ಬಲು ದೊಡ್ಡದು ಕಣಾ

ಬಲು ದೊಡ್ಡದು ಕಣಾ

ಹೋಲಿಕೆಯ ಅತಿ ದೊಡ್ಡ ಅಡ್ಡ ಪರಿಣಾಮ ಅಂದರೆ ಕೀಳರಿಮೆ. ಅದನ್ನು ಮೀರುವ ಅತ್ಯಂತ ಸುಲಭ ಉಪಾಯವೊಂದಿದೆ - ನಮ್ಮಲ್ಲೇನಿದೆಯೋ ಅದರಿಂದ ಹ್ಯಾಪೀ ಆಗಿರುವುದು. ಚಪ್ಪಲಿ ಇಲ್ಲ ಎಂದು ಅತ್ತು ಕರೆದು ಮಾಡುತ್ತಿದ್ದ ಮಗನಿಗೆ ಅವನಮ್ಮ ಕಾಲೇ ಇಲ್ಲದವನನ್ನು ತೋರಿಸಿದಳಂತೆ! ನೂರು ಜನ - ನೂರು ಥರ; ಮತ್ತೆ ಕೀಳರಿಮೆ ಯಾಕೆ!? ಒಬ್ಬ ವ್ಯಕ್ತಿ ತನ್ನನ್ನು ಇತರರಿಗೆ ಹೋಲಿಸಿಕೊಂಡಾಗ ಆತನ ಮನಸ್ಸಿನಲ್ಲಿ ಮೂಡುವ ತಾನು ಅವರಷ್ಟು ಸಮರ್ಥನಲ್ಲ ಎಂಬ ಋಣಾತ್ಮಕ ಭಾವನೆಯೇ ಖನ್ನತೆ ಅಥವಾ ಕೀಳರಿಮೆ. ಕೀಳರಿಮೆ ಇರುವ ವ್ಯಕ್ತಿ ಅದರ ಗುಂಗಿನಲ್ಲಿ ತೊಳಲಾಡುತ್ತಿರುತ್ತಾನೆ. ಅವನಿಗೆ ಏನನ್ನೂ ಸಾಧಿಸಲಾಗುವುದಿಲ್ಲ. ಅಂಥಹವರು ಮೊದಲು ಕೀಳರಿಮೆಯನ್ನು ಬಿಟ್ಟು ಸ್ವಾಭಿಮಾನ ಬೆಳೆಸಿಕೊಳ್ಳಬೇಕು.  ಕೀಳರಿಮೆ ಮನಸ್ಸಿಗೆ ಬಹಳ ಹಿಂಸೆ, ನೋವನ್ನುಂಟುಮಾಡುತ್ತದೆ. ಅಂಥ ವ್ಯಕ್ತಿಯಲ್ಲಿ ಉತ್ಸಾಹ, ಲವಲವಿಕೆ, ಆಶಾವಾದ ಇರುವುದಿಲ್ಲ. ಅಂಥಹವರು ಯಾವುದೇ ಸನ್ನಿವೇಶ, ಸಂದರ್ಭಗಳಲ್ಲಿ ಮುನ್ನುಗ್ಗುವ ಬದಲು, ಹಿಂಜರಿಯಲು ತೆರೆಮರೆಯಲ್ಲಿರಲು ಇಷ್ಟಪಡುತ್ತಾರೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು, ಜನರೊಂದಿಗೆ ಬೆರೆಯಲು ಬಯಸುವುದಿಲ್ಲ. ಕೀಳರಿಮೆ ಅತಿಯಾದರೆ ಆತ್ಮಹತ್ಯೆಗೂ ಮುಂದಾಗುವ ಸಾಧ್ಯತೆ ಇದೆ. ಆದ್ದರಿಂದ ದೀರ್ಘ‌ಕಾಲ ಕೀಳರಿಮೆಯಿಂದ ತೊಳಲಾಡುತ್ತಿದ್ದರೆ ಅಂಥಹವರಿಗೆ ತಜ್ಞರಿಂದ ಕೌನ್ಸೆಲಿಂಗ್‌ ಮಾಡಿಸುವುದು ಉತ್ತಮ.  