ಗುರುಶಿಷ್ಯರ ನಡುವೆ ಉತ್ತಮ ಬಾಂಧವ್ಯ ಇರಬೇಕು: ಪ್ರೊ. ಶರಣಗೌಡ ಪಾಟೀಲ

ಗುರುಶಿಷ್ಯರ ನಡುವೆ ಉತ್ತಮ ಬಾಂಧವ್ಯ ಇರಬೇಕು: ಪ್ರೊ. ಶರಣಗೌಡ ಪಾಟೀಲ

    ವಿಜಯಪುರ,ಸೆ.6: ಗುರುಶಿಷ್ಯರ ನಡುವೆ ಉತ್ತಮ ಬಾಂಧವ್ಯ ಇರಬೇಕು. ರಾಧಾಕೃಷ್ಣನ್ ರವರು ಶಿಕ್ಷಕರಾಗಿ ಪ್ರಾಮಾಣಿಕ ಸೇವೆ, ಶ್ರದ್ದೆ, ನಿಷ್ಠೆ, ಅವರನ್ನು ರಾಷ್ಟ್ರದ ಅತ್ಯುನ್ನತ ಹುದ್ದೆ ರಾಷ್ಟ್ರಪತಿಯವರೆಗೆ ಕರೆದೊಯ್ಯುವಂತೆ ಮಾಡಿತು ಎಂದು ಅತಿಥಿಯಾಗಿ ಆಗಮಿಸಿದ್ದ ಪ್ರೊ. ಶರಣಗೌಡ ಪಾಟೀಲ ಮಾತನಾಡಿದರು.

 ತತ್ವಜ್ಞಾನಿಯಾದ ಡಾ. ಸರ್ವಪಲ್ಲಿ ರಾಧಾಕೃಷ್ಣನನವರು ಸರಳ, ಸಜ್ಜನಿಕೆಯ ವ್ಯಕ್ತಿಯಾಗಿದ್ದರು. ವಿದ್ಯಾರ್ಥಿಗಳನ್ನು ಪ್ರೀತಿಯಿಂದ ಕಾಣುತ್ತಿದ್ದರು. ಶಿಕ್ಷಕರ ವೃತ್ತಿ ಪವಿತ್ರವಾದದ್ದು ಪ್ರಸ್ತುತ ಶಿಕ್ಷಕ ವೃಂದ ಅವರ ತತ್ವ ಸಿದ್ದಾಂತಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದೆಯಾದರೆ ಸಾರ್ಥಕ ಬದುಕನ್ನು ಕಾಣಬಹುದು.
ನಗರದ ಶ್ರೀ ಬಸವೇಶ್ವರ ವಿದ್ಯಾವರ್ಧಕ ಸಂಘದ ವಿದ್ಯಾನಿಕೇತನ ಪದವಿಪೂರ್ವ ಕಾಲೇಜು ಹಾಗೂ ಶ್ರೀ ಬಸವೇಶ್ವರ ಪದವಿಪೂರ್ವ ಕಾಲೇಜು ವಿಜಯಪುರ ಇವರ ಸಹಯೋಗದಲ್ಲಿ ಶಿಕ್ಷಕರ ದಿನಾಚರಣೆಯನ್ನು ಕಾಲೇಜಿನ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.

    ದ್ವಾಪಾರಯುಗದಲ್ಲಿ ಗುರುಶಿಷ್ಯನಿಗೆ ಬಡಿದು ಬುದ್ಧಿ ಕಲಿಸಿದರೆ ಮಹಾಪ್ರಸಾದವೆಂದನಯ್ಯ ತ್ರೇತಾಯುಗದಲ್ಲಿ ಬೈದು ಬುದ್ದಿ ಕಲಿಸಿದರೆ ಮಹಾಪ್ರಸಾದವೆಂದನಯ್ಯ, ಕಲಿಯುಗದಲ್ಲಿ ವಂದಿಸಿ ಬುದ್ಧಿ ಕಲಿಸಿದರೆ ಮಹಾಪ್ರಸಾದವೆಂದನಯ್ಯ ಅಲ್ಲಮ ಪ್ರಭುದೇವರ ಈ ವಚನವನ್ನು ಮೆಲಕಾಕುತ್ತ ವಿದ್ಯಾರ್ಥಿಗಳು ಮತ್ತು ಶಿಕ್ಷಕರೊಂದಿಗೆ ಬಾಂಧವ್ಯದ ಬಗ್ಗೆ ತಿಳಿಸಿದರು. 
    ವಿದ್ಯಾನಿಕೇತನ ಕಾಲೇಜು ಪ್ರಾಚಾರ್ಯ ಎಸ್.ಎಸ್. ಬಸರಕೋಡ ಮಾತನಾಡಿ ಡಾ. ರಾಧಾಕೃಷ್ಣನ್‍ನವರ ಆರಂಭಿಕ ಜೀವನದ ಬಗ್ಗೆ ಹೇಳುತ್ತ ರಾಧಾಕೃಷ್ಣನ್ ಬಡತನ ಕುಟುಂಬದಲ್ಲಿ ಜನಿಸಿದ ವ್ಯಕ್ತಿಯಾಗಿದ್ದರು, ಬಾಲ್ಯದಲ್ಲಿ ವೇದ, ಉಪನಿಶತ್ತು, ರಾಮಾಯಣ, ಮಹಾಭಾರತ ಅಧ್ಯಯನ ಮಾಡುವುದಲ್ಲಿ ವಿಶೇಷ ಆಸಕ್ತಿ ಹೊಂದಿದರು. ಪ್ರಾಧ್ಯಾಪಕರಾದ ಡಾ. ರಾಧಾಕೃಷ್ಣನರು ಬದುಕಿನಲ್ಲಿ ಉನ್ನತ ಹುದ್ದೆಗಳಿಗೆ ಏರುತ್ತ ಹೋದರು. ಅನೇಕ ವಿಶ್ವವಿದ್ಯಾಲಯಗಳಲ್ಲಿ (ಕಲಕತ್ತಾ, ಆಂಧ್ರಾ, ಬನಾರಸ, ದೆಹಲಿ ವಿಶ್ವವಿದ್ಯಾಲಯಗಳಲ್ಲಿ) ಉಪಕುಲಪತಿಗಳಾಗಿ ಕಾರ್ಯನಿರ್ವಹಿಸಿದರು. ರಾಜಕೀಯ ಕ್ಷೇತ್ರದಲ್ಲಿಯು ಉನ್ನತ ಹುದ್ದೆ ರಷಿಯಾ ರಾಯಭಾರಿಗಳಾಗಿ, ಉಪರಾಷ್ಟ್ರಪತಿಗಳಾಗಿ, ರಾಷ್ಟ್ರಪತಿಗಳಾಗಿ ಯಶಸ್ವಿ ಆಡಳಿತ ನೀಡಿದ ಶ್ರೇಯಸ್ಸು ತತ್ವಜ್ಞಾನಿ ಡಾ. ರಾಧಾಕೃಷ್ಣನವರಿಗೆ ಸಲ್ಲುತ್ತದೆ. 
    ಶಿಕ್ಷಕರು ಸಮಾಜದ ಶಿಲ್ಪಿಗಳು ನಾಳಿನ ನಾಗರಿಕರನ್ನು ತಯಾರು ಮಾಡುವ ಮಹತ್ತರ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಸಹನೆ, ಪಠ್ಯತರ ಚಟುವಟಿಕೆಗಳಲ್ಲಿ ಆಸಕ್ತಿ, ನಡೆ, ನುಡಿ, ಸಮಯಪ್ರಜ್ಞೆ, ಹೊಸ ವಿಚಾರ, ಅಧ್ಯಯನದಲ್ಲಿ ಆಸಕ್ತಿ, ಉತ್ತಮ ಚಾರಿತ್ರೆ ಹೊಂದಿರಬೇಕು ಎಂದು ಹೇಳಿದರು.
    ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸವೇಶ್ವರ ಪ.ಪೂ. ಕಾಲೇಜಿನ ಪ್ರಾಚಾರ್ಯ ಎಸ್.ಆರ್. ಕುಲಕರ್ಣಿ ವಹಿಸಿದ್ದರು. ಉಪನ್ಯಾಸಕರಾದ ಪ್ರದೀಪ ಲಾಳಸಂಗಿ, ವಿಶ್ವನಾಥ ಉತ್ನಾಳ, ವಿಶಾಲ ಕಟಕÉ, ಕಾಶಿನಾಥ ಆಲಮೇಲ, ಆನಂದ ಮಂಗಾನವರ, ಎಸ್.ಎಸ್. ಬಿರಾದಾರ, ಕೃಷ್ಣಮೂರ್ತಿ, ಶ್ರೀಮತಿ ಸೌಮ್ಯ ಲಾಳಸಂಗಿ, ಶ್ರೀ ಬಿ.ಬಿ. ಪಾಟೀಲ, ಶ್ರೀಮತಿ ಆರ್.ಡಿ. ಬದಾಮಿ, ರಾಜೇಶ್ವರಿ ತೊಂಡೆಣ್ಣನವರ ವಿದ್ಯಾ ಪಾಟೀಲ, ಸುಷ್ಮಾ ಪತ್ತಾರ, ಬಿ.ಎಸ್. ತೇರದಾಳ ಮುಂತಾದವರು ಉಪಸ್ಥಿತರಿದ್ದರು.
    ಕುಮಾರಿ ಅಕ್ಷತಾ ಜೋಗಿ ಸ್ವಾಗತಿಸಿದರು. ಲಕ್ಷ್ಮಣ ಸಿ.ಕೆ., ಶ್ರದ್ಧಾ ಅವರಾದಿ ನಿರೂಪಿಸಿದರು. ವೈಷ್ಣವಿ ವಂದಿಸಿದರು.