ಗಿರಿರಾಜ ಕೋಳಿ ಮರಿ : ಇಲಾಖಾ ದರದಲ್ಲಿ ಖರೀದಿ

ಗಿರಿರಾಜ ಕೋಳಿ ಮರಿ : ಇಲಾಖಾ ದರದಲ್ಲಿ ಖರೀದಿ

ಬಾಗಲಕೋಟೆ , ನ. 9: ಗ್ರಾಮೀಣ ಮಹಿಳೆಯರ ಆರ್ಥಿಕ ಸ್ಥಿತಿ ಸುಧಾರಿಸಲು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನ ಜಿಲ್ಲಾ ಪಂಚಾಯತ ಯೋಜನೆಗಳಾದ ಗಿರಿರಾಜ ಕೋಳಿ ಮರಿ ಸಾಕಾಣಿಕೆಯಡಿ 6 ವಾರಗಳಲ್ಲಿ ಸಾಕಿದ ಗಿರಿರಾಜ ಕೋಳಿ ಮರಿಗಳನ್ನು ಇಲಾಖೆ ದರದಲ್ಲಿ ಖರೀದಿಸಲಾಗುತ್ತದೆ. ರೈತರು ಹಾಗೂ ಯುವಕ, ಯುವತಿಯರು ನವೆಂಬರ 15 ರೊಳಗಾಗಿ ಸಂಪರ್ಕಿಸುವಂತೆ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂಸಂ. 08354-235634ಗೆ ಸಂಪರ್ಕಿಸಬಹುದಾಗಿದೆ.