ಪರಿಣಾಮ ಕೀಳರಿಮೆಯಿಂದ ವ್ಯಕ್ತಿ ಚಟುವಟಿಕೆ ಹೀನನಾಗಿ ಉತ್ಸಾಹ, ಲವಲವಿಕೆ ಇಲ್ಲದೆ ಮಂಕಾಗುತ್ತಾನೆ. ಅಂತಹ ವ್ಯಕ್ತಿಯನ್ನು ಬೇಸರ, ದುಃಖ, ನಿರಾಸೆ ಆವರಿಸಿಕೊಳ್ಳುತ್ತದೆ. ಇದರಿಂದ ಹಸಿವು ಇರುವುದಿಲ್ಲ, ನಿದ್ರೆ ಬರುವುದಿಲ್ಲ. ಕೆಟ್ಟ, ಭಯಾನಕ ಕನಸುಗಳು ಬೀಳಲೂಬಹುದು. ಬದುಕೇ ಭಾರವಾಗುತ್ತದೆ. ಸಣ್ಣ ಕಾರಣಗಳಿಗೆ ಅಥವಾ ಕಾರಣವಿಲ್ಲದೆಯೇ ಅಳು ಬರುತ್ತದೆ. ಕೀಳರಿಮೆಗೆ ಒಳಗಾದ ವ್ಯಕ್ತಿ ತನ್ನವರನ್ನೆಲ್ಲ ವೈರಿಗಳೆಂದು ಭಾವಿಸಿಕೊಳ್ಳುತ್ತಾನೆ. ಪಕ್ಕನೆ ಕೋಪಗೊಳ್ಳುತ್ತಾನೆ. ಆತ್ಮಹತ್ಯೆ ಮಾಡಿಕೊಳ್ಳುವ ಎಂಬ ಯೋಚನೆ ಆತನ ಮನಸ್ಸಿನಲ್ಲಿ ಮೂಡುವ ಸಾಧ್ಯತೆಯೂ ಇದೆ. ಅತಿಯಾದ ಕೀಳರಿಮೆಯು ಜನರನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಅನಾರೋಗ್ಯಕ್ಕೆ ಗುರಿಯಾಗಿಸುವ ಸಂಭವವೂ ಇದೆ.  ಖನ್ನತೆ, ಮಾನಸಿಕ ಒತ್ತಡ, ಕಳವಳ, ಉದ್ವೇಗ ಮಾನವನನ್ನು ಬಿಡದೆ ಕಾಡುವ ಸಮಸ್ಯೆಗಳು. ಇವುಗಳು ಅನೇಕ ಕಾಯಿಲೆಗಳಿಗೆ ದಾರಿ ಮಾಡಿಕೊಡುವುದರಿಂದ ಅವುಗಳಿಗೆ ಅವಕಾಶ ನೀಡದೆ ಶಾಂತ ಸ್ಥಿತಿಯಲ್ಲಿ ಮನಸ್ಸನ್ನು ಇಟ್ಟುಕೊಳ್ಳುವುದನ್ನು ಕಲಿಯಬೇಕಿದೆ. ಕೀಳರಿಮೆ ತೊರೆಯಲು ಕ್ರಮ ಕೀಳರಿಮೆ ತೊರೆಯಲು ನಾವು ಪ್ರಯತ್ನಿಸುವುದು ಅತೀ ಅಗತ್ಯ. ಯಾರೋ ಏನೋ ಅಂದುದಕ್ಕೆ ಅಥವಾ ಯಾರು ಏನು ಅಂದುಕೊಳ್ಳುತ್ತಾರೋ ಎಂಬ ಭಾವನೆ ಮತ್ತು ಅತಿಯಾದ ಆಸೆ ಇತ್ಯಾದಿ ಭಾವನೆಗಳನ್ನು ತೊಡೆದು ಹಾಕಿ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬೇಕು. ವ್ಯವಹರಿಸಲು ಹಿಂಜರಿಯಧಿಬಾರದು. ತಮಗೆ ಗೊತ್ತಿರುವ ವಿಚಾರ, ಕೌಶಲಗಳನ್ನು ಪ್ರಕಟಿಸಲು ಹಿಂದೆ ಬೀಳಬಾರದು. ಯಾವುದೇ ಸಮಸ್ಯೆ, ಜವಾಬ್ದಾರಿಯನ್ನು ಎದುರಿಸುವ ಮೊದಲೇ ಅದು ತನ್ನಿಂದಾಗದು ಎಂಬ ಭಾವನೆಯನ್ನು ತೊಡೆದು ಹಾಕಿ ಆತ್ಮಸ್ಥೈರ್ಯವನ್ನು ಹೆಚ್ಚಿಸಿಕೊಂಡು ಕಾರ್ಯ ಸನ್ನದ್ಧರಾಗಿ. ಪ್ರಯತ್ನವನ್ನೇ ಮಾಡದೆ ಅಥವಾ ಅರೆ - ಬರೆ ಪ್ರಯತ್ನದಿಂದ ಯಾರೂ, ಯಾವುದೇ ಕೆಲಸಗಳಲ್ಲಿಯೂ ಸಫ‌ಲರಾಗಲು ಸಾಧ್ಯವಿಲ್ಲ. ಕೆಲವೊಂದು ಕೆಲಸಗಳನ್ನು ತಮಗೆ ನಿರ್ವಹಿಸಲಾಗಿಲ್ಲ ಎಂದು ಹತಾಶರಾಗುವುದು ಬೇಡ. ಮೊದಲು ತಮ್ಮ ಮೇಲೆ ನಂಬಿಕೆ, ವಿಶ್ವಾಸಗಳನ್ನಿಟ್ಟು ಕಾರ್ಯೋನ್ಮುಖರಾಗಬೇಕು. ನೂರಕ್ಕೆ ನೂರು ಪಫೆìಕ್ಟ್ ಆಗಿರುವ ಮನುಷ್ಯರು ಯಾರೂ ಇಲ್ಲ, ಪ್ರತಿಯೊಬ್ಬರಲ್ಲೂ ಯಾವುದಾದರೂ ಒಂದು ಕೊರತೆ ಇದ್ದೇ ಇರುತ್ತದೆ. ಎಲ್ಲರಂತೆ ತಾನೂ ಎಂಬ ಧನಾತ್ಮಕ ಚಿಂತನೆ ಇರಿಸಿಕೊಳ್ಳಬೇಕು.  ಧನಾತ್ಮಕ ಚಿಂತನೆ ರೂಢಿಸಿಕೊಳ್ಳಿ ಬದುಕು ರೂಪಿಸಿಕೊಳ್ಳುವುದು, ಕನಸು ನನಸು ಮಾಡಿಕೊಳ್ಳುವುದುಧಿಧಿ-ಹೀಗೆ ಎಲ್ಲರದಲ್ಲೂ ತೊಡಗಿ ಶಾಲೆ, ಕಾಲೇಜು, ಉದ್ಯೋಗ, ಸಂಸಾರ ಎನ್ನುತ್ತಾ ಮುದುಕರಾಗಿ ಬಿಡುತ್ತೇವೆ. ಒಂದು ದಿನ ಜೀವನವೂ ಮುಗಿಯುತ್ತದೆ. ಈ ವೇಗದ ಬದುಕಿನಲ್ಲಿ ನಮ್ಮ ಸಾಮರ್ಥ್ಯದ ಕಾರಣದಿಂದಲೋ, ಆರೋಗ್ಯದಿಂದಲೋ ಅಂದುಕೊಂಡಿದ್ದನ್ನು ಸಾಧಿಸಲಾಗದೇನೋ ಎಂಬ ಋಣಾತ್ಮಕ ಚಿಂತನೆಗೆ ತೊಡಗಿ ಕುಗ್ಗಿ ಹೋಗುಧಿತ್ತೇವೆ. ಆದ್ದರಿಂದ ಧನಾತ್ಮಕವಾಗಿ ಯೋಚಿಸಿದರೆ ನೆಮ್ಮದಿಯ ಬದುಕು ನಮ್ಮದಾಗುತ್ತದೆ. ಸಪ್ತ ಸೂತ್ರ ಅಳವಡಿಸಿ
1.ಪ್ರಕೃತಿ ನಿರ್ಮಿಸಿದ ನಿಮ್ಮ ಶರೀರ ಮತ್ತು ಹಿನ್ನೆಲೆಯನ್ನು, ಯಾವುದೇ ಷರತ್ತಿಲ್ಲದೆ ಒಪ್ಪಿಕೊಳ್ಳಿ. ಅದರ ಬಗ್ಗೆ ಅತಿಯಾಗಿ ತಲೆ ಕೆಡಿಸಿಕೊಳ್ಳಬೇಡಿ. 

2. ಲಭ್ಯವಿರುವ ಉಡುಗೆತೊಡುಗೆ, ಅಲಂಕಾರಿಕ ವಸ್ತುಗಳಿಂದ ದೇಹವನ್ನು ಅಲಂಕರಿಸಿ, ಇಲ್ಲದ ವಸ್ತುಗಳಿಗಾಗಿ ಕೊರಗದಿರಿ. 

3. ನಿಮ್ಮ ನಡೆ-ನುಡಿ, ಜ್ಞಾನ-ಕೌಶಲಗಳನ್ನು ಹೆಚ್ಚಿಸಿಕೊಳ್ಳಿ. ಸರಳವಾಗಿ, ಸ್ಪಷ್ಟವಾಗಿ, ಕೇಳುವುದಕ್ಕೆ ಹಿತವಾಗಿರುವಂತೆ ಮಾತನಾಡಿ, ನಿಮ್ಮ ಭಾಷಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಿ. ಒಂದಕ್ಕಿಂತ ಹೆಚ್ಚಿನ ಭಾಷೆ ಕಲಿಯಿರಿ. ಯಾವುದೇ ಸನ್ನಿವೇಶವಿರಲಿ; ಪ್ರತಿಯೊಬ್ಬರೊಡನೆ ಪ್ರೀತಿ, ಗೌರವಗಳಿಂದ ಮಾತನಾಡಿಸಿ. ಮಾತು ಬಲ್ಲವನನ್ನು ಎಲ್ಲರೂ ಮೆಚ್ಚುತ್ತಾರೆ. ಹಾಗೇ ಹೆಚ್ಚು ತಿಳಿವಳಿಕೆ, ಕೌಶಲವುಳ್ಳವರನ್ನು ಜನ ಗೌರವಿಸುತ್ತಾರೆ. 

4. ಯಾವುದಾದರೂ ಹವ್ಯಾಸ ಬೆಳೆಸಿಕೊಳ್ಳಿ. ಜನರಿಗೆ ಮನೋರಂಜನೆ ನೀಡಬಲ್ಲ ಯಾವುದೇ ಹವ್ಯಾಸ, ಕಲೆ ನಿಮಗೆ ಜನಪ್ರಿಯತೆಯನ್ನು ತಂದು ಕೊಡುತ್ತದೆ. ನಿಮ್ಮ ನ್ಯೂನತೆಗಳನ್ನು ಅದು ಪರಿಣಾಮಕಾರಿಯಾಗಿ ಮುಚ್ಚಿಹಾಕುತ್ತದೆ.

5. ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳಿ. ಕಷ್ಟ ನೋವಿನಲ್ಲಿರುವ ವ್ಯಕ್ತಿಗಳಿಗೆ ನಮ್ಮ ಕೈಲಾದ ಸಹಾಯ ಮಾಡಿದರೆ, ದಯೆ, ಸಹಾನುಭೂತಿ ತೋರಿಸಿದರೆ ನಮ್ಮ ಸ್ವಾಭಿಮಾನ, ಆತ್ಮವಿಶ್ವಾಸ ವೃದ್ಧಿಸುತ್ತದೆ. 

6. ಯಾವುದೇ ಚಟುವಟಿಕೆಗಳನ್ನು ಸಮರ್ಪಕವಾಗಿ ಮಾಡಿ ಆಗ ಅದನ್ನು ಯಾರಾದರೂ ಮೆಚ್ಚಿ ಶ್ಲಾ ಸುತ್ತಾರೆ. ಪ್ರತೀ ಶ್ಲಾಘನೆ ಅಥವಾ ಮೆಚ್ಚುಗೆಯಿಂದ ಕೀಳರಿಮೆ ದೂರವಾಗುತ್ತದೆ. ಸ್ವಾಭಿಮಾನ ಹೆಚ್ಚುತ್ತದೆ.

7. ನಿಮ್ಮಿಂದ ಯಾವುದೇ ತಪ್ಪು, ಅಚಾತುರ್ಯವಾಗದಂತೆ ಎಚ್ಚರವಹಿಸಿ. ಅಕಸ್ಮಾತಾಗಿ ತಪ್ಪು, ಅಚಾತುರ್ಯ ಸಂಭವಿಸಿದರೆ ಸಂಬಂಧಪಟ್ಟವರಲ್ಲಿ ಬೇಷರತ್‌ ಕ್ಷಮೆಯಾಚಿಸಿ. ಅದು ನಿಮ್ಮ ಗೌರವ ಹೆಚ್ಚಿಸುತ್ತದೆ ಮತ್ತು ತಪ್ಪಿತಸ್ಥ ಭಾವನೆಯನ್ನು ನಿಮ್ಮಿಂದ ದೂರಗೊಳಿಸುತ್ತದೆ.