ನಿಯತಕಾಲಿಕೆ ನಿರ್ಮಾಣದ ತಂತ್ರಗಳು ಕುರಿತಕಾರ್ಯಗಾರ

ನಿಯತಕಾಲಿಕೆ ನಿರ್ಮಾಣದ ತಂತ್ರಗಳು ಕುರಿತಕಾರ್ಯಗಾರ

ವಿಜಯಪುರ, ಡಿ.8: ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವತಿಯಿಂದ ಇದೇ 10ರಿಂದ 12ರವರೆಗೆ ಬೆಳಿಗ್ಗೆ 10.00ಗಂಟೆಗೆ ನಿಯತಕಾಲಿಕೆ ನಿರ್ಮಾಣದ ತಂತ್ರಗಳು ಕುರಿತಕಾರ್ಯಗಾರ ಹಮ್ಮಿಕೊಳ್ಳಲಾಗಿದೆ.

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುದ್ರಣ ಮಾಧ್ಯಮ ಲ್ಯಾಬ್‍ನಲ್ಲಿ ಆಯೋಜಿಸಿರುವ ಈ ಕಾರ್ಯಾಗಾರಕ್ಕೆ ಬೆಂಗಳೂರು ಸುಧಾ ವಾರಪತ್ರಿಕೆಯಪತ್ರಕರ್ತ ದಿಲಾವರರಾಮದುರ್ಗ, ಬೆಂಗಳೂರಿನ ಕಲಾವಿದ ವಿಷ್ಣು ಕುಮಾರಎಸ್. ಮತ್ತು ಕಲಬುರಗಿಯಕಲಾವಿದ ಮಂಜುನಾಥ ಹುಲಕೊಪ್ಪದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸುವರು.ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ.ಓಂಕಾರಕಾಕಡೆಅಧ್ಯಕ್ಷತೆ ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದುಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ.ಓಂಕಾರಕಾಕಡೆ ಈ ಮೂಲಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.