ಪ್ರಥಮ ಚಿಕಿತ್ಸೆಯಲ್ಲಿ ಆಯುರ್ವೇದ ಚಿಕಿತ್ಸೆ ಇರಲಿ : ವೀಣಾ

ಪ್ರಥಮ ಚಿಕಿತ್ಸೆಯಲ್ಲಿ ಆಯುರ್ವೇದ ಚಿಕಿತ್ಸೆ ಇರಲಿ : ವೀಣಾ

ಬಾಗಲಕೋಟೆ,ಅ. 17 : ಇಂಗ್ಲೀಷ್ ಮೆಡಿಷಿನ್ ಈಗಿನಿಂದಲೇ ತೆಗೆದುಕೊಂಡರೇ ಅದಕ್ಕೆ ಹೊಂದಿಕೊಂದು ಬಿಡುತ್ತೇವೆ. ಅದÀರಿಂದ ದುಷ್ಪರಿಣಾಮಗಳು ಉಂಟಾಗುತ್ತವೆ. ಅದನ್ನು ಬಿಟ್ಟು ಪ್ರಥಮ ಚಿಕಿತ್ಸೆಗೆ ಆಯುರ್ವೇದ ಚಿಕಿತ್ಸೆಯನ್ನು ತೆಗೆದುಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಿರಿ ಎಂದು ಜಿ.ಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ ಹೇಳಿದರು.
       ನವನಗರದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಆಯುಷ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕೇರಳದಲ್ಲಿ ಆಯುರ್ವೇದ ಚಿಕಿತ್ಸೆಯು ತುಂಬಾ ಪ್ರಚಲಿತದಲ್ಲಿದೆ ಎಂದರು. 
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ಕೈಮಗ್ಗ ಅಭಿವೃದ್ದಿ ನಿಗಮದ ಅಧ್ಯಕ್ಷ ರವೀಂದ್ರ ಕಲಬುರ್ಗಿ ಮಾತನಾಡಿ ಇತಿಹಾಸ ಸೃಷ್ಠಿಸಿದ ಆಯುರ್ವೇದ ಸನಾತನ ಕಾಲದಿಂದ ಬಂದಿದ್ದು, ಇಂಗ್ಲೀಷ ಚಿಕಿತ್ಸೆ ವ್ಯಾಪಾರೀಕರಣವಾಗಿದೆ ಎಂದರು. ಬಹಳ ದಿನಗಳಿಂದ ಕಡಿಮೆ ಆಗದ ರೋಗವನ್ನು ಕೇವಲ 11 ದಿವಸದಲ್ಲಿ ಗುಣಮುಖ ಮಾಡಿದ ಆಯುರ್ವೇದದಲ್ಲಿ ತುಂಬಾ ಶಕ್ತಿ ಇದೆ. ಅದರ ಸದುಪಯೋಗ ಪಡೆಯಲು ಸೂಚ್ಯವಾಗಿ ತಿಳಿಸಿದರು.
ಇನ್ನೋರ್ವ ಮುಖ್ಯ ಅತಿಥಿಯಾಗಿ ಆಗಮಿಸಿದ ಕನ್ನಡ ಅಭಿವೃದ್ದಿ ಪ್ರಾಧಿಕಾರದ ರಾಜ್ಯ ನಿರ್ದೇಶಕ ಮಹಾಂತೇಶ ಹಟ್ಟಿ ಮಾತನಾಡಿ ಪ್ರತಿ ತಾಲೂಕಿನಲ್ಲಿ ಮತ್ತು ಹೋಬಳಿ ಮಟ್ಟದಲ್ಲಿ, ಗ್ರಾಮ ಪಂಚಾಯತ ಮಟ್ಟದಲ್ಲಿ ಆಯುರ್ವೇದ ಆಸ್ಪತ್ರೆ, ಚಿಕಿತ್ಸಾಲಯಗಳನ್ನು ಪ್ರಾರಂಭಿಸಬೇಕು. ಪ್ಯಾರಾಲಿಸಸ್ ಆದ ನಮ್ಮ ತಂದೆಯವರಿಗೆ ಆಯುರ್ವೇದ ಚಿಕಿತ್ಸೆಯಿಂದ ಗುಣಮುಖವಾಗಿದ್ದು ಆಯುರ್ವೇದ ಚಿಕಿತ್ಸೆ ಪಡೆಯಲು ತಿಳಿಸಿದರು. 
ಉಪನ್ಯಾಸ ಮಾಲಿಕೆಯಲ್ಲಿ ಡಾ. ಡಿ.ಪಿ.ಜೋಷಿ ಪ್ರಾಧ್ಯಾಪಕರು, ಬಿ.ವಿ.ವಿ.ಎಸ್ ಆಯುರ್ವೇದ ಕಾಲೇಜ, ಬಾಗಲಕೋಟ ಇವರು ನೋವು ನಿವಾರಣಾ ಪಂಚಕರ್ಮ ವಿಧಾನಗಳನ್ನು ಹೇಳಿ ನೋವನ್ನು ತಡೆಗಟ್ಟುವ ಬಗ್ಗೆ ಪ್ರಾತ್ಯಕ್ಷಿಕವಾಗಿ ತೋರಿಸುತ್ತಾ ಪಿ.ಪಿ.ಟಿ ಮೂಲಕ ಉಪನ್ಯಾಸ ನೀಡಿದರು. 2ನೇಯ ಅವಧಿಯ ಉಪನ್ಯಾಸ ಮಾಲಿಕೆಯಲ್ಲಿ ಡಾ. ಎಸ್. ಎಲ್. ಬಾಲರೆಡ್ಡಿ ಇವರು ತೀವ್ರ ನೋವು ನಿವಾರಣಾ ಚಿಕಿತ್ಸಾ ವಿಧಾನಗಳನ್ನು ಪ್ರಾತ್ಯಕ್ಷಿಕವಾಗಿ ತೋರಿಸುತ್ತಾ ಪಿ.ಪಿ.ಟಿ ಮೂಲಕ ಉಪನ್ಯಾಸ ನೀಡಿದರು. 
3ನೇಯ ಅವಧಿಯ ಉಪನ್ಯಾಸ ಮಾಲಿಕೆಯಲ್ಲಿ ಡಾ.ಬಿ.ಜಿ.ಪಾಟೀಲ ಇವರು ಮಂಡಿನೋವು, ತಲೆನೋವು, ಬೆನ್ನುನೋವು, ಕತ್ತುನೋವು, ಭುಜನೋವು ಇವುಗಳು ಹೇಗೆ ಬರುತ್ತವೆ ಮತ್ತು ಇವುಗಳನ್ನು ತಡೆಯುವ ವಿಧಾನ ಮತ್ತು ಪಂಚಕರ್ಮ ಚಿಕಿತ್ಸೆಗಳಾದ ಜಾನುಬಸ್ತಿ, ಕಟಿಬಸ್ತಿ, ಗ್ರೀವಾ ಬಸ್ತಿ, ಪರಿಷೇಕ, ಪಿಂಡಸ್ವೇದ ಇವುಗಳನ್ನು ಪ್ರಾತ್ಯಕ್ಷಿಕವಾಗಿ ಪಿ.ಪಿ.ಟಿ ಮೂಲಕ ಜನರನ್ನು ಮನರಂಜಿಸುತ್ತಾ ಸುದೀರ್ಘವಾಗಿ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎ.ಎನ್.ದೇಸಾಯಿ, ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ನಾಗರತ್ನ ಅಕ್ಕನವರು, ಡಾ.ಎಸ್.ಎಲ್.ಬಾಲರೆಡ್ಡಿ, ಡಾ. ಬಿ. ಜಿ. ಪಾಟೀಲ, ಹಿರಿಯ ವೈದ್ಯಾಧಿಕಾರಿಗಳು, ಜ್ಞಾನೇಶ್ವರಿ ಪೌಂಡೇಶನ್‍ದ ಡಾ.ಸಿದ್ದಲಿಂಗೇಶ ಕುದರಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಜಿಲ್ಲಾ ಆಯುಷ್ ಅಧಿಕಾರಿ ಸ್ವಾಗತಿಸಿದರು.