ವಸತಿ ಶಾಲೆಗೆ ನಿವೇಶನ ಖರೀದಿ : ಅರ್ಜಿ ಕರೆ

ವಸತಿ ಶಾಲೆಗೆ ನಿವೇಶನ ಖರೀದಿ : ಅರ್ಜಿ ಕರೆ

ಬಾಗಲಕೋಟೆ ಜೂ.17: ಹುನಗುಂದ ತಾಲೂಕಿನ ಸೂಳೇಭಾವಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಕಟ್ಟಡ ನಿರ್ಮಾಣಕ್ಕಾಗಿ 8 ರಿಂದ 10 ಎಕರೆ ನಿವೇಶನ ಅವಶ್ಯವಿದ್ದು, ಆಸಕ್ತಿವುಳ್ಳ ಸೂಳೇಭಾವಿ ಅಥವಾ ಸುತ್ತಮುತ್ತ ಇರುವ ಜಮೀನುದಾರರು ಖರೀದಿ ಮೇಲೆ ನಿವೇಶನ ಕೊಡುವದಕ್ಕೆ ಇಚ್ಚಿಸಿದಲ್ಲಿ ನಿವೇಶನ ಉತಾರೆ, ಖಾತಾ ಪತ್ರ, ಕಂದಾಯ ಪಾವತಿ ರಶೀದಿ, ಋಣಭಾರ ಪ್ರಮಾಣ ಪತ್ರ ನಮೂನೆ-15 ಮತ್ತು ಆರ್ಟಿನಸಿ ಪತ್ರ ಹಾಗೂ ಯಾವ ದರದಲ್ಲಿ ಜಮೀನು ಖರೀದಿಗೆ ಕೊಡಲು ಒಪ್ಪಿಗೆ ಇದೆ ಎಂಬ ಬಗ್ಗೆ ಪತ್ರದೊಂದಿಗೆ ಖುದ್ದಾಗಿ ಜೂನ್ 23 ರೊಳಗಾಗಿ ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾಡಳಿತ ಭವನ, ನವನಗರ, ಬಾಗಲಕೋಟ ಇವರಿಗೆ ಸಲ್ಲಿಸಬಹುದಾಗಿದೆ. ಖರೀದಿಗಾಗಿ ನೀಡಲಾಗುವ ನಿವೇಶನ ಮೇಲೆ ಯಾವುದೇ ವ್ಯಾಜ್ಯ, ತಂಟೆ-ತಕರಾರು ಇರಬಾರದು. ಜಮೀನಿನ ಮೇ ಯಾವುದೇ ಬೋಜಾ ಇಲ್ಲದ ಬಗ್ಗೆ ಆ ಭಾಗವ ವ್ಯಾಪ್ತಿಯ ಖ್ಯಾಂಕುಗಳಿಂದ ಬೇಬಾಕಿ ಪತ್ರ ಪಡೆದು ಸಲ್ಲಿಸತಕ್ಕದೆಂದು ಪ್ರಕಟಣೆ ತಿಳಿಸಿದೆ.