ಜಿಲ್ಲಾ ಮಟ್ಟದ ಯುವಜನೋತ್ಸವ : 8 ರಂದು ಆಯ್ಕೆ ಪ್ರಕ್ರಿಯೆ

ಜಿಲ್ಲಾ ಮಟ್ಟದ ಯುವಜನೋತ್ಸವ : 8 ರಂದು ಆಯ್ಕೆ ಪ್ರಕ್ರಿಯೆ

ಬಾಗಲಕೋಟೆ ನ, 03 : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಯುವಜನೋತ್ಸವ ಆಯ್ಕೆ ಮತ್ತು ಸಂಘಟನೆಯನ್ನು ನವೆಂಬರ 8 ರಂದು ಬೆಳಿಗ್ಗೆ 10 ಗಂಟೆಗೆ ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದೆ.
    ಈ ಯುವಜನೋತ್ಸವದಲ್ಲಿ ಜನಪದ ನೃತ್ಯ, ಜನಪದ ಗೀತೆ, ಶಾಸ್ತ್ರೀಯ ಗಾಯನ, ಏಕಾಂಕ ನಾಟಕ (ಇಂಗ್ಲೀಷ, ಹಿಂದಿ), ಶಾಸ್ತ್ರೀಯ ವಾದ್ಯ (ತಬಲಾ, ಸಿತಾರ, ಕೊಳಲು, ವೀಣೆ, ಮೃದಂಗ), ಹಾರ್ಮೋನಿಯಂ, ಗಿಟಾರ, ಶಾಸ್ತ್ರೀಯ ನೃತ್ಯ, ಆಶು-ಭಾಷಣ (ಹಿಂದಿ, ಇಂಗ್ಲೀಷ) ಸ್ಪರ್ಧೆಗಳನ್ನು 15 ರಿಂದ 29 ವರ್ಷದ ಒಳಗಿನ ಯುವಕ, ಯುವತಿಯರಿಗೆ ನಡೆಸಲಾಗುವುದು. ಇದರಲ್ಲಿ ಆಯ್ಕೆಯಾದವರನ್ನು ರಾಜ್ಯಮಟ್ಟದ ಯುವಜನೋತ್ಸವದಲ್ಲಿ ನಿಯೋಜಿಸಲಾಗುವುದು. 
    ಜಿಲ್ಲಾ ಮಟ್ಟದ ಯುವಜನೋತ್ಸವ ಆಯ್ಕೆಗೆ ತಮ್ಮ ಸ್ವಂತ ಖರ್ಚಿನಿಂದ ತಮ್ಮ ಪರಿಕರಗಳೊಂದಿಗೆ ಹಾಜರಾಗಬೇಕು. ಭಾಗವಹಿಸುವ ಸ್ಪರ್ಧಾಳುಗಳು ಆಧಾರ ಕಾರ್ಡ ಕಡ್ಡಾಯವಾಗಿ ನೋಂದಣಿ ಸಮಯದಲ್ಲಿ ಹಾಜರು ಪಡಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂಸಂ.08354-235896, ಮೊನಂ.9731352524ಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.