ಸರಕಾರಿ ಶಾಲೆಗಳನ್ನು ಉಳಿಸಿ ಬೆಳಸಬೇಕು:ಹಾಸಿಂಪೀರ ವಾಲಿಕಾರ

ಸರಕಾರಿ ಶಾಲೆಗಳನ್ನು ಉಳಿಸಿ ಬೆಳಸಬೇಕು:ಹಾಸಿಂಪೀರ ವಾಲಿಕಾರ

ವಿಜಯಪುರ , ಜೂ.10: ತಾಲೂಕಿನ ಹಿಟ್ಟಿನಹಳ್ಳಿ ಸರಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಜ್ಯ ಮಾನವ ಹಕ್ಕುಗಳ ಕಲ್ಯಾಣ ಮಂಡಳಿಯ ಆಶ್ರಯದಲ್ಲಿ ಉಚಿತ ನೋಟ ಬುಕ್ ಮತ್ತು ಪೆನ್ನುಗಳ ವಿತರಣೆ ಮಾಡಲಾಯಿತು.

          ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷ ಅಪ್ಸರಾಬೇಗಂ ಚಪ್ಪರಬಂದ ವಿದ್ಯಾರ್ಥಿನಿಯರಿಗೆ ನೋಟ ಬುಕ್ ಪರಿಕರಗಳನ್ನು ವಿತರಿಸಿ ಮಾತನಾಡಿ, ಸರಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸುವಲ್ಲಿ ಪಾಲಕರು ಹಿಂಜರಿಯುತ್ತಿದ್ದಾರೆ. ಸೌಲಭ್ಯದ ಕೊರತೆಯಿಂದ ಮಕ್ಕಳ ವಿದ್ಯಾಬ್ಯಾಸ ಆಗುವುದಿಲ್ಲ ಎಂಬ ಆತಂಕದಲ್ಲಿದ್ದಾರೆ. ಆದರೆ ಸರಕಾರ ಇಂದು ಎಲ್ಲ ಸೌಲಭ್ಯಗಳನ್ನು ಒದಗಿಸುತ್ತಿದೆ. ಬಿಸಿ ಊಟ, ಯುನಿಫಾರ್ಮ, ಸೈಕಲ್, ಸ್ಕಾಲರಶಿಪ್ ಮತ್ತು ಫೀರಹಿತ ಪ್ರವೇಶವನ್ನು ನೀಡುತ್ತಿರುವುದನ್ನು ಪಾಲಕರು ಗಮನಿಸಿ ಮಕ್ಕಳನ್ನು ಸರಕಾರಿ ಶಾಲೆಗೆ ಪ್ರವೇಶ ಪಡೆಯಬೇಕು. ಇಂತಹ ಸಂದರ್ಭದಲ್ಲಿ ಸಂಘಟನೆಗಳು ಮತ್ತು ದಾನಿಗಳು ವಿದ್ಯಾರ್ಥಿಗಳಿಗೆ ಪ್ರೋತ್ಸಾಹದಾಯಕ ಪ್ರೇರಣೆ ನೀಡುವ ಕೆಲಸವನ್ನು ಮಾಡುತ್ತಿರುವುದು ಸಂತೋಷವನ್ನುಂಟು ಮಾಡಿದೆ ಎಂದರು.

          ಮಾನವ ಹಕ್ಕುಗಳ ಕಲ್ಯಾಣ ಮಂಡಳಿಯ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ಸರಕಾರಿ ಶಾಲೆಗಳು ಉತ್ತಮ ಸ್ಥಿತಿಯಲ್ಲಿವೆ. ಪಾಠ ಬೋದನೆ ಮಾಡುವ ಶಿಕ್ಷಕರು ಪ್ರತಿಭಾವಂತರಾಗಿದ್ದಾರೆ. ಆದ್ದರಿಂದ ಸರಕಾರಿ ಶಾಲೆಗಳನ್ನು ಉಳಿಸಿ ಬೆಳಸಬೇಕಾಗಿದೆ. ಇಂಗ್ಲೀಷ್ನು ವ್ಯಾಮೋಹ ಅತಿ ಆಗಿದ್ದರಿಂದ ಕನ್ನಡದ ಶಾಲೆಗಳಲ್ಲಿ ಪ್ರವೇಶಗಳು ಕಡಿಮೆಯಾಗುತ್ತಿವೆ. ಕನ್ನಡ ನಮ್ಮ ತಾಯಿ ಭಾಷೆ ಆದ್ದರಿಂದ ಮಕ್ಕಳನ್ನು ಮಾತೃಭಾಷೆಯಲ್ಲಿ ಶಿಕ್ಷಣ ನೀಡುವುದರಿಂದ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಮತ್ತು ಅಭಿರುಚಿ ಬೆಳೆಯುತ್ತದೆ. ಸರಕಾರಿ ಶಾಲೆಗಳು ಶತಮಾನಗಳಿಂದ ಕಾರ್ಯ ನಿರ್ವಹಿಸುತ್ತ ಬಂದಿದೆ. ಕಾನ್ವೆಂಟ್ ಸ್ಕೂಲಗಳು ವ್ಯಾಪಾರಿಕರಣಗೊಳ್ಳುತ್ತಿರುವುದು ಸಮಾಜದ ದುರಂತ ಎಂದರು.

          ಶಾಲೆಯ ಮುಖ್ಯ ಅಧ್ಯಾಪಕಿ ವಿಜಯಲಕ್ಷ್ಮೀ ಹುಡೇದ ಮಾತನಾಡಿ, ಮಾನವ ಹಕ್ಕುಗಳ ಕಲ್ಯಾಣ ಮಂಡಳಿಯಿಂದ ನಮ್ಮ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ತಲಾ 6 ನೋಟ್ಬುಾಕ್ ಮತ್ತು ಇತರ ಪರಿಕರಗಳನ್ನು 120 ವಿದ್ಯಾರ್ಥಿಗಳಿಗೆ ವಿತರಿಸಿ ತುಂಬಾ ಒಳ್ಳೆಯ ಕಾರ್ಯ ಮಾಡಿದ್ದಾರೆಂದರು.

          ವೇದಿಕೆಯ ಮೇಲೆ ಗ್ರಾಮದ ಮುಖಂಡರಾದ ಸರ್ವಾನಂದ ಕೂಬರೆಡ್ಡಿ, ಸಂಗೊಂಡ ಬಿರಾದಾರ, ಶ್ರೀಕಾಂತ ಚೌದರಿ, ಶಂಕರಗೌಡ ಬಿರಾದಾರ, ಮಹಾಂತೇಶ ಪಡನಾಡ, ಉಪಸ್ಥಿತರಿದ್ದರು.  ಕಾರ್ಯಕ್ರಮದಲ್ಲಿ ನಿಂಗರಾಜ ಬಿರಾದಾರ, ಕೃಷ್ಣಾ ಚೌದರಿ, ಶಿಕ್ಷಕರಾದ ಸುರೇಖಾ ಪಾಟೀಲ, ಜಯಶ್ರೀ ಹೆರಕಲ್, ಶಕುಂತಲಾ ನಿಂಬಾಳ, ಬನಶಂಕರಿ ಬಿರಾದಾರ, ಅಪ್ಪಾಸಾಹೇಬ ಪಾಟೀಲ,, ಶೋಭಾ ಬಾಗಲಕೋಟ, ಲಕ್ಷ್ಮೀ ಅವಟಿ, ಕಾರ್ಯಕ್ರಮವನ್ನು ವಿಜಯಲಕ್ಷ್ಮೀ ದಿವಾನಜಿ ನಿರೂಪಿಸಿ ವಂದಿಸಿದರು.