋಮ್​ (17) ರನ್​ ಗಳಿಸಿದರು.

ಭಾರತದ ಪರ ಜಸ್ಪ್ರೀತ್​ ಬೂಮ್ರಾ 2 , ಭುವನೇಶ್ವರ್​ ಕುಮಾರ್​ ಮತ್ತು ಕುಲದೀಪ್​ ಯಾದವ್​ ತಲಾ ಒಂದು ವಿಕೆಟ್​ ಪಡೆದರು.
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಭಾರತ ತಂಡವು ನಿಗದಿತ 8 ಓವರ್​ಗಳಲ್ಲಿ 5 ವಿಕೆಟ್​ ಕಳೆದುಕೊಂಡು 67 ರನ್​ ಗಳಿಸಿತು.