ಭಾರತೀಯರಿಗೆ ಸುಷ್ಮಾ ಮನವಿ

ಭಾರತೀಯರಿಗೆ ಸುಷ್ಮಾ ಮನವಿ

ನವದೆಹಲಿ: ಕೆಲಸ ಕಳೆದುಕೊಂಡು ಈ ವರೆಗೂ ಸೌದಿಯಲ್ಲೇ ನೆಲೆಸಿರುವ ಭಾರತೀಯರು ಸೆ.25 ರೊಳಗಾಗಿ ಭಾರತಕ್ಕೆ ಹಿಂತಿರುಗಿ ಬರುವಂತೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಮಂಗಳವಾರ ಹೇಳಿದ್ದಾರೆ. ಈ ಕುರಿತಂತೆ ಟ್ವಿಟರ್ ನಲ್ಲಿ ಹೇಳಿರುವ ಅವರು, ಸೌದಿ ಅರೇಬಿಯಾದಲ್ಲಿ ಕೆಲಸ ಕಳೆದುಕೊಂಡಿರುವ ಭಾರತೀಯರಿಗೆ ಭಾರತಕ್ಕೆ ಮರಳುವುದಕ್ಕಾಗಿ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಇದಕ್ಕಾಗಿ ಉಚಿತವಾಗಿ ಪ್ರಯಾಣ ಸೌಲಭ್ಯವನ್ನು ಕಲ್ಪಿಸಲಾಗಿದೆ. ಸೆ.25ರೊಳಗಾಗಿ ಭಾರತೀಯರು ಭಾರತಕ್ಕೆ ಮರಳುವಂತೆ ತಿಳಿಸಿದ್ದಾರೆ.ಒಂದು ವೇಳೆ ಸೆ.25ರೊಳಗಾಗಿ ಭಾರತಕ್ಕೆ ಮರಳದವರು ಬಳಿಕ ಪ್ರಯಾಣದ ಎಲ್ಲಾ ವೆಚ್ಚವನ್ನು ಭರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.  ಸೌದಿ ಅರೇಬಿಯಾದ ಕಂಪೆನಿಯೊಂದು ಹಣಕಾಸು ಬಿಕ್ಕಟ್ಟು ಎದುರಿಸಿದ್ದರಿಂದ ಮುಚ್ಚಿತ್ತು. ಇದರಿಂದ ಸಾವಿರಾರು ನೌಕರರು ಬೀದಿಗೆ ಬಂದಿದ್ದಾರೆ. ಅವರಲ್ಲಿ ಸುಮಾರು 7 ಸಾವಿರದ 700 ಭಾರತೀಯ ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ.