ಜಿಲ್ಲಾ ಪಂಚಾಯತ್ ವಿವಿಧ ಇಲಾಖೆಗಳ 33426.72 ಲಕ್ಷ ರೂ.ಗಳ ಕ್ರೀಯಾಯೋಜನೆಗೆ ಅನುಮೋದನೆ

ಜಿಲ್ಲಾ ಪಂಚಾಯತ್ ವಿವಿಧ ಇಲಾಖೆಗಳ 33426.72 ಲಕ್ಷ ರೂ.ಗಳ ಕ್ರೀಯಾಯೋಜನೆಗೆ ಅನುಮೋದನೆ

ವಿಜಯಪುರ,ಜೂ.19:: ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ವಿವಿಧ 31 ಇಲಾಖೆಗಳ 2017-18ನೇ ಸಾಲಿನ 33426.72 ಲಕ್ಷ ರೂ.ಗಳ ಕ್ರೀಯಾಯೋಜನೆಗೆಅನುಮೋದನೆ ನೀಡಲಾಯಿತು. 

ನಗರದಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಜಿಲ್ಲಾ ಪಂಚಾಯತ್‍ಅಧ್ಯಕ್ಷೆ ಶ್ರೀಮತಿ ನೀಲಮ್ಮ ಮೇಟಿಅವರಅಧ್ಯಕ್ಷತೆಯಲ್ಲಿಜರುಗಿದ 6ನೇ ಸಾಮಾನ್ಯ ಸಭೆಯಲ್ಲಿ ಪಂಚಾಯತ್‍ರಾಜ್‍ಇಂಜಿನೀಯರಿಂಗ್ ವಿಭಾಗ, ಸಾರ್ವಜನಿಕ ಶಿಕ್ಷಣ ಇಲಾಖೆ, ವಯಸ್ಕರ ಶಿಕ್ಷಣ, ಆರೋಗ್ಯ ಇಲಾಖೆ, ಸಮಾಜಕಲ್ಯಾಣ ಇಲಾಖೆ, ಹಿಂದುಳಿದ, ಅಲ್ಪಸಂಖ್ಯಾತರಕಲ್ಯಾಣ ಇಲಾಖೆ, ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಮೀನುಗಾರಿಕೆ, ಅರಣ್ಯ, ಕೃಷಿ ಮಾರುಕಟ್ಟೆ ಇಲಾಖೆ ಸೇರಿದಂತೆ ವಿವಿಧ 31 ಇಲಾಖೆಗಳ ಕ್ರೀಯಾಯೋಜನೆಗೆಇಂದು ನಡೆದ ಸಭೆಯಲ್ಲಿ ಸರ್ವಾನುಮತದಿಂದಅನುಮೋದನೆ ನೀಡಲಾಯಿತು.
ಹೆಸ್ಕಾಂಗೆ 100 ಕೋಟಿರೂ. ಅನುದಾನ ನೀಡಿದ್ದು, ಈ ಅನುದಾನದಲ್ಲಿ 30 ವರ್ಷದಿಂದಇರುವ ವಿದ್ಯುತ್ ಕಂಬ, ವಿದ್ಯುತ್ ತಂತಿಗಳನ್ನು ಬದಲಿಸಿ ಮತ್ತು ಸಮರ್ಪಕ ದುರಸ್ತಿ ಕ್ರಮಕೈಗೊಂಡು ಮಳೆಗಾಲದಲ್ಲಿ ಸಂಭವಿಸುವ ವಿದ್ಯುತ್ ಅಪಘಾತಗಳನ್ನು ತಪ್ಪಸಿ ಎಂದುಅಧ್ಯಕ್ಷೆ ಶ್ರೀಮತಿ ನೀಲಮ್ಮ ಮೇಟಿ ಸೂಚಿಸಿದರು.

ಪಶು ವೈದ್ಯಕೀಯ ಆಸ್ಪತರೆಗಳಿಗೆ ಶೀಘ್ರವೇ ಔಷಧಿಖರೀದಿಗೆಕ್ರಮ ಕೈಗೊಳ್ಳಬೇಕು.ಮಳೆಗಾಲ ಆರಂಭವಾದರೂಜಿಲ್ಲೆಯ ಕೆಲ ಗ್ರಾಮಗಳಲ್ಲಿ ನೀರಿನ ಸಮಸ್ಯೆಇನ್ನೂ ಸಂಪೂರ್ಣ ಪರಿಹಾರವಾಗಿಲ್ಲ. ಈಗಾಗಲೇ ಪ್ರಾರಂಭಿಸಿ ಆರ್.ಪ್ಲಾಂಟ್‍ಗಳು ಪದೇ ಪದೇ ದುರಸ್ತಿಯಾಗುತ್ತಿವೆ, ಇದರಿಂದಗ್ರಾಮೀಣರಿಗೆಕುಡಿಯುವ ಶುದ್ಧ ನೀರಿನಅಭಾವಉಂಟಾಗುತ್ತಿದೆ.ಇದಕ್ಕೆ ಶಾಶ್ವತ ಪರಿಹಾರ ಸಿಗುವರೆಗೂ ಸಂಬಂಧಿಸಿದ ಅಧಿಕಾರಿಗಳು ನೀರು ಪೂರೈಕೆಗೆಅಗತ್ಯಕ್ರಮ ಕೈಗೊಳ್ಳಬೇಕು ಎಂದುಅವರು ಸೂಚಿಸಿದರು.
ಕೆಲ ಇಲಾಖೆ ಅಧಿಕಾರಿಗಳು ಜಿಲ್ಲಾ ಪಂಚಾಯತಿಯ ಸದಸ್ಯರು, ಸಾರ್ವಜನಿಕರದೂರವಾಣಿ ಕರೆಗಳನ್ನು ಸ್ವೀಕರಿಸುವುದಿಲ್ಲ. ಹಾಗೂ ನಂತರವೂಅದಕ್ಕೆಸ್ಪಂದಿಸುವುದಿಲ್ಲ. ಇಂತಹಕೆಟ್ಟ ಅಭ್ಯಾಸಗಳನ್ನು ಬಿಟ್ಟುಜವಾಬ್ದಾರಿಯಿಂದಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಹಿಂದಿನ ಸಾಮಾನ್ಯ ಸಭೆಯಲ್ಲಿ ಚರ್ಚಿಸಿದ ಠರಾವು ಹೊರಡಿಸಿದ ಬಹುತೇಕ ಕೆಲಸಗಳು ಪೂರ್ಣಗೊಂಡಿಲ್ಲ. ಇದಕ್ಕೆ ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ಆಲಸಿತನವೇ ಕಾರಣ.ಅಧಿಕಾರಿಗಳು ಚುರುಕಾಗಿಕರ್ತವ್ಯ ನಿರ್ವಹಿಸದಿದ್ದರೆಅಂತಹ ಅಧಿಕಾರಿಗಳನ್ನು ಬೇರೆಕಡೆ ವರ್ಗಾವಣೆಗೆಕ್ರಮ ಕೈಗೊಳ್ಳಲಾಗುವುದು ಎಂದುಅವರು ಎಚ್ಚರಿಸಿದರು.

ಸರ್ಕಾರಿ ಶಾಲೆಗಳಿಗೆ ಜಮೀನುದಾನ ಮಾಡಿದ ದಾನಿಗಳ ಹೆಸರನ್ನುಇಟ್ಟುಅವರಿಗೆಗೌರವ ಸಲ್ಲಿಸಿ, ಹಾಗೂ ವಿದ್ಯಾಸಿರಿ, ಪರಿಶಿಷ್ಟ ಜಾತಿ, ವರ್ಗದ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ವಸತಿ ಶಾಲೆ, ಶಿಷ್ಯವೇತನ ಸಮರ್ಪವಾಗಿಒದಗಿಸಲುಕ್ರಮ ಕೈಗೊಳ್ಳೂವಂತೆ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿ, ಕೆಲ ಶಾಲೆಗಳು ಜೀರ್ಣಾವಸ್ಥೆಯಲ್ಲಿವೆ ಶೈಕ್ಷಣಿಕ ವರ್ಷಆರಂಭವಾಗಿರುವುದರಿಂದಆದಷ್ಟು ಬೇಗ ಶಾಲೆ ದುರಸ್ತಿ ಕಾರ್ಯ ಪೂರ್ಣಗೊಳಿಸಬೇಕು. ವಸತಿ ಶಾಲೆಗಳಲ್ಲಿ ಶುದ್ಧಕುಡಿಯುವ ನೀರು ಮತ್ತು ಸ್ವಚ್ಛತೆಗೆಆದ್ಯತೆ ನೀಡಬೇಕು.ಶೈಕ್ಷಣಿಕ ವರ್ಷಆರಂಭವಾಗಿರುವುದರಿಂದ ಶಿಕ್ಷಕರ ಕೊರತೆ ಬಾರದಂತೆಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ಸಭೆಯಲ್ಲಿಜಿಲ್ಲಾ ಪಂಚಾಯತ್‍ಉಪಾಧ್ಯಕ್ಷ ಪ್ರಭುಗೌಡದೇಸಾಯಿ, ಮುಖ್ಯ ಕಾರ್ಯನಿರ್ವಹಣಾದಿಕಾರಿ ಎಂ.ಸುಂದರೇಶಬಾಬು ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
-