ಬಿಎಸ್-3 ಬೈಕ್ ಮೇಲೆ ರಿಯಾಯಿತಿ: ಶೋರೂಂ ಮಾಲಿಕರ ಮೇಲೆ ಹಲ್ಯೆಗೆ ಯತ್ನ

ಬಿಎಸ್-3 ಬೈಕ್ ಮೇಲೆ ರಿಯಾಯಿತಿ: ಶೋರೂಂ ಮಾಲಿಕರ ಮೇಲೆ ಹಲ್ಯೆಗೆ ಯತ್ನ

ಏ.1 ರಿಂದ ಭಾರತ್ ಸ್ಟೇಜ್ 3( ಬಿಎಸ್-3) ಸಾಮಥ್ರ್ಯದ ವಾಹನಗಳ 
ಉತ್ಪಾದನೆ ಹಾಗೂ ಮಾರಾಟವನ್ನು ಸ್ಥಗಿತಗೊಳಿಸಿ ಸುಪ್ರೀಂ ಆದೇಶ ಹೊರಡಿಸಿದೆ.

ಹೀಗಾಗಿ ನಿನ್ನೆ ಸಂಜೆಯಿಂದ ನಗರದ ಎಲ್ಲಾ ಶೋರೂಂಗಳು ಆಕರ್ಷಕ ಆಫರ್‍ಗಳನ್ನು ನೀಡಿವೆ. 
ಕೆಲ ಶೋರೂಂಗಳು ತಮ್ಮಲ್ಲಿನ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಲು ಒಂದಕ್ಕಿಂತ ಒಂದು ರಿಯಾಯಿತಿ ಘೋಷಣೆ ಮಾಡಿವೆ. 
ಕೆಲ ಶೋರೂಂಗಳಲ್ಲಿ ಬೈಕ್ ಬೆಲೆಯನ್ನು 5 ಸಾವಿರದಿಂದ 20 ಸಾವಿರದವರೆಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಿದರೆ, 
ಇನ್ನು ಕೆಲವು ಶೋರೂಂಗಳಲ್ಲಿ ವಾಹನಗಳ ಬೆಲೆಯ ಅರ್ಧಕ್ಕೆ ಮಾರಾಟ ಮಾಡಲಾಗುತ್ತಿವೆ.  
ಇಂದು ಕೊನೆ ದಿನವಾಗಿರುವುದರಿಂದ ಸಾವಿರಾರು ಗ್ರಾಹಕರು ಶೋರೂಂಗಳ ಮುಂದೆ ಮುಗಿಬಿದ್ದು ವಾಹನಗಳ ಖರೀದಿಯಲ್ಲಿ ತೊಡಗಿದ್ದಾರೆ. 
ನೂರಾರು ಗ್ರಾಹಕರು ಶೋರೂಂಗಳ ಮಾಲಿಕರರ ಮೇಲೆ ಹಲ್ಯ ನಡೆಸಿದರು. ಹೀಗಾಗಿ ಅನಿವಾರ್ಯವಾಗಿ ಬಾಗಿಲು ಮುಚ್ಹುವಂತಾಗಿದೆ.