ಪರಿವರ್ತನ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ

ಪರಿವರ್ತನ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ

ಬಾಗಲಕೋಟ ನ,01 : ಬಾಗಲಕೋಟೆಯ ನವನಗರದಲ್ಲಿರುವ ಶ್ರೀ ರಾಘವೇಂದ್ರ ಅಕ್ಯಾಡೆಮಿ ಆಫ್ ಸೆಂಟ್ರಲ್ ಎಜುಕೇಶನ್ (ರಿ) ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಪರಿವರ್ತನ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಇಂದು ಕನ್ನಡ ರಾಜ್ಯೋತ್ಸವವನ್ನು ಸಂಸ್ಥೆಗೆ ನೂತವಾಗಿ ಆಯ್ಕೆಯಾದ ಶ್ರೀ ಸಲೀಂ ಎಂ. ಮೋಮಿನ ಇವರ ಅಧ್ಯಕ್ಷತೆಯಲ್ಲಿ ವಿಜೃಂಭಣೆಯಿಮದ ಆಚರಿಸಲಾಯಿತು. 
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರು ಮಾತನಾಡುತ್ತ ಕನ್ನಡ ನಾಡು ನುಡಿ, ಸಂಸ್ಕøತಿ ಸಂಪ್ರದಾಯ ಕುರಿತು ಹಾಗೂ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕುವ ಕುರಿತಾಗಿ ಮಾತನಾಡಿದರು. ಜೊತೆಗೆ ನಾವೆಲ್ಲರೂ ಕನ್ನಡದಲ್ಲಿ ಮಾತನಾಡಿ ಕನ್ನಡಕ್ಕೆ ಗೌರವವನ್ನು ನೀಡೋಣ ಎಂದು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಹೇಳಿದರು. 
ಶಾಲೆಯ ಪ್ರಾಚಾರ್ಯರಾದ ಎಸ್.ಎಸ್. ಶಿರೋಳ, ಶಿಕ್ಷಕ ವರ್ಗ ಹಾಗೂ ಸಿಬ್ಬಂದಿವರ್ಗದವರು ಹಾಜರಿದ್ದು, ಕಾರ್ಯಕ್ರಮವನ್ನು ಶ್ರೀಮತಿ ಯಶೋಧ ಅವರು ನಿರೂಪಿಸಿದರು. ಶ್ರೀಮತಿ ಶ್ರೀದೇವಿರವರು ಸ್ವಾಗತಿಸಿದರು, ಶ್ರೀಮತಿ ಉಮಾರವರು ವಂದಿಸಿದರು.