ಉತ್ತಮ ವ್ಯಕ್ತಿತ್ವವಿಲ್ಲ ಎಂದು ಜೆಟ್ ಏರ್ ವೇಸ್ ನನ್ನನ್ನು ತಿರಸ್ಕರಿಸಿತ್ತು

ಉತ್ತಮ ವ್ಯಕ್ತಿತ್ವವಿಲ್ಲ ಎಂದು ಜೆಟ್ ಏರ್ ವೇಸ್ ನನ್ನನ್ನು ತಿರಸ್ಕರಿಸಿತ್ತು

ನವದೆಹಲಿ: ಗುಡ್ ಪರ್ಸನಾಲಿಟಿ ಇಲ್ಲ ಎಂಬ ಕಾರಣ ನೀಡಿ ಜೆಟ್ ಏರ್ ವೇಸ್ ನನಗೆ ಉದ್ಯೋಗ ನೀಡಲು ನಿರಾಕರಿಸಿತ್ತು ಎಂದು ಕೇಂದ್ರ ಜವಳಿ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ. ಜೆಟ್ ಏರ್ ವೇಸ್ ಕ್ಯಾಬಿನ್ ಸಿಬ್ಬಂದಿ ನೌಕರಿಗೆ ನಾನು ಅರ್ಜಿ ಸಲ್ಲಿಸಿದ್ದೆ. ಅಲ್ಲಿ ನನಗೆ ವ್ಯಕ್ತಿತ್ವ ಸಮಸ್ಯೆಯಿದೆ ಎಂದು ಹೇಳಿ ಜೆಟ್ ಏರ್ ವೇಸ್ ನನಗೆ ಕೆಲಸ ನಿರಾಕರಿಸಿತ್ತು, ನೀವು ನನ್ನ ಅರ್ಜಿಯನ್ನು ತಿರಸ್ಕರಿಸಿದ್ದಕ್ಕೆ ಧನ್ಯವಾದ ಎಂದು ಹೇಳಿದ್ದಾರೆ.ಏರ್ ಪ್ಯಾಸೇಂಜರ್ ಅಸೋಸಿಯೇಷನ್ ಆಫ್ ಇಂಡಿಯಾ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜೆಟ್ ಏರ್ ವೇಸ್ ಸಿಬ್ಬಂದಿಗೆ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದ ಸ್ಮೃತಿ  ಇರಾನಿ, ನಾನು ಇಲ್ಲಿ ಒಬ್ಬ ಪ್ರಯಾಣಿಕಳಾಗಿ ಬಂದಿದ್ದೇನೆ ಎಂದು ಹೇಳಿದರು.ನಟಿಯಾಗುವುದಕ್ಕು ಮುನ್ನ ಸ್ಮೃತಿ ಇರಾನಿ ಜೆಟ್ ಏರ್ ವೇಸ್ ನಲ್ಲಿ ನೌಕರಿಗೆ ಪ್ರಯತ್ನಿಸಿದ್ದರು, ಆದರೆ ಅಲ್ಲಿ ಕೆಲಸ ಸಿಕ್ಕಿರಲಿಲ್ಲ, ನಂತರ ಮ್ಯಾಕ್ ಡೊನಾಲ್ಡ್ ನಲ್ಲಿ ಸ್ವಲ್ಪ ಕಾಲ ಸೇವೆ ಸಲ್ಲಿಸಿದ್ದಾಗಿ ತಿಳಿಸಿದ ಸ್ಮೃತಿ ಬಣ್ಣದ ಲೋಕಕ್ಕೆ ಕಾಲಿಟ್ಟರು. ಅದಾದ ನಂತರ 2014 ರಲ್ಲಿ ನರೇಂದ್ರ ಮೋದಿ ಸಂಪುಟದಲ್ಲಿ ಅತಿ ಕಿರಿಯ ಸಚಿವೆಯಾಗಿ ಅಧಿಕಾರ ವಹಿಸಿಕೊಂಡರು.