ಕರ್ನಾಟಕ ಬೆಟಾಲಿಯನ್ ವತಿಯಿಂದ ಎನ್ ಸಿ ಸಿ ದಿನಾಚರಣೆ

ಕರ್ನಾಟಕ ಬೆಟಾಲಿಯನ್ ವತಿಯಿಂದ ಎನ್ ಸಿ ಸಿ ದಿನಾಚರಣೆ

ಉಡುಪಿ,ನ.28 : ಇಲ್ಲಿನ 21 ಕರ್ನಾಟಕ ಬೆಟಾಲಿಯನ್ ಎನ್ ಸಿ ಸಿ ಇದರ ವತಿಯಿಂದ ಕಛೇರಿಯ ಸಭಾಂಗಣದಲ್ಲಿ ಎನ ಸಿ ಸಿ ದಿನಾಚರಣೆಯನ್ನು ನವಂಬರ ತಿಂಗಳ ಕೊನೆಯ ಭಾನುವಾರ 26ರಂದು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬೆಟಾಲಿಯನನ ಅಧಿಕಾರಿಯವರಾಗಿರುವ ಲೆಪ್ಟಿನೆಂಟ್ ಕರ್ನಲ್ ರಮಾನಾಥ ಶೆಟ್ಟಿ ಇವರು ಈ ಸಾಲಿನ ಟಿ.ಎಸ್.ಸಿ/ ಥಲ್ ಸೈನಿಕ್ ಶಿಬಿರದಲ್ಲಿ ಪಾಲ್ಗೊಂಡು ,ವಿಶೇಷ ನಿರ್ವಹಣೆ ನೀಡಿರುವ ಕಾಲೇಜು ಗಳ ಎನ್ ಸಿ ಸಿ ಕೆಡೆಟ್ ಗಳನ್ನು ಗೌರವಿಸಿ ಅಭಿನಂಧಿಸಿದರು. ಇಂದಿನ ಯುವ ಜನತೆಗೆ ಎನ್‍ಸಿಸಿ ಯಂತಹ ಸಂಘಟನೆಯ ಪ್ರಾಮುಖ್ಯತೆಯನ್ನು ಮನದಟ್ಟು ಮಾಡಿಸಿದರು.

ಈಗ ಸಾಧನ ಮಾಡಿರುವ ಕೆಡೆಟೆ ಗಳು, ಕಿರಿಯ ಕೆಡೆಟೆ ಗಳಿಗೆ ತಮ್ಮ ಅನುಭವವನ್ನು ಧಾರೆಎರೆದು ಸ್ಫೂರ್ತಿ ನಿಡಿ ಅವರಲ್ಲೂ ಸಾಧನೆಯ ಕನಸನ್ನು ಮೂಡಿಸಲು ಶ್ರಮಿಸಬೇಕೆಂದು ಹಾರೈಸಿದರು. ದೆಹಲಿಯಲ್ಲಿ ನಡೆದ ಟಿ ಎಸ್ ಸಿ ಯಲ್ಲಿ ಭಾಗವಹಿಸಿದ ಸ್ಥಳೀಯ ಪೂರ್ಣಪ್ರಜ್ಞ ಕಾಲೇಜಿನ ವಿದ್ಯಾರ್ಥಿನಿ ಸಿಯು ಒ ಪೂಜಾ ಇವರು ಟಿ ಎಸ್ ಸಿ ತರಬೇತಿಯ ಅನುಭವ ಹಂಚಿಕೂಂಡರು.

ಕಾರ್ಯಕ್ರಮದ ನಿರ್ವಹಣೆ ಮತ್ತು ಸ್ವಾಗತವನ್ನು ಚೀಫ್ ಆಫೀಸರ್ ಹರಿದಾಸ ಪ್ರಭು, ಪ್ರಾಸ್ತಾವಿಕ ಮಾತುಗಳನ್ನು ಚೀಫ್ ಅಫೀಸರ್ ವಿವೇಕಾಂದ ಮಾತನಾಡಿ, ರಾಷ್ಟ್ರೀಯ ಐಕ್ಯತಾ ಪ್ರಮಾಣ ವಚ£ವನ್ನು ವಾಚಿಸಿದರು.ಕೆಡೆಟೆಗಳ ಸಾಂಸ್ಕøತಿ ಕಾರ್ಯಕ್ರಮ ನೆರೆವೇರಿಸಲಾಯಿತು.

ಫಸ್ಟ್ ಆಫೀಸರ ಯೋಗರಾಜ್ ಧನ್ಯವಾದ ನೀಡಿದರು. ಹಲವು ಸಂಸ್ಥೆಗಳ ಎನ್ ಸಿ ಸಿ ಅಧಿಕಾರಿಗಳು, ಕೆಡೆಟೆಗಳು, ಬೆಟಾಲಿಯನ್ ಅಧಿಕಾರಿಗಳು, ಪ್ರಶಿಕ್ಷಕವರ್ಗ ಹಾಗೂ ಸಿಬ್ಬಂದಿಗಳು ಕಾರ್ಯಕೃಮದಲ್ಲಿ ಉಪಸ್ಥಿತರಿದ್ದರು.