ಗುಡಿ-ಅತಿ ಸೂಕ್ಷ್ಮ ಕೈಗಾರಿಕೆ ಸ್ಥಾಪಿಸಲು ಸಾಲ-ಸೌಲಭ್ಯಕ್ಕಾಗಿ ಅರ್ಜಿ ಕರೆ

ಗುಡಿ-ಅತಿ ಸೂಕ್ಷ್ಮ ಕೈಗಾರಿಕೆ ಸ್ಥಾಪಿಸಲು ಸಾಲ-ಸೌಲಭ್ಯಕ್ಕಾಗಿ ಅರ್ಜಿ ಕರೆ

ವಿಜಯಪುರ ಸೆ,08: ನಗರ-ಗ್ರಾಮೀಣ ಪ್ರದೇಶಗಳಲ್ಲಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರಿಗಾಗಿ ಗುಡಿ- ಅತಿ ಸೂಕ್ಷ್ಮ ಕೈಗಾರಿಕೆಗಳನ್ನು ಸ್ಥಾಪಿಸಿ ಸ್ವಂತ ಉದ್ಯೋಗ ಕೈಗೊಳ್ಳಲು ಯೋಜನಾ ವೆಚ್ಚ ಗರಿಷ್ಠ 10 ಲಕ್ಷ ರೂ.ಗಳ ಮೊತ್ತದವರೆಗಿನ ಕೈಗಾರಿಕಾ ಸೇವಾ ಘಟಕಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. 
ಯೋಜನಾ ವೆಚ್ಚದ 10ಲಕ್ಷಕ್ಕೆ ಫಲಾನುಭವಿಯು ಶೇ.10ರಷ್ಟು ಪ್ರವರ್ತಕರ ಬಂಡವಾಳವೆಂದು ಭರಿಸಬೇಕು. ಯೋಜನಾ ವೆಚ್ಚದ ಶೇ.90ರಷ್ಟು ಹಣಕಾಸು ಸಂಸ್ಥೆಯು ಸಾಲ ಮಂಜೂರು ಮಾಡುವುದು ಮತ್ತು ಪ್ರತಿ ಯೋಜನೆಗೆ ಶೇ.60 ರಷ್ಟು ಸಹಾಯಧನ ಗರಿಷ್ಠ 50 ಸಾವಿರ ರೂ. ಮಿತಿಗೊಳಿಸಲಾಗಿದೆ. 
ಸಾಲ ಪಡೆಯಲು ಇಚ್ಛಿಸಿರುವ ನಗರ-ಗ್ರಾಮೀಣ ಅಭ್ಯರ್ಥಿಗಳು ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ ಸ್ಟೇಶನ್ ಬ್ಯಾಕ್ ರಸ್ತೆ, ಶಿಕಾರಖಾನೆ ವಿಜಯಪುರ ಈ ಕಚೇರಿಯಿಂದ ನಿಗದಿತ ನಮೂನೆ ಅರ್ಜಿ ಪಡೆದು, ಭರ್ತಿ ಮಾಡಿ ದ್ವಿಪ್ರತಿಯಲ್ಲಿ ದಿನಾಂಕ : 30-09-2017ರೊಳಗಾಗಿ ಸಲ್ಲಿಸಬೇಕು. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ದೂ: 08352-250607 ಸಂಪರ್ಕಿಸಲು ಕೋರಿದೆ.