22ನೇ ಮಾಸಿಕ ಮಕ್ಕಳ ಸಂಗೀತ ಕಾರ್ಯಕ್ರಮ

22ನೇ ಮಾಸಿಕ ಮಕ್ಕಳ ಸಂಗೀತ ಕಾರ್ಯಕ್ರಮ

ವಿಜಯಪುರ ನ,04: ಶ್ರೀ ಗುರು ಕುಮಾರೇಶ್ವರ ಪ್ರತಿಷ್ಠಾನ, ಶ್ರೀ ಗಾನಯೋಗಿ ಪಂಚಾಕ್ಷರ ಪ್ರತಿಷ್ಠಾನ ಇವರ ಸಹಯೋಗದಲ್ಲಿ ನಾದ ವೈಭವದ ವತಿಯಿಂದ22ನೇ ಮಾಸಿಕ ಮಕ್ಕಳ ಸಂಗೀತ ಕಾರ್ಯಕ್ರಮವು ನಗರದ ಶ್ರೀ ಶಿವಯೋಗಿ ಪುಟ್ಟರಾಜ ಗಾನಬನದ ಆವರಣದಲ್ಲಿ ಜರುಗಿತು. 
ಬಿಜೆಪಿ ಯುವ ಧುರೀಣ ವಿಜುಗೌಡ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತೆರೆ ಮರೆಯಲ್ಲಿ ಅಂಧ ಮತ್ತು ಬಡಮಕ್ಕಳಿಗಾಗಿ ಈ ಗಾನಬನವು ನಿರತವಾಗಿರುವುದನ್ನು ಗಮನಿಸಿ ಸಾಧ್ಯವಾದ ಸಹಾಯ ಸಹಕಾರ ಮಾಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ.ಜೆ.ಎಸ್. ಹಿರೇಮಠ, ಆಕಾಶವಾಣಿಯ ಬಸವರಾಜ ಒಂಟಗೊಡೆ, ಕೃಷ್ಣ ಗುಣಾಳಕರ, ಶ್ರೀಶೈಲ ಧನ್ಯಾಳ ಉಪಸ್ಥಿತರಿದ್ದರು.
ಪಿ.ಸಿ. ಅರಕೇರಿ ಮಠ ಸ್ವಾಗತಿಸಿದರು, ರಾಮಕೃಷ್ಣ ಉತ್ತೂರ ಕಾರ್ಯಕ್ರಮ ನಿರೂಪಿಸಿದರು,   ಹಾಗೂ ಪಂಡೀತ ತೋಂಟದಾರ್ಯ ಕವಿಗವಾಯಿಗಳು ವಂದಣೆಗಳೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಿದರು. 
ಡಾ. ವಿಜಯಕುಮಾರ ಪೂಜಾರಿ, ವಿಜಯಕುಮಾರ ಮಠಪತಿ, ಸಿದ್ದು ಮಠ, ಶ್ರೀನಿವಾಸ ತಳವಾರ ಮುಂತಾದವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.