ಬಹುಜನ ವಿದ್ಯಾರ್ಥಿ ಸಂಘ ಜಿಲ್ಲಾ ಘಟಕ ವತಿಯಿಂದ ಪ್ರತಿಭಟನೆ

ಬಹುಜನ ವಿದ್ಯಾರ್ಥಿ ಸಂಘ ಜಿಲ್ಲಾ ಘಟಕ ವತಿಯಿಂದ ಪ್ರತಿಭಟನೆ

ವಿಜಯಪುರ, ಸೆ. 6: ಬಹುಜನ ವಿದ್ಯಾರ್ಥಿ ಸಂಘ ಜಿಲ್ಲಾ ಘಟಕ ವತಿಯಿಂದ ತಮಿಳುನಾಡಿನ ಪ್ರತಿಭಾವಂತ ವಿದ್ಯಾರ್ಥಿನಿ ಅನಿತಾಳ ಸಾವಿಗೆ ಕಾರಣವಾದ ನೀಟ್ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಹಾಗೂ ಹಿರಯ ಪತ್ರಕರ್ತೆ ಹಾಗೂ ಪ್ರಗತಿಪರ ಚಿಂತಕರು ಗೌರಿ ಲಂಕೇಶ ಹತ್ಯೆ ಖಂಡಿಸಿ ಹಾಗೂ ವಿದ್ಯಾರ್ಥಿನಿ ಸಾವಿಗೆ ನ್ಯಾಯ ದೊರಕಿಸಿಕೊಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಪ್ರತಿಭಟನಾ ರ್ಯಾಲಿಯನ್ನು ಗಾಂಧಿವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳ ಮುಖಾಂತರ ಪ್ರಧಾನಮಂತ್ರಿಗಳು, ರಾಷ್ಟ್ರಪತಿಗಳು, ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.  

    ಬಿ.ವಿ.ಎಸ್. ಜಿಲ್ಲಾ ಸಂಯೋಜಕರಾದ ಶ್ರೀಶೈಲ ರೆಬಿನಾಳ ಮಾತನಾಡಿ - ಇಂದು ಅನೇಕ ಯುವಕ ಯುವತಿಯರು ಶಿಕ್ಷಣವನ್ನು ಪಡೆದು ವೈದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣಗಳಂತಹ ಉನ್ನತ ವ್ಯಾಸಂಗವನ್ನು ಮಾಡಬಯಸುತ್ತಿದ್ದರಾದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೂತನ ಪರೀಕ್ಷಾ ವಿಧಾನಗಳು ಇಂತಹ ವಿದ್ಯಾರ್ಥಿಗಳ ಪಾಲಿಗೆ ಮರಣ ಶಾಸನವಾಗಿ ಪರಿಣಮಿಸಿವೆ. ಹೇಗೆ ಗೊತ್ತೆ? ತಮಿಳುನಾಡಿನ ಅರಿಯಲೂರ್ ಜಿಲ್ಲೆಯ ಬಡ ಕೂಲಿ ಕಾರ್ಮಿಕರ ಮಗಳಾದ ಪ್ರತಿಭಾವಂತ ವಿದ್ಯಾರ್ಥಿನಿ ಕುಮಾರಿ ಅನಿತಾ ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ 1200 ಅಂಕಗಳಿಗೆ 1176 ಅಂಕ ಪಡೆದಿದ್ದರು. ವೈದ್ಯಯಾಗುವ ಕನಸುಹೊತ್ತಿದ್ದ ಈಕೆ ಇಂದು ಕೇಂದ್ರ ಸರ್ಕಾರದ ಓಇಇಖಿ (ಓಚಿಣioಟಿಚಿಟ ಇಟigibiಟiಣಥಿ ಇಟಿಣಡಿಚಿಟಿಛಿe ಖಿesಣ) ಪರೀಕ್ಷ ಗೊಂದಲಕ್ಕೆ ಬಿಲಿಯಾಗಿದ್ದಾಳೆ. ವೈದ್ಯಕೀಯ ಕೋರ್ಸ್‍ಗಳಿಗೆ ಪ್ರವೇಶಾತಿಗೆ 2013 ಕ್ಕಿಂತ ಮೊದಲು ಆಯಾ ರಾಜ್ಯ ಸರ್ಕಾರಗಳೇ ಸಿಇಟಿ ವಿಧಾನದ ಮೂಲಕ ಸೀಟು ಹಂಚಿಕೆ ಮಾಡುತ್ತಿದ್ದವು. ಆದರೆ ಕಳೆದ ವರ್ಷ ಕೇಂದ್ರ ಸರ್ಕಾರವು ಇಡಿ ದೇಶಾದ್ಯಂತ ವೈದ್ಯಕೀಯ ಕೋರ್ಸ್‍ಗಳ ಪ್ರವೇಶಾತಿಗೆ ಏಕರೂಪದ ಓಇಇಖಿ ಪರೀಕ್ಷೆಯನ್ನು ಜಾರಿ ಮಾಡಿದೆ. ಈ ಓಇಇಖಿ ಪರೀಕ್ಷೆಯನ್ನು ನಡೆಸುವ ಜವಾಬ್ದಾರಿಯನ್ನು ಅಃSಅ ಮಂಡಳಿಯೂ ಹೊತ್ತಿದ್ದು ಕೇಂದ್ರ ಪಠ್ಯಕ್ರಮವನ್ನು ಅನುಸರಿಸಿ ಪರೀಕ್ಷೆಗಳನ್ನು ನಡೆಸುತ್ತಿದೆ. 

ಅವೈಜ್ಞಾನಿಕ ಮತ್ತು ದೋಷಪೂರಿತ ಶೈಕ್ಷಣಿಕ ನೀತಿಯಿಂದಾಗಿ ಗ್ರಾಮೀಣ ಮತ್ತು ಪ್ರಾದೇಶಿಕ ಭಾಷೆಯಲ್ಲಿ ಅಧ್ಯಯನ ಮಾಡಿರುವ ಕೋಟ್ಯಾಂತರ ಬಡವ ವಿದ್ಯಾರ್ಥಿಗಳು ತಾರತಮ್ಯಕ್ಕೆ ತುತ್ತಾಗಿದ್ದಾರೆ. ಇಂತಹ ತಾರತಮ್ಯವನ್ನು ಸುಪ್ರಿಂ ಕೋರ್ಟ್‍ನಲ್ಲಿ ಪ್ರಶ್ನೆ ಮಾಡಿದ ಕುಮಾರಿ ಅನಿತಾ ಅಲ್ಲಿಯೂ ನ್ಯಾಯ ಸಿಗದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. 
    ಈ ಅನ್ಯಾಯವನ್ನು ಪ್ರಶ್ನಿಸಿ ಬಹುಜನ ವಿದ್ಯಾರ್ಥಿ ಸಂಘವು ಇಂದು ಪ್ರತಿಭಟನೆಯ ರೂಪದಲ್ಲಿ ಅನ್ಯಾಯಕ್ಕೊಳಗಾದ ಎಲ್ಲ ವಿದ್ಯಾರ್ಥಿಗಳಿಗೆ ನ್ಯಾಯವನ್ನು ದೊರಕಿಸಿಕೊಡಲು ಸರ್ಕಾರದ ಮುಂದೆ ಕೆಳಕಂಡ ಬೇಡಿಕೆಗಳನ್ನು ಮುಂದಿಡುತ್ತಿದೆ. 
ಬಹುಜನ ವಿದ್ಯಾರ್ಥಿ ಸಂಘದ ಬೇಡಿಕೆಗಳು. 
1. “ರಾಷ್ಟ್ರದಾದ್ಯಂತ ಒಂದೇ ದೇಶ ಒಂದೇ ತೆರಿಗೆ” ಮಾದರಿಯಲ್ಲಿ “ಒಂದೇ ದೇಶ ಒಂದೇ ಶಿಕ್ಷಣ” ದಂತಹ ಏಕರೂಪ ಶಿಕ್ಷಣ ವ್ಯವಸ್ಥೆ ಜಾರಿಗೆಯಾಗಬೇಕು.
2. ರಾಜ್ಯ ಪಠ್ಯಕ್ರಮದಲ್ಲಿ ಕಲಿತ ವಿದ್ಯರ್ಥಿಗಳಿಗೆ ಮಾರಕವಾಗಿರುವ ಹಾಗೂ ಕೇಂದ್ರ ಪಠ್ಯಕ್ರಮದಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಮಾತ್ರ ಅನುಕೂಲವಾಗುವಂತಹ ಪ್ರವೇಶ ಪರೀಕ್ಷೆಗಳಾದ ಓಇಇಖಿ, ಎಇಇ ಅಂಖಿ, ಉಂಖಿಇ ಮುಂತಾದ ಅವೈಜ್ಞಾನಿಕ ಪರೀಕ್ಷೆಗಳನ್ನು ರದ್ದು ಪಡಿಸಬೇಕು ಮತ್ತು ಈ ಮೊದಲಿನ ಹಾಗೆಯೇ ಆಯಾ ರಾಜ್ಯಗಳೆ ಸಿಇಟಿ ಪರೀಕ್ಷಾ ವಿಧಾನದ ಮೂಲಕ ಸೀಟು ಹಂಚಿಕೆ ಮಾಡುವ ವ್ಯವಸ್ಥೆಯಾಗಬೇಕು. 
3. ಈ ದೇಶದಲ್ಲಿ ಉಚಿತವಾಗಿ ಮೊಬೈಲ್ ಇಂಟರ್‍ನೆಟ್ ದೊರೆಯುತ್ತಿದೆ. ಆದರೆ ಸಾಂವಿಧಾನಿಕ ಹಕ್ಕಾದ ಶಿಕ್ಷಣ ದೇಶದಾದ್ಯಂತ ವ್ಯಾಪಾರವಾಗುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿದ್ದು ಶಿಕ್ಷಣವನ್ನು ರಾಷ್ಟ್ರಿಕರಣ ಮಾಡುವುದರ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗೌರವಿಸಬೇಕು. 
4. ನೀಟ್‍ನಂತಹ ಪರೀಕ್ಷೆಗಳು ಮೀಸಲಾತಿ ನಿಯಮಕ್ಕೆ ವಿರುದ್ಧವಾಗಿದೆ. ಮಿಸಲಾತಿ ಪ್ರಮಾಣವು ಆಯಾ ರಾಜ್ಯದ ಜನಸಂಖ್ಯೆ ಮತ್ತು ಸಾಮಾಜಿಕ ಅಂಶಗಳ ಆಧಾರದ ಮೇಲೆ ರೂಪಿತವಾಗಿದೆ. ಉದಾಹರಣೆ ತಮಿಳುನಾಡಿನ 69% ಒಟ್ಟು ಮೀಸಲಾತಿಯಲ್ಲಿ ಹಿಂದುಳಿದ ಜಾತಿಗಳಿಗೆ 50% ಪ್ರಾತಿನಿಧ್ಯವನ್ನು ನೀಡಲಾಗಿದೆ. ಕರ್ನಾಟಕದ 50% ಒಟ್ಟು ಮೀಸಲಾತಿಯಲ್ಲಿ ಹಿಂದುಳಿದ ಜಾತಿಗಳಿಗೆ 32% ಪ್ರಾತಿನಿಧ್ಯವನ್ನು ನೀಡಲಾಗಿದೆ. ನೀಟ್‍ನಂತಹ ಪರೀಕ್ಷೆಗಳಿಂದ ಕೇಂದ್ರ ಸರ್ಕಾರದ ಮೀಸಲು ನಿಯಮ ಅಂದರೆ ಔಃಅ 27%, Sಅ 15%, Sಖಿ 7.5% ಅನ್ವಯವಾಗುವುದರಿಂದ ಬಹುತೇಕ ಹಿಂದುಳಿದ ವರ್ಗಗಳು ತಮ್ಮ ಪ್ರಾತಿನಿಧ್ಯದ ಪಾಲನ್ನು ಕಳೆದುಕೊಳ್ಳುತ್ತಿವೆ. 
    ಕೇಂದ್ರ ಸರ್ಕಾರ ಈ ಎಲ್ಲಾ ಬೇಡಿಕೆಗಳನ್ನು ತಕ್ಷಣವೇ ಜಾರಿಗೆ ಬರುವಂತೆ ಕ್ರಮ ಕೈಗೊಂಡು ಅನ್ಯಾಯಕ್ಕೊಳಗಾದ ಎಲ್ಲಾ ಗ್ರಾಮೀಣ ಮತ್ತು ಬಡ ವಿದ್ಯಾರ್ಥಿ ಯುವಕ ಯುವತಿಯರಿಗೆ ನ್ಯಾಯ ದೊರೆಕಿಸಿಕೊಡುವಂತೆ ಬಹುಜನ ವಿದ್ಯಾರ್ಥಿ ಸಂಘ ಆಗ್ರಹಿಸುತ್ತದೆ. ಇಲ್ಲದಿದ್ದರೆ ಕೇಂದ್ರ ಸರ್ಕಾರದ ವಿರುದ್ಧ ದೇಶಾದ್ಯಂತ ಜನಾಭೀಪ್ರಾಯವನ್ನು ರೂಪಿಸಿ ದೊಡ್ಡಮಟ್ಟದ ಹೋರಾಟವನ್ನು ರೂಪಿಸಲಾಗುತ್ತದೆ ಎಂದು ಸರ್ಕಾರಕ್ಕೆ ಈ ಮೂಲಕ ಎಚ್ಚರಿಸುತ್ತಿದ್ದೇವೆ. 
    ಈ ಸಂದರ್ಭದಲ್ಲಿ ಶ್ರೀಶೈಲ ರೆಬಿನಾಳ, ಮಂಜುನಾಥ ಸಂಕದ, ಅಂಜನಾ ರಾಠೋಡ, ರಾಜು ಹಲಗಿ, ಜಾವಿದ ಮುಲ್ಲಾ, ಜಯಶ್ರೀ ಜ್ಯೊತಿ, ಹಸನ, ಮಕಬುಲ, ಪ್ರಭಾಕರ ಕಾಂಬಳೆ,ಪ್ರಭುಲಿಂಗ, ಬಸವರಾಜ ವಡ್ಡಿ, ಪಲ್ಲವಿ, ಸೋನಾಲಿ ಪವಾರ, ಅಶ್ವಿನಿ, ರೂಪಾ ಹರಿಜನ, ಪವಿತ್ರಾ ಶಿವಶರಣ, ಸಚಿನ ಕಟ್ಟಿಮನಿ, ಗಣೇಶ ಹುಣಶ್ಯಾಳ, ಶಂಕರ ತೆನಹಳ್ಳಿ, ಋಷಿಕೇಶ, ನಿತಿನ ಬನಸೋಡೆ, ಆಕಾಶ, ಮಹಾಂತೇಶ ಡೊಳ್ಳಿನವರ, ರೇಣುಕಾ, ಶಿಲ್ಪಾ ಹರಿಜನ ಹಾಗೂ ನಗರದ ವಿವಿಧ ಕಾಲೇಜು, ವಸತಿ ನಿಲಯಗಳಿಂದ ನೂರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಿದ್ದರು.