ಭಾರತಕ್ಕೆ ಇನ್ನಿಂಗ್ಸ್ ಜಯ, ಅಶ್ವಿನ್ ವಿಕೆಟ್ ದಾಖಲೆ

ಭಾರತಕ್ಕೆ ಇನ್ನಿಂಗ್ಸ್ ಜಯ, ಅಶ್ವಿನ್ ವಿಕೆಟ್ ದಾಖಲೆ

ದೆಹಲಿ,ನ.27: ಭಾರತದ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಟೆಸ್ಟ್ ಕ್ರಿಕೆಟ್ ನಲ್ಲಿ ವೇಗವಾಗಿ 300 ವಿಕೆಟ್ ಪಡೆದ ದಾಖಲೆ ಬರೆದರು.

ವಿಸಿಎ ಕ್ರೀಡಾಂಗಣಲ್ಲಿ ಸೋಮವಾರ ಕೊನೆಗೊಂಡ ಶ್ರೀಲಂಕಾ ವಿರುದ್ಧದ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಗಾಮಗೆ (0) ಅವರನ್ನು ಔಟ್ ಮಾಡುವ ಮೂಲಕ 300 ವಿಕೆಟ್ ಗಳ ದಾಖಲೆ ನಿರ್ಮಿಸಿದರು. ಇದರೊಂದಿಗೆ ಆಸ್ಟ್ರೇಲಿ ಯದ ಡೆನ್ನಿಸ್ ಲಿಲ್ಲಿ ಅವರ 36 ವರ್ಷಗಳ ಹಿಂದಿನ ದಾಖಲೆಯನ್ನು ಮುರಿ ದಂತಾಯಿತು.

ಲಹಿರು ಗಾಮಗೆ ಔಟಾಗುವುದರೊಂದಿಗೆ ಶ್ರೀಲಂಕಾ ಎಲ್ಲಾ ವಿಕೆಟ್ ಕಳೆದು ಕೊಂಡಿತು. ಭಾರತ ಇನಿಂಗ್ಸ್ ಹಾಗೂ 239 ರನ್ಗಳ ಜಯ ದಾಖಲಿಸಿತು. ಅಶ್ವಿನ್ ಎರಡನೇ ಇನಿಂಗ್ಸ್ ನಲ್ಲಿ ಶ್ರೀಲಂಕಾದ 4 ವಿಕೆಟ್(63ಕ್ಕೆ 4) ವಿಕೆಟ್ ಪಡೆದಿದ್ದಾರೆ. ಮೊದಲ ಇನ್ನಿಂಗ್ಸ್ ನಲ್ಲಿ 67ಕ್ಕೆ 4 ವಿಕೆಟ್ ಸೇರಿದಂತೆ ಒಟ್ಟು 8 ವಿಕೆಟ್ ಪಡೆದಿದ್ದಾರೆ.

6 ವರ್ಷಗಳ ಹಿಂದೆ ಟೆಸ್ಟ್ ಗೆ ಪಾದಾರ್ಪಣೆ ಮಾಡಿದ್ದ ಅಶ್ವಿನ್ ತನ್ನ 54ನೇ ಟೆಸ್ಟ್ ನಲ್ಲಿ 300 ವಿಕೆಟ್ ಪಡೆದು ದಾಖಲೆ ನಿರ್ಮಿಸಿ ದ್ದಾರೆ. ಲಿಲ್ಲಿ 1981ರಲ್ಲಿ 56 ಪಂದ್ಯಗಳಿಂದ 300 ವಿಕೆಟ್ ಪಡೆದಿದ್ದರು.