ಅಬಕಾರಿ ರಕ್ಷಕ ಹುದ್ದೆ : 18 ರಿಂದ ದೈಹಿಕ ಸಾಮಥ್ರ್ಯ ಪರೀಕ್ಷೆ

ಅಬಕಾರಿ ರಕ್ಷಕ ಹುದ್ದೆ : 18 ರಿಂದ ದೈಹಿಕ ಸಾಮಥ್ರ್ಯ ಪರೀಕ್ಷೆ

ಬಾಗಲಕೋಟೆ, ಡಿ. 06: ಕರ್ನಾಟಕ ಲೋಕಸೇವಾ ಆಯೋಗವು ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಅಬಕಾರಿ ರಕ್ಷಕ ಹುದ್ದೆಗೆ ನೇಮಕಾತಿಗೊಳ್ಳಲಿರುವ ಅರ್ಹ ಅಭ್ಯರ್ಥಿಗಳ ದೈಹಿಕ ಸಾಮಥ್ರ್ಯ ಮತ್ತು ವೈದ್ಯಕೀಯ ಪರೀಕ್ಷೆ ಡಿಸೆಂಬರ 18 ರಿಂದ 21 ರವರೆಗೆ ಬೆಳಿಗ್ಗೆ 8 ರಿಂದ ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ.
    ಸಂಬಂಧಪಟ್ಟ ಅಭ್ಯರ್ಥಿಗಳು ನಿಗದಿಪಡಿಸಿದ ಸ್ಥಳ, ದಿನಾಂಕ ಹಾಗೂ ಸಮಯಕ್ಕೆ ಡಿಸೆಂಬರ 5 ರ ಕಚೇರಿ ನೋಟಿಸ್ ಮೂಲಕ ಸೂಚಿಸಲಾದ ದಾಖಲಾತಿ, ವಸ್ತುಗಳೊಂದಿಗೆ ಹಾಜರಾಗಬೇಕು. ನಿಗದಿಪಡಿಸಿದ ದಿನಾಂಕದಂದು ಹಾಜರಾಗದೇ ಇರುವ ಅಭ್ಯರ್ಥಿಗಳನ್ನು ಗೈರು ಹಾಜರಿ ಎಂದು ಪರಿಗಣಿಸಲಾಗುವುದು ಮತ್ತು ಅವರಿಗೆ ಪುನಃ ಪರೀಕ್ಷೆಗೆ ಅವಕಾಶವಿರುವದಿಲ್ಲವೆಂದು ಜಿಲ್ಲಾಧಿಕಾರಿಗಳು ಹಾಗೂ ಅಬಕಾರಿ ಇಲಾಖೆಯ ಅಬಕಾರಿ ರಕ್ಷಕರ ದೈಹಿಕ ಸಾಮಥ್ರ್ಯ ಮತ್ತು ವೈದ್ಯಕೀಯ ಪರೀಕ್ಷೆಗಳ ಸಮಿತಿಯ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.