ಎಬಿಎಂಎಂ ಹಾಗೂ ಬಾದಾಮಿಯ ಚಾಲುಕ್ಯ ವಾರಿಯರ್ಸ್ ತಂಡಗಳು ಸೆಣಸಾಟ

ಎಬಿಎಂಎಂ ಹಾಗೂ ಬಾದಾಮಿಯ ಚಾಲುಕ್ಯ ವಾರಿಯರ್ಸ್ ತಂಡಗಳು ಸೆಣಸಾಟ

ಬಾಗಲಕೋಟೆ,ಡಿ.25: : ಮೈದಾನದಲ್ಲಿ ಬಾಗಲಕೋಟದ ಎಬಿಎಂಎಂ ಹಾಗೂ ಬಾದಾಮಿಯ ಚಾಲುಕ್ಯ ವಾರಿಯರ್ಸ್ ತಂಡಗಳು ಸೆಣಸಲಿವೆ. ಇನ್ನೊಂದು ಪಂದ್ಯದಲ್ಲಿ ವೆಂಕಟಪೇಟದ ವಿಜಯಧ್ವಜ ಹಾಗೂ ಜಮಖಂಡಿಯ ಮಾಧವನ್ ತಂಡಗಳು ಪ್ರಶಸ್ತಿಗಾಗಿ ಹೋರಾಡಲಿವೆ. ಮಧ್ಯಾಹ್ನ 3ಕ್ಕೆ ಫೈನಲ್ ಪಂದ್ಯ ನಡೆಯಲಿದೆ. 
ಬೆಳಗ್ಗೆ ನಡೆದ ಮೊದಲ ಪಂದ್ಯದಲ್ಲಿ ವಿದ್ಯಾಗಿರಿ ವಾರಿಯರ್ಸ್ ವಿರುದ್ಧ ವೆಂಕಟಪೇಟದ ವಿಜಯಧ್ವಜ ತಂಡ ಗೆಲುವು ಸಾಸಿತು. ವೆಂಕಟಪೇಟ ಪರ ರಾಘು ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ನಿಗದಿತ 10 ಓವರ್‍ಗಳಲ್ಲಿ ವೆಂಕಟಪೇಟ ತಂಡ 5 ವಿಕೆಟ್ ಕಳೆದುಕೊಂಡು 152 ರನ್ ಗಳಿಸಿತು. ಗುರಿ ಬೆಂಬತ್ತಿದ ವಿದ್ಯಾಗಿರಿ ತಂಡದ ಆದರ್ಶ ಮುತಾಲಿಕ ದೇಸಾಯಿ (51) ಅತ್ಯುತ್ತಮ ಬ್ಯಾಟಿಂಗ್ ಮಧ್ಯೆಯೂ 25 ರನ್‍ಗಳಿಂದ ಸೋಲನುಭವಿಸಿತು. ಆದರ್ಶ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು. 
ಇನ್ನೊಂದು ಪಂದ್ಯದಲ್ಲಿ ಬಾದಾಮಿಯ ಚಾಲುಕ್ಯ ವಾರಿಯರ್ಸ್ ತಂಡ ಕಿಲ್ಲಾ ಚಾವಡಿ ತಂಡವನ್ನು 12 ರನ್‍ಗಳಿಂದ ಪರಾಭವಗೊಳಿಸಿತು. ಮೊದಲು ಬ್ಯಾಟ್ ಮಾಡಿದ ಬಾದಾಮಿ ತಂಡದ ವಾದಿರಾಜ (49) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಕಿಲ್ಲಾ ತಂಡದ ನವೀನ್ ದೇಶಪಾಂಡೆ ಬ್ಯಾಟಿಂಗ್‍ನಿಂದಾಗಿ ಗೆಲುವಿನ ಸನಿಹದಲ್ಲಿತ್ತು. ಆದರೆ ಬಾದಾಮಿ ತಂಡದ ಕರಾರುವಾಕ್ ಬೌಲಿಂಗ್‍ನಿಂದ ಕಿಲ್ಲಾ ತಂಡ ಸೋಲು ಕಂಡಿತು. ವಾದಿರಾಜ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು. 
ಮೂರನೇ ಕ್ವಾರ್ಟರ್ ಫೈನಲ್‍ನಲ್ಲಿ ಬಾಗಲಕೋಟದ ಪಾಂಚಜನ್ಯ ತಂಡಕ್ಕೆ ಜಮಖಂಡಿಯ ಮಾಧವನ್ ತಂಡ ಸೋಲುಣಿಸಿತು. 127 ರನ್‍ಗಳ ಗುರಿ ಬೆನ್ನತ್ತಿದ್ದ ಪಾಂಚಜನ್ಯ 102 ರನ್ ಮಾತ್ರ ಗಳಿಸಿತು. ಕಿರಣ ಬಾಬಾನಗರ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.  ನಾಲ್ಕನೇ ಪಂದ್ಯದಲ್ಲಿ ಬಾಗಲಕೋಟದ ಎಬಿಎಂಎಂ ತಂಡ ಬಾಗಲಕೋಟದ ರೈಸಿಂಗ್ ಸನ್ ತಂಡವನ್ನು ಪರಾಭವಗೊಳಿಸಿತು. ಎಬಿಎಂಎಂ ತಂಡವೊಡ್ಡಿದ್ದ 161 ರನ್‍ಗಳ ಗುರಿ ಬೆನ್ನತ್ತಿದ ರೈಸಿಂಗ್ ಸನ್ 71 ರನ್ ಮಾತ್ರ ಗಳಿಸಿತು. 81 ರನ್ ಗಳಿಸಿದ ಅನೀಷ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.