ಸಮಾಜಮುಖಿ ಕಾರ್ಯದಿಂದ ಪ್ರಗತಿಯತ್ತ ಜ್ಯೋತಿ ಬ್ಯಾಂಕ್ : ಹೊಕ್ರಾಣಿ

ಸಮಾಜಮುಖಿ ಕಾರ್ಯದಿಂದ ಪ್ರಗತಿಯತ್ತ ಜ್ಯೋತಿ ಬ್ಯಾಂಕ್ : ಹೊಕ್ರಾಣಿ

ಬಾಗಲಕೋಟ,ಸೆ.12 : 1996ರಲ್ಲಿ ಸಾರ್ವಜನಿಕ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿ ಅನೇಕ ಗ್ರಾಹಕರ ಆಶಾಕಿರಣವಾದ ನಗರದ ಪ್ರತಿಷ್ಠಿತ ಜ್ಯೋತಿ ಕೋ-ಆಫ್ ಸೊಸೈಟಿ ತನ್ನ 21ನೇ ವಾರ್ಷಿಕ ಮಹಾಸಭೆ ಮಾಡುತ್ತಲಿದ್ದು, ಬ್ಯಾಂಕಿನ ಪ್ರಗತಿ ಎಲ್ಲ ಗ್ರಾಹಕರಿಗೆ ಹಾಗೂ ಸಿಬ್ಬಂದಿ ವರ್ಗ, ನಿರ್ದೇಶಕರಿಗೆ ಹಾಗೂ ಬ್ಯಾಂಕಿನ ಹಿತಚಿಂತಕರ ಸಹಕಾರದಿಂದ ಈ ಮಟ್ಟಕ್ಕೆ ಬೆಳೆದಿದೆ ಎಂದು ಬ್ಯಾಂಕಿನ ಅಧ್ಯಕ್ಷ ಬಿ.ಎಂ.ಹೊಕ್ರಾಣಿ ಹೇಳಿದರು.
    ಅವರು ನವನಗರದ ಜ್ಯೋತಿ ಕೋ-ಆಫ್ ಸೊಸೈಟಿಯ ಪ್ರಧಾನ ಕಚೇರಿಯ ಸಭಾಂಗಣದಲ್ಲಿ 21ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಸೊಸೈಟಿಯು ಕಾರ್ಯ ಪ್ರಾರಂಭವಾದಾಗಿನಿಂದ ರೈತರ ನಿರುದ್ಯೋಗಿ ಯುವಕರ, ಮಹಿಳೆಯರ ಹಾಗೂ ಅನೇಕ ವ್ಯಾಪಾರಿಗಳ ಆಶಾ ಕಿರಣವಾಗಿದ್ದು, ಬ್ಯಾಂಕಿನಲ್ಲಿ ವ್ಯವಹರಿಸುತ್ತಿರುವ ಇವರೆಲ್ಲ ಪ್ರಗತಿಯ ಜೀವನ ಸಾಗಿಸುತ್ತಿದ್ದಾರೆಂದರು. 
    ಬ್ಯಾಂಕ್ ಕೇವಲ ಠೇವಣಿದಾರರಿಗೆ ಮಣೆಹಾಕದೇ ಸಾಲಗಾರರನ್ನು ಅಷ್ಠೇ ಗೌರವದಿಂದ ಕಾಣುತ್ತಿದ್ದು, ಬಂದ ಗ್ರಾಹಕರಿಗೆ ಸೌಜನ್ಯದಿಂದ ವರ್ತಿಸುವ ಸಿಬ್ಬಂದಿ ಕಾರ್ಯವು ಶ್ಲಾಘನೀಯವಾಗಿದೆ ಎಂದರು. ಇವರೆಲ್ಲರ ಸಹಕಾರದಿಂದ ಬ್ಯಾಂಕ್ ಇಂದು 6483000 ಕ್ಕಿಂತಲೂ ಲಾಭದಲ್ಲಿದ್ದು, ಪ್ರಾರಂಭದಲ್ಲಿ 341 ಸದಸ್ಯರನ್ನೊಳಗೊಂಡಿದ್ದ ಸಂಘ ಈಗ 5357 ಸದಸ್ಯರನ್ನು ಹೊಂದಿದೆ ಎಂದರು.
    ಬ್ಯಾಂಕಿನ ನಿರ್ದೇಶಕರಾದ ನಿಂಗಣ್ಣ ಗೋಡಿ ಮತ್ತು ಅಶೋಕ ಲಾಗಲೋಟಿ ಮಾತನಾಡಿ ಬ್ಯಾಂಕ್ ಕೇವಲ ನಗರ ಪ್ರದೇಶಕ್ಕೆ ಸೀಮಿತವಾಗಿರದೇ ಗ್ರಾಮೀಣ ಪ್ರದೇಶದ ಜನರಿಗೂ ಪ್ರಯೋಜನವಾಗಲಿ ಎಂಬ ಉದ್ದೇಶದಿಂದ ಈಗಾಗಲೇ ಗದ್ದನಕೇರಿ ಕ್ರಾಸ್ ಹಾಗೂ ಕಮತಗಿಯಲ್ಲಿ ಶಾಖೆಯನ್ನು ಸ್ಥಾಪಿಸಲಾಗಿದೆ. ಕೆಲವೇ ದಿನಗಳಲ್ಲಿ ಸಿಕ್ಕೇರಿ ಕ್ರಾಸ್‍ನಲ್ಲಿ ಹಾಗೂ ಬದಾಮಿ ತಾಲೂಕಿನ ಕೆರೂರ ಪಟ್ಟಣದಲ್ಲಿ ಶಾಖೆಗಳನ್ನು ಸ್ಥಾಪಿಸಲಾಗುವುದೆಂದರು. ಬ್ಯಾಂಕಿನಲ್ಲಿ ಹಿರಿಯ ನಾಗರಿಕರಿಗಾಗಿ ಸ್ವಾತಂತ್ರ್ಯ ಯೋಧರಿಗಾಗಿ, ಸೈನಿಕರಾಗಿ ಅವರು ಇಡಲಾದ ಇಡಗಂಟಿಗೆ ಹೆಚ್ಚಿನ ಬಡ್ಡಿ ನೀಡಲಾಗುತ್ತಿದ್ದು, ಬ್ಯಾಂಕಿನಿಂದ ಅನೇಕ ಜನಪರ ಕಾರ್ಯಗಳನ್ನು ಹಾಗೂ ಸಾಮಾಜಿಕ ಕಾರ್ಯಗಳನ್ನು ಹಾಕಿಕೊಳ್ಳಲಾಗುತ್ತಿದೆ ಎಂದರು. 
    ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಮಲ್ಲನಗೌಡ ನಾಡಗೌಡರ, ಸಿದ್ದಣ್ಣ ಕಾಖಂಡಕಿ, ಬಾಳಪ್ಪ ಹಟ್ಟಿ, ಅಶೋಕ ತುರಮಂದಿ, ಪಾರ್ವತಿ ಜಾಗನೂರು ಉಪಸ್ಥಿತರಿದ್ದರು. ನಿವೃತ್ತ ಶಿಕ್ಷಕ ಎಂ.ಟಿ.ಕಿತ್ತಲಿ ಸ್ವಾಗತಿಸಿದರು. ಆರ್.ಆರ್.ಇಂಗಳಗಿ ವಂದಿಸಿದರು. ಶಂಕರಲಿಂಗ ದೇಸಾಯಿ ನಿರೂಪಿಸಿದರು.