ರಾಷ್ಟ್ರೀಯ  ಏಕತಾ ದಿನಾಚರಣೆ

ರಾಷ್ಟ್ರೀಯ  ಏಕತಾ ದಿನಾಚರಣೆ

ವಿಜಯಪುರ ನ,04 : ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಜ್ಞಾನಶಕ್ತಿ ಆವರಣದ ಆಡಳಿತ ಭವನದಲ್ಲಿ ಸರ್ದಾರ್ ವಲ್ಲಬಾಯಿ ಪಟೇಲ ಅವರ ಜನ್ಮದಿನಾಚಾರಣೆ ಅಂಗವಾಗಿ ಹಮ್ಮಿಕೊಂಡಿದ್ದ ರಾಷ್ಟ್ರೀಯ  ಏಕತಾ ದಿನಾಚರಣೆ ಕಾರ್ಯಕ್ರಮಕ್ಕೆ ಮಹಿಳಾ ವಿವಿ ಕುಲಸಚಿವ ಡಾ.ಎಲ್.ಆರ್. ನಾಯಕ್ ಪ್ರಮಾಣ ವಚನ ಬೋಧಿಸುವ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಎನ್‍ಎಸ್‍ಎಸ್ ಸಂಯೋಜನಾಧಿಕಾರಿ ಡಾ.ಬಿ.ಎಲ್. ಲಕ್ಕಣ್ಣವರ, ಎನ್‍ಎಸ್‍ಎಸ್ ‘ಎ’ ಘಟಕದ ಅಧಿಕಾರಿ ಡಾ.ನಾಗರಾಜ, ಎನ್‍ಎಸ್‍ಎಸ್ ‘ಬಿ’ ಘಟಕದ ಅಧಿಕಾರಿ ಡಾ.ಅಶೋಕ ಸುರಪುರ ಹಾಗೂ ಮುಕ್ತ ಘಟಕದ ಅಧಿಕಾರಿ ಡಾ.ಭಾಗ್ಯಶ್ರೀ ದೊಡಮನಿ, ವಿವಿಧ ವಿಭಾಗಗಳ 170ಕ್ಕೂ ಅಧಿಕ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.