ಚಿತ್ರಕಲಾ ಶಿಕ್ಷಕರ ಸಂಘಟನೆ ಬಲಗೊಂಡರೆ ಸಮಸ್ಯೆಗಳಿಗೆ ಪರಿಹಾರ : ಬಗಲಿ

ಚಿತ್ರಕಲಾ ಶಿಕ್ಷಕರ ಸಂಘಟನೆ ಬಲಗೊಂಡರೆ ಸಮಸ್ಯೆಗಳಿಗೆ ಪರಿಹಾರ : ಬಗಲಿ

ವಿಜಯಪುರ, ,ಜೂ,14:  ಚಿತ್ರಕಲಾ ಶಿಕ್ಷಕರ ಹತ್ತು ಹಲವು ಬೇಡಿಕೆ ಹಾಗೂ ಸಮಸ್ಯೆಗಳಿದ್ದು ಹೋರಾಟದ ಮೂಲಕ ಧ್ವನಿ ಎತ್ತಿ ಅವುಗಳನ್ನು ಪರಿಹರಿಸಿಕೊಳ್ಳಬೇಕಾಗಿದೆ. ಆ ನಿಟ್ಟಿನಲ್ಲಿ ಮೊದಲು ನಾವು ನಮ್ಮ ಚಿತ್ರಕಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಸ್.ಆಯ್. ಬಗಲಿ ಹೇಳಿದರು.

ವಿಜಯಪುರ ನಗರದ ಸರ್ಕಾರಿ ಬಾಲಕರ ಪ.ಪೂ.ಕಾಲೇಜಿನಲ್ಲಿ  ಜರುಗಿದ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಸಂಘಟನೆ ಬೆಳೆದರೆ ನಾವೆಲ್ಲರೂ ಬೆಳೆದಂತೆ. ಆ ಕಾರಣ ಸಂಘದ ಪ್ರಗತಿಗೆ ಶ್ರಮಿಸಬೇಕು. ನಮ್ಮ ಏನೇ ಸಮಸ್ಯೆಗಳಿದ್ದರು ಅವುಗಳನ್ನು ಸಂಘಟನೆಯ ಮೂಲಕ ಪರಿಹಾರವನ್ನು ಕಂಡುಕೊಳ್ಳಬಹುದು. ಸಂಘದಿಂದ ಬಹಳಷ್ಠು ಅನುಕೂಲಗಳಾಗುತ್ತಿವೆ ಎಂದು ಹೇಳಿದ ಅವರು, ಆ ನಿಟ್ಟಿನಲ್ಲಿ ತಮಗೆ ವಹಿಸಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಹೋರಾಡಿದ್ದು ಸಂಘ ಇದೀಗ ಆರ್ಥಿಕವಾಗಿ-ಬಲಿಷ್ಠವಾಗಿ ಮುನ್ನಡೆದುಕೊಂಡು ಹೊರಟಿದೆ ಇನ್ನಷ್ಠು ಪ್ರಭಲವಾಗಿ ಚಿತ್ರಕಲಾ ಶಿಕ್ಷಕರ ಸಂಘ ಬೆಳೆಯಬೇಕಾಗಿದೆ ಎಂದರು.

ಸಂಘದ ಹಣಕಾಸಿನ ವ್ಯವಹಾರದಲ್ಲಿ ಒಂದು ರೂಪಾಯಿಕೂಡಾ ಅಪಮೌಲ್ಯವಾಗದಂತೆ ಶೈಕ್ಷಣಿಕ ರಚನಾತ್ಮಕ-ಸೃಜನಶೀಲ ಕ್ರಿಯಾಚಟುವಟಿಗೆ ಬಳಸಿಕೊಂಡು ಬರಲಾಗುತ್ತಿದೆ. ಈ ವಿಷಯದಲ್ಲಿ ಸಂಘ ಪಾರದರ್ಶಕತೆ ಹೆಜ್ಜೆ ಇರಿಸಿದೆ. ಸಂಘದ ಕೋಶಾಧ್ಯಕ್ಷ ಸಂಜೀವ ಬಡಿಗೇರ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಎಂದು ಜಿಲ್ಲಾಧ್ಯಕ್ಷ ಎಸ್.ಐ.ಬಗಲಿ ತಿಳಿಸಿದರು.

ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷಾ ಫಲಿತಾಂಶ ಸುಧಾರಣೆಯಲ್ಲಿ ಚಿತ್ರಕಲಾ ಶಿಕ್ಷಕರ ಪಾತ್ರ ಮಹತ್ವದ್ದಾಗಿದ್ದು ಆ ದಿಸೆಯಲ್ಲಿ ಕ್ರಿಯಾಶೀಲರಾಗಿ-ಚೇತನಶೀಲರಾಗಿ ಬದ್ಧತೆಯಿಂದ ತಮ್ಮ ಕಾರ್ಯ ನಿರ್ವಹಿಸಬೇಕು ಎಂದು ಅವರು ಹೇಳಿದರು.
ಸಭೆಯಲ್ಲಿ ಪ್ರಸಕ್ತಸಾಲಿನಲ್ಲಿ ಸಂಘದಿಂದ ನಡೆಸುವಂಥ ವಾರ್ಷಿಕ ಕ್ರಿಯಾ ಚಟುವಟಿಕೆಗಳ ಯೋಜನೆಗಳ ಕುರಿತು ಚರ್ಚಿಸಲಾಯಿತು. 

ಚಿತ್ರಕಲಾ ಶಿಕ್ಷಕರ ಸಂಘದ ಬೆಳಗಾವಿ ಬಿಭಾಗದ ಸಹ ಕಾರ್ಯದರ್ಶಿ ಜಿ.ಎಸ್.ಪಾಟೀ. ಎಸ್.ಬಿ. ಬಿದ್ನಾಳಮಠ, ಆರ್.ಎಸ್.ಗೊಳಸಂಗಿ ನಾಗರಾಜ ರಾಮೇನಹಳ್ಳಿ, ಎಸ್.ಆರ್. ಕಪತ್ತಾರ. ಬಿ.ಎಂ.ಬಾಗವಾನ, ಎಂ.ಆರ್. ಸೌದಾಗರ, ಎಚ್.ಆರ್.ಗಣತಿ, ಎ.ಎಸ್.ಹರನಾಳ, ಜಿ.ಆರ್.ಜಾಧವ ಮೊದಲಾದವರು ಉಪಸ್ಥಿತರಿದ್ದರು. ಸಂಜೀವ ಬಡಿಗೇ ಸ್ವಾಗತಿಸಿ ವಂದಿಸಿದರು